ಶಾಸಕ ಪ್ರಿಯಾಂಕ್ ಖರ್ಗೆ ಬಗ್ಗೆ ಮಾತನಾಡುವ ಯೋಗ್ಯತೆ ಅರವಿಂದ ಚವ್ಹಾಣ್ ಗೆ ಇಲ್ಲಾ: ಸಿದ್ದುಗೌಡ

0
42

ಚಿತ್ತಾಪುರ: ಮಾಜಿ ಸಚಿವರು,ಜನಪ್ರಿಯ ಶಾಸಕ ಪ್ರಿಯಾಂಕ್ ಖರ್ಗೆ ಅವರ ಬಗ್ಗೆ ಹಗುರವಾಗಿ ಮಾತನಾಡುವ ಯೋಗ್ಯತೆ ಜಿ.ಪಂ.ಸದಸ್ಯ ಅರವಿಂದ ಚವ್ಹಾಣ್ ರವರಿಗೆ ಇಲ್ಲಾ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಸಿದ್ದುಗೌಡ. ಜಿ.ಅಫಜಲಪುರಕರ ಅವರು ಅರವಿಂದ ಚವ್ಹಾಣ್ ಅವರ ಮಾತಿಗೆ ತಿರುಗೇಟು ನೀಡಿದ್ದಾರೆ.

ಶಾಸಕ ಪ್ರಿಯಾಂಕ್ ಖರ್ಗೆ ಅವರು ಕರೋನಾ ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸುದಿದ್ದಾರೆ. ಚಿತ್ತಾಪುರನಲ್ಲಿ ಜಿಲ್ಲೆಗೆ ಮಾದರಿಯಾಗುವಂತ ಕೋವಿಡ್ ಸೆಂಟರನ್ನು ಸ್ಥಾಪನೆ ಮಾಡಿ ಅದಕ್ಕೆ ಬೇಕಾಗುವ ಎಲ್ಲಾ ಸೌಕರ್ಯಗಳನ್ನು ಒದಗಿಸಿದ್ದಾರೆ.ಸರ್ಕಾರದ ಮೇಲೆ ಅವಲಂಬಿತವಾಗದೆ ಕ್ಷೇತ್ರದ ಜನರ ಆರೋಗ್ಯದ ಹಿತಾದೃಷ್ಟಿಯಿಂದ ತಮ್ಮ ಸ್ವಂತ ಖರ್ಚಿನಲ್ಲಿ 100 ಬೆಡ್ (ಹಾಸಿಗೆಗಳು) ವ್ಯವಸ್ಥೆ ಮಾಡಿ ಸುವ್ಯವಸ್ಥೆವಾದ ಕೋವಿಡ್ ಸೆಂಟರನ್ನು ಪ್ರಾರಂಭ ಮಾಡಿದ್ದಾರೆ ಎಂದು ತಿಳಿಸಿದರು.

Contact Your\'s Advertisement; 9902492681

ಕೋವಿಡ್ ರೋಗಿಗೆ ಚಿಕಿತ್ಸೆ ನೀಡಲು ಹಿಂದೇಟು: ಖಾಸಗಿ ಆಸ್ಪತ್ರೆ ವಿರುದ್ಧ ದೂರು ದಾಖಲು

ಕರೋನಾದಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾವು ಉಂಟಾಗುತ್ತಿವೆ ಎಂದು ಅರಿತ ಶಾಸಕರು ಕ್ಷೇತ್ರದ ತುಂಬಾ ತಿರುಗಾಡಿ ಜನರಲ್ಲಿ ಕರೋನಾ ಮಾಹಾಮಾರಿಯ ಬಗ್ಗೆ ಜಾಗೃತಿ ಮೂಡಿಸುವಂತ ಕೆಲಸ ನಿರಂತರವಾಗಿ ಮಾಡುತ್ತಿದ್ದಾರೆ,ಕ್ಷೇತ್ರದ ಜನತೆಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.ಜನರಲ್ಲಿ ಕರೋನಾದ ಅರಿವು ಮೂಡಿಸುವಂತಹ ಕಾರ್ಯ ನಿರಂತರವಾಗಿ ಮಾಡುತ್ತಿದ್ದಾರೆ.

ಅಲ್ಲದೆ ಕ್ಷೇತ್ರದ ಜನತೆ, ಪಕ್ಷದ ಮುಖಂಡರಿಗೂ,ತಾಲೂಕ ಪಂಚಾಯತ್,ಜಿಲ್ಲಾ ಪಂಚಾಯತ್, ಪುರಸಭೆ,ಎ.ಪಿ.ಎಮ್.ಸಿ ಚುನಾಯಿತ ಸದಸ್ಯರೊಳಗೊಂಡು ಅವರು ಇವರು ಅಂತಾ ಪಕ್ಷಭೇದ ಮರೆತು ಎಲ್ಲರೂ ಲಸಿಕೆಯನ್ನು ಹಾಕಿಕೊಳ್ಳಬೇಕು ಎಂದು ಹೇಳಿದ್ದಾರೆ.

ಆರೋಗ್ಯ ಇಲಾಖೆಯ ಸಿಬ್ಬಂದಿಗಳ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಚಿವರಿಗೆ ಮನವಿ

ಶಾಸಕ ಪ್ರಿಯಾಂಕ್ ಖರ್ಗೆ ಅವರ ಬಗ್ಗೆ ಮಾತನಾಡುವ ನೈತಿಕತೆ ಅರವಿಂದ ಚವ್ಹಾಣ್ ಅವರಿಗೆ ಇಲ್ಲಾ,ಇಂತಹ ಇಕ್ಕಟ್ಟಿನ ಸಂದರ್ಭದಲ್ಲಿ ಬಿಜೆಪಿ ಸಂಸದರು,ಶಾಸಕರು ಏನು ಮಾಡುತ್ತಿದ್ದಾರೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here