ಆಕ್ಸಿಜನ್ ಕೊರತೆ: ಸ್ಥಾಳಾಂತರ ವೇಳೆ ಮೂವರು ರೋಗಿಗಳ ಸಾವು

0
98

ಕಲಬುರಗಿ: ನಗರದ ಕೆಬಿಎನ್‌ ಆಸ್ಪತ್ರೆಯಲ್ಲಿ ಮೂವರು ಕೋವಿಡ್‌ ರೋಗಿಗಳು ಏಕಕಾಲಕ್ಕೆ ಮೃತಪಟ್ಟಿದ್ದು, ಆಕ್ಸಿಜನ್‌ ಕೊರತೆಯಿಂದ ಬೇರೆಡೆ ಸ್ಥಳಾಂತರಿಸುವ ಸಂದರ್ಭದಲ್ಲಿ ಈ ಅವಘಡ ನಡೆದಿದೆ ಎಂದು ತಿಳಿದು ಬಂದಿದೆ.

ಖಾಜಾ ಬಂದಾನವಾಜ್ ಆಸ್ಪತ್ರೆಯ ಐಸಿಯು ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳಲ್ಲಿ ಕೆಲವರು ಆಕ್ಸಿಜನ್‌ ಸಹಾಯ ಪಡೆದಿದ್ದರು. ಇನ್ನೇನು ಆಕ್ಸಿಜನ್‌ ದಾಸ್ತಾನು ಮುಗಿಯುತ್ತದೆ ಎನ್ನುವಾಗ ಆಂಬುಲೆಸನ್ಸ್‌ನಲ್ಲಿ ಬೇರೆ ಆಸ್ಪತ್ರೆಗೆ ಕರೆದೊಯ್ಯುವ ವೇಳ ಮೂವರು ಸಾವಿಗೀಡಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

Contact Your\'s Advertisement; 9902492681

ಕಾಳಸಂತೆಯಲ್ಲಿ ರೆಮಿಡಿಸಿವಿರ್ ಮಾರಾಟ ಮಾಡಿದಲ್ಲಿ ಜೈಲಿಗೆ: ಡಾ. ಕೆ. ಸುಧಾಕರ

ಈ ಕುರಿತು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ, ಜಿಲ್ಲಾ ಆರೋಗ್ಯಾಧಿಕಾರಿ ನೇತೃತ್ವದಲ್ಲಿ ತಂಡವನ್ನು ಕಳುಹಿಸಿಕೊಟ್ಟಿದ್ದೇವೆ. ಪ್ರಾಥಮಿಕ ವರದಿಗಳ ಪ್ರಕಾರ ಮೂವರು ಮೃತಪಟ್ಟಿದ್ದಾರೆ. ಆದರೆ, ಆಕ್ಸಿಜನ್‌ ಸಮಸ್ಯೆ ಇರಲಿಲ್ಲ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಮಾಹಿತಿ ನೀಡಿದ್ದಾರೆ.

ಶುಕ್ರವಾರವೇ ಬೀದರ್‌ನಿಂದ ನಾವು ಆಕ್ಸಿಜನ್‌ ಟ್ಯಾಂಕರ್‌ ತರಿಸಿಕೊಂಡಿದ್ದೆವು. ಶನಿವಾರವೂ ಆಕ್ಸಿಜನ್‌ ಸಮಸ್ಯೆ ಇರಲಿಲ್ಲ. ಆಕ್ಸಿಜನ್‌ ಅಗತ್ಯವಿದ್ದರೆ ಅವರು ಕರೆ ಮಾಡುತ್ತಿದ್ದರು. ತನಿಖೆಯ ಬಳಿಕವೇ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ ಎಂದರು.

ಆಕ್ಸಿಜನ್ ಖಾಲಿಯಾಗ್ತಿದ್ದಂತೆ ಆಸ್ಪತ್ರೆಯಿಂದ ವೈದ್ಯರು ಕಾಲ್ಕಿತ್ತಿದ್ದಾರೆ ಎನ್ನಲಾಗಿದ್ದು, ಮೃತರ ಕುಟುಂಬಸ್ಥರು ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ಧ ಕಿಡಿಕಾರುತ್ತಿರುವ ವಿಡಿಯೋ ವೈರಲ್ ಆಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here