ಲೇಖಕ ರಂಜಾನ ದರ್ಗಾ ಅವರು ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬಸನಾಳ ಗ್ರಾಮದವರು.
ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅವರ ಪ್ರಗತೀಪರ ಲೇಖಕರಾಗಿ ಗುರುತಿಸಿಕೊಂಡಿದ್ದಾರೆ. ಕಾವ್ಯ ಬಂತು ಬೀದಿಗೆ, ಹೊಕ್ಕುಳಲ್ಲಿ ಹೂವಿದೆ, ಬಸವಣ್ಣನವರ ದೇವರು, ಬಸವ ಧರ್ಮದ ವಿಶ್ವ ಸಂದೇಶ, ನಡೆ ನುಡಿ ಸಿದ್ದಾಂತ, ವಚನ ವಿವೇಕ ಸೇರಿದಂತೆ ಹಲವಾರು ಕೃತಿಗಳನ್ನ ರಚಿಸಿದ್ದಾರೆ. ಸಾಹಿತ್ಯ ಕ್ಷೇತ್ರದ ಸೇವೆಗಾಗಿ ರಾಜ್ಯೋತ್ಸವ ಪ್ರಶಸ್ತಿ, ವಚನ ಚಿಂತಕ ಪ್ರಶಸ್ತಿ, ಸಾಹಿತ್ಯ ಶ್ರೀ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ರಂಜಾನ್ ದರ್ಗಾ ಅವರಿಗೆ ಸಂದಿವೆ.
ಮನೆಯಂಗಳದಲ್ಲಿ ಮಾತುಕತೆ ಸಾಹಿತ್ಯ ರಂಜಾನ ದರ್ಗಾ ಕವಿ, ವಿಮರ್ಶಕ, ಸಾಹಿತಿ, ಉತ್ತಮ ಸಂಘಟಕ ಹಾಗೂ ಜನಪ್ರಿಯ ಪತ್ರಿಕೋದ್ಯಮಿ ಶ್ರೀ ರಂಜಾನ್ ದರ್ಗಾ ಅವರು. ಬಿಜಾಪುರದಲ್ಲಿ ೧೯೫೦ರಲ್ಲಿ ಜನಿಸಿದರು. ಶ್ರೀ ರಂಜಾನ್ ದರ್ಗಾರವರು ಕನ್ನಡದಲ್ಲಿ ಭಾಷಾವಿಜ್ಞಾನ ಹಾಗೂ ವ್ಯವಸಾಯ ಮಾರುಕಟ್ಟೆ ಆಡಳಿತ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆದು ಸುದ್ಧಿ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಬರಹಗಾರರಾಗಿ ಆರಂಭದಿಂದಲೂ ದಲಿತ ಬಂಡಾಯ ಸಾಹಿತ್ಯ ಪ್ರಕಾರದಲ್ಲಿ ಅಭಿವ್ಯಕ್ತಿಸುತ್ತಿರುವ ಶ್ರೀ ರಂಜಾನ್ ದರ್ಗಾರವರು ಕಾವ್ಯ ಬಂತು ಬೀದಿಗೆ, ಹೊಕ್ಕುಳಲ್ಲಿ ಹೂವಿದೆ ಎಂಬ ಕವನಸಂಕಲನಗಳು, ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ಬಸವಪ್ರಜ್ಞೆ, ಬಸವಣ್ಣನವರ ದೇವರು, ಬಸವಧರ್ಮದ ವಿಶ್ವಸಂದೇಶ- ಲೇಖನಗಳ ಸಂಗ್ರಹ; ನೆಲ್ಸನ್ ಮಂಡೇಲ, ಸಜ್ಜಾದ್ ಜಾಹೀರ್-ಜೀವನ ಚರಿತ್ರೆ; ಮುಸ್ಲಿಂ ಮಹಿಳೆಯರ ಸಮಸ್ಯೆಗಳು ಕುರಿತ ಲೇಖನ ಸಂಗ್ರಹ ‘ತಲಾಖ್ ಕೊಟ್ಟರೆ ಬಾರೇಟು ಶಿಕ್ಷೆ’ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ.
ಸ.ರಂ.ಎಕ್ಕುಂಡಿ ಅವರ ಲೇಖನಗಳನ್ನು ‘ಪಂಚುಗಳು’ ಎಂಬ ಹೆಸರಿನಲ್ಲಿ ಸಂಗ್ರಹಿಸಿದ್ದಾರೆ.ಇತರರ ಜೊತೆ ಸೇರಿ ‘ಬಂಡಾಯ ಕಥೆಗಳು’ ಹಾಗೂ ‘ಶತಮಾನದ ಬಾಯಾರಿಕೆ’-ಕವಿತೆಗಳ ಸಂಗ್ರಹ ಮಾಡಿದ್ದಾರೆ. ನಾಟಿವೈದ್ಯರನ್ನು ಕುರಿತು ‘ನಾಟಿ ವೈದ್ಯ’ ಪುಸ್ತಕ ರಚಿಸಿದ್ದಾರೆ. ಶ್ರೀಯುತ ದರ್ಗಾ ಅವರ ಕೃತಿಗಳಿಗೆ ಮಠಮಾನ್ಯಗಳಿಂದ ಪ್ರಶಸ್ತಿಗಳಲ್ಲದೆ, ಬೆಂಗಳೂರು ಬಸವ ವೇದಿಕೆಯಿಂದ ‘ಬಸವ ಶ್ರೀ’ ಪ್ರಶಸ್ತಿ, ಯುನೈಟೆಡ್ ಗೇಮ್ಸ್ ಆಫ್ ನೇಷನ್ಸ್ ಇಂಟರ್ನ್ಯಾಷನಲ್ ಹಾಗೂ ಜನೋತ್ಸವ ಸಂಘಟನೆಗಳಿಂದ ಜಂಟಿಯಾಗಿ ‘ಬಾರನ್ ಫ್ರೀ’ ಪ್ರಶಸ್ತಿ, ಚಿತ್ರದುರ್ಗದ ಬೃಹನ್ ಮಠದಿಂದ ‘ಜಯದೇವ ಶ್ರೀ’ ಪ್ರಶಸ್ತಿಗಳು ಬಂದಿವೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯತ್ವವೂ ಸೇರಿದಂತೆ ಬಂಡಾಯ ಸಾಹಿತ್ಯ ಸಂಘಟನೆ, ಚಲನಚಿತ್ರ ಆಯ್ಕೆ ಸಮಿತಿ, ಕೋಮು ಸೌಹಾರ್ದ ಸಲಹಾ ಸಮಿತಿ, ಹಂಪಿಯ ಕನ್ನಡ ಹಾಗೂ ಬೆಂಗಳೂರು ವಿಶ್ವವಿದ್ಯಾಲಯಗಳಲ್ಲಿ ಸಿಂಡಿಕೇಟ್ ಹಾಗೂ ಪ್ರಸಾರಾಂಗ ವಿಭಾಗ, ದೂರದರ್ಶನಕ್ಕೆ ಕಥೆಗಳ ಆಯ್ಕೆ ಸಮಿತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇತ್ಯಾದಿ ಸಂಘ ಸಂಸ್ಥೆಗಳಲ್ಲಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.
ರಷ್ಯಾ, ಬೈಲೋ ರಷ್ಯಾ, ಉಚ್ಚೆಕಿಸ್ಥಾನ್, ನೆದರ್ಲ್ಯಾಂಡ್ಸ್, ಫ್ರಾನ್ಸ್ ಲೆಬನಾನ್ ದೇಶಗಳಲ್ಲಿ ಶಾಂತಿ, ಸಂಸ್ಕೃತಿ, ಸಾಮಾಜಿಕ ಸಮಸ್ಯೆ ಕುರಿತಂತೆ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ಪ್ರಬಂಧಗಳನ್ನು ಮಂಡಿಸಿದ್ದಾರೆ.
ಶ್ರೀಯುತರ ಸಾಧನೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ ೨೦೦೫ರಲ್ಲಿ ರಾಜ್ಯ ಪ್ರಶಸ್ತಿಯನ್ನು ನೀತಿ ಗೌರವಿಸಿದೆ.
ಬಸವ ಧರ್ಮ ಜನರ ನಡುವೆ ಹುಟ್ಟಿದ್ದು ಎನ್ನತ್ತಾರೆ ರಂಜಾನ ದರ್ಗಾ ಬಸವ ಧರ್ಮ ಜನರ ನಡುವೆ ಸೃಷ್ಟಿಯಾದ ಧರ್ಮ. ಸಾಮಾನ್ಯ ಜನರ ಅನುಭವವೇ ವಚನಗಳಾಗಿ ಇಲ್ಲಿ ದಾಖಲಾದವು ಎಂದು ಚಿಂತಕ ಡಾ.ರಂಜಾನ್ ದರ್ಗಾ ಅವರ ಅಭಿ್ರಾಭಿಪ್ರಾಯವಾಗಿದೆ. ಬಸವ ಧರ್ಮ ಜನರ ನಡುವೆ ಸೃಷ್ಟಿಯಾದ ಧರ್ಮ ಸಾಮಾನ್ಯ ಜನರ ಅನುಭವವೇ ವಚನಗಳಾಗಿ ಇಲ್ಲಿ ದಾಖಲಾದವು. ಎಂಬುದು ಅವರ ಅಭಿಪ್ರಾಯಗಿದೆ.ಬಸವ ಧರ್ಮ ಜನರ ನಡುವೆ ಹುಟ್ಟಿದ್ದು ಹೀಗೆಯೇ ಎಂಬುದು ರಂಜಾನ್ ದರ್ಗಾ ಅವರ ಅವರ ಅಭಿಪ್ರಾಯವಾಗಿದೆ.
”ಕೆಲವು ಧರ್ಮ ಗುಹೆ ಅಥವಾ ಹಿಮಾಲಯದಲ್ಲಿ ಹುಟ್ಟಿರಬಹುದು. ಆದರೆ, ಬಸವ ಧರ್ಮ ಜನರ ನಡುವೇ ಸೃಷ್ಟಿಯಾಯಿತು.ಬಾಯಿಂದ ಬಾಯಿಗೆ ವಚನ ತಲುಪಿತು. ಸಾಮಾನ್ಯ ಜನರ ಬದುಕೇ ವಚನ ರೂಪ ಪಡೆದುಕೊಂಡಿತು. ಪ್ರಪಂಚಕ್ಕೆ ಮೊಟ್ಟ ಮೊದಲು ಪಾರ್ಲಿಮೆಂಟ್ ಅನ್ನು ಬಸವಣ್ಣನವರು ಕೊಟ್ಟಿದ್ದರು.
ನವ ಸಾಕ್ಷರರನ್ನು ಸೃಷ್ಟಿಸಿದ ಹೆಗ್ಗಳಿಕೆ ಅವರಿಗಿದೆ. ಸಾಕಷ್ಟು ಜನ ಅನಕ್ಷರಸ್ಥರಾದರೂ ಅವರಿಗೆ ಶಿಕ್ಷಣ ನೀಡಿ ವಚನ ಸಾಹಿತ್ಯ ಸೃಷ್ಟಿ ಮಾಡಲಾಯಿತು. ಇದರಿಂದ ಎಲ್ಲಾ ಕಾಲಕ್ಕೂ ಸಲ್ಲುವ ಶ್ರೇಷ್ಠ ವಚನ ರಚನೆಯಾಯಿತು,” ಎಂಬುದು ಅವರ ಅಭಿಪ್ರಾಯವಾಗಿದೆ.
”ಜಗತ್ತಿನ ಕೆಲವು ಧರ್ಮಗಳು ಬಹುದೇವರನ್ನು ಆರಾಧನೆ ಮಾಡುತ್ತವೆ. ಬೌದ್ಧ ಧರ್ಮ ದೇವರ ಆರಾಧನೆ ಬಗ್ಗೆ ಏನು ಹೇಳಲಿಲ್ಲ. ಸಿಖ್ ಮತ್ತು ಬಸವ ಧರ್ಮ ಮಾತ್ರವೇ ಏಕದೇವೋಪಾಸನೆಯನ್ನು ಜಗತ್ತಿಗೆ ನೀಡಿದವು. ನವ ಸಮಾಜದ ಮಾದರಿ ಕಲ್ಪನೆಯನ್ನು ನೀಡಿದವರೇ ಬಸವಣ್ಣನವರು. ಜಗತ್ತಿನಲ್ಲೇ ಮೊದಲು ಸಾಮಾಜಿಕ ನಿಧಿಯನ್ನು 12 ನೇ ಶತಮಾನದಲ್ಲಿ ಶುರು ಮಾಡಲಾಯಿತು. ಅದಕ್ಕೆ ಶಿವ ನಿಧಿ ಎಂದು ಹೆಸರು ಇಡಲಾಗಿತ್ತು. ಹಾಗಾಗಿ ಬಸವಣ್ಣನವರು ಶ್ರೇಷ್ಠ ಅರ್ಥಶಾಸ್ತ್ರಜ್ಞರು,” ಹೌದು ಎಂಬುದು ರಂಜಾನ್ ದರ್ಗಾ ಅವರ ಅಭಿಪ್ರಾಯವಾಗಿದೆ.
ಬದುಕಿನ ವಿಧಾನ: 12ನೇ ಶತಮಾನದಲ್ಲೇ ಬಸವಣ್ಣನವರು 770 ಜನರನ್ನೊಳಗೊಂಡ ಬೃಹತ್ ಪಾಲಿರ್ಮೆಂಟ್ ರಚನೆ ಮಾಡಲಾಗಿತ್ತು. ಇಂದಿನ ಪಾರ್ಲಿಮೆಂಟ್ ಕೂಡ ಇಷ್ಟು ದೊಡ್ಡದಾಗಿಲ್ಲ. ಅಲ್ಲದೇ, 7 ಜನ ಗಣಾಧೀಶರು ಇದ್ದರು.
ಇದರಲ್ಲಿ ಇಬ್ಬರು ಮಹಿಳೆಯರು ಎಂಬುದು ವಿಶೇಷ. ಮೂಢನಂಬಿಕೆಗಳಿಗೆ ಜನ ಇಂದು ಹೆಚ್ಚು ಹಣ ಖರ್ಚು ಮಾಡುತ್ತಿದ್ದಾರೆ. ಬಸವಣ್ಣನವರು ವಚನಕಾರರು ಮಾತ್ರ ಆಗಿರಲಿಲ್ಲ. ಪರಿಸರವಾದಿ, ನ್ಯಾಯವಾದಿ, ವ್ಯಕ್ತಿತ್ವ ವಿಕಾಸಕರಾಗಿಯೂ ಇದ್ದರು. ಬಸವ ತತ್ತ್ವ ಚಿಂತನಾಕ್ರಮ ಹಾಗೂ ಬದುಕಿನ ವಿಧಾನ. ಯಾವುದೇ ಧರ್ಮದವರಾದರೋ ಇದನ್ನು ಪಾಲಿಸಬಹುದು. ಅನುಭವವಿಲ್ಲದೆ ಆನುಭಾವ ಸೃಷ್ಟಿಯಾಗಲು ಸಾಧ್ಯವಿಲ್ಲ,” ಎಂಬುದು ರಂಜಾನ ದರ್ಗಾ ಅವರ ಅಭಿಪ್ರಾಯ ಪಾಭಿಪ್ರಾಯವಾಗಿದೆ.