ನೆರವು ಕಟ್ಟಡ ಅಸಂಘಟಿತ ಕಾರ್ಮಿಕರ ಸಂಘ ಆಹಾರ ಮಾಸ್ಕ್ ವಿತರಣೆ

0
64

ಸುರಪುರ: ನೆರವು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಘದ ವತಿಯಿಂದ ನಗರದಲ್ಲಿ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರಿಗೆ ಅನ್ನ ನೀರು ಮತ್ತು ಮಾಸ್ಕ್ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಪ್ರಕಾಶಪ್ಪ ಮಾತನಾಡಿ,ಈಗ ರಾಜ್ಯದಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು ತಾವೆಲ್ಲ ಕಟ್ಟಡ ಕಾರ್ಮಿಕರು ತುಂಬಾ ಜಾಗರೂಕತೆಯಿಂದ ಕೆಲಸದಲ್ಲಿ ತೊಡಗುವಂತೆ ಕರೆ ನೀಡಿದರು.

Contact Your\'s Advertisement; 9902492681

ಅಬಕಾರಿ ದಾಳಿ: 1.5 ಲಕ್ಷ ಮೌಲ್ಯದ ಸ್ವದೇಶಿ ಮದ್ಯ ಜಪ್ತಿ

ಅಲ್ಲದೆ ಸದಾಕಾಲ ಮಾಸ್ಕ್ ಧರಿಸುವು ಜೊತೆಗೆ ಆಗಾಗ ನಿಮ್ಮ ಕೈಗಳನ್ನು ತೊಳೆಯುತ್ತಿರುವಂತೆ ಸಲಹೆ ನೀಡಿದರು ಹಾಗು ಬಿಸಿಲಿನ ತಾಪಮಾನ ಹೆಚ್ಚಾಗಿದ್ದು ಇಡೀ ದಿನ ಕಾರ್ಮಿಕರು ಕೆಲಸ ಮಾಡಲು ತೀವ್ರ ಬಳಲಿಕೆ ಉಂಟಾಗಲಿದೆ.ಆದ್ದರಿಂದ ಕಾರ್ಮಿಕರ ಹಿತದೃಷ್ಟಿಯಿಂದ ಮಾಲೀಕರುಗಳು ಬೆಳಿಗ್ಗೆ ೮ ಗಂಟೆಯಿಂದ ಮದ್ಹ್ಯಾನ ೨ ಗಂಟೆಯ ವರೆಗೆ ಕೆಲಸದಲ್ಲಿ ತೊಡಗಿಸಿಕೊಂಡು ನಂತರ ಕಾರ್ಮಿಕರಿಗೆ ಬಿಡುವಂತೆ ಮನವಿ ಮಾಡಿದ್ದಾರೆ.

ನಂತರ ನಗರದ ವಿವಿಧ ಕಡೆಗಳಲ್ಲಿ ಕೆಲಸದಲ್ಲಿ ತೊಡಗಿದ್ದ ಕಾರ್ಮಿಕರ ಬಳಿಯಲ್ಲಿ ತೆರಳಿ ಅನ್ನ ನೀರಿನ ಪಾಕೇಟ್ ಹಾಗು ಮಾಸ್ಕ್ ಸ್ಯಾನಿಟೈಜರ್ ವಿತರಣೆ ಮಾಡಿದರು.ಈ ಸಂದರ್ಭದಲ್ಲಿ ಸಂಘದ ತಾಲೂಕು ಘಟಕದ ಪದಾಧಿಕಾರಿಗಳಾದ ತಿಪ್ಪಣ್ಣ ಪಾಟೀಲ್ ಭೀಮರಾಯ ಹುಲಕಲ್ ಮರೆಪ್ಪ ನಾಯಕ ಗೋಪಾಲ ನಾಯಕ ಶರಬಣ್ಣ ನಾಯಕ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here