ಸುರಪುರ: ತಾಲೂಕಿನಲ್ಲಿಯ ರೈತರು ಭತ್ತ ಖರಿದಿ ಇಲ್ಲದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು ಕೂಡಲೇ ಭತ್ತ ಖರಿದಿ ಕೇಂದ್ರ ಆರಂಭಿಸುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕ್ರಾಂತಿ ಕಾರಿ ಬಣದ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಒತ್ತಾಯಿಸಿದರು.
ಈ ಕುರಿತು ಮಾತನಾಡಿದ ಅವರು,ಯಾದಗಿರಿ ಜಿಲ್ಲೆಯ ರೈತರು ಅತೀ ಹೆಚ್ಚು ಬೆಳೆಯುವ ಭತ್ತದ ಬೆಳೆಗೆ ಈಗ ಖರಿದಿ ಇಲ್ಲದೆ ರೈತರು ಕಂಗಾಲಾಗಿದ್ದಾರೆ.ಪ್ರತಿವರ್ಷ ಭತ್ತ ಖರಿದಿ ಮಾಡುತ್ತಿದ್ದ ಸರಕಾರ ಈಗ ರೈತರ ನೆರವಿಗೆ ಬಾರದೆ ಸಂಕಷ್ಟಕ್ಕೆ ದೂಡಿದೆ.ಆದ್ದರಿಂದ ರೈತರು ನೆಮ್ಮದಿಯಾಗಿರಬೇಕಾದರೆ ಅವರಿಗೆ ಸರಕಾರದ ನೆರವು ತುಂಬಾ ಮುಖ್ಯವಾಗಿದೆ. ಕೂಡಲೆ ಭತ್ತ ಖರಿದಿ ಮಾಡುವಂತೆ ಒತ್ತಾಯಿಸಿದರು.
ಜಿಲ್ಲೆಯಾದ್ಯಂತ ಪ್ರತಿ ತಾಲೂಕಿನಲ್ಲಿ ಹತ್ತರಿಂದ ಹದಿನೈದು ಖರಿದಿ ಕೇಂದ್ರಗಳನ್ನು ಆರಂಭಿಸಬೇಕು,ಅಲ್ಲದೆ ಪ್ರತಿ ಕ್ವಿಂಟಾಲ್ ಭತ್ತಕ್ಕೆ ಕನಿಷ್ಟ ಎಡರು ಸಾವಿರ ರೂಪಾಯಿಗಳ ದರ ನಿಗದಿ ಮಾಡಬೇಕು ಅಂದಾಗ ರೈತರು ಸ್ವಲ್ಪ ಚೇತರಿಸಿಕೊಳ್ಳಲು ಸಾಧ್ಯವಿದೆ.ಇಲ್ಲವಾದಲ್ಲಿ ರೈತರಿಗೆ ಸಾವೇ ಗತಿ ಎನ್ನುವ ಪರಸ್ಥಿತಿ ನಿರ್ಮಾಣವಾಗಲಿದೆ.ಆದ್ದರಿಂದ ಜಿಲ್ಲಾಧಿಕಾರಿಗಳು ಕೂಡಲೇ ಭತ್ತ ಖರಿದಿ ಕೇಂದ್ರಗಳನ್ನು ಆರಂಭಿಸುವಂತೆ ಒತ್ತಾಯಿಸಿದರು.ಈ ಸಂದರ್ಭದಲ್ಲಿ ಮುಖಂಡ ಮಾನಪ್ಪ ಬಿಜಾಸಪುರ ಸೇರಿದಂತೆ ಇತರರಿದ್ದರು.