ಸರಕಾರದ ಸೌಲಭ್ಯಗಳನ್ನು ಸರಿಯಾದ ಸಮಯಕ್ಕೆ ಜನರಿಗೆ ತಲುಪಿಸಿ: ರಾಜುಗೌಡ ಖಡಕ ಎಚ್ಚರಿಕೆ

0
36

ಸುರಪುರ: ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಸರಿಯಾದ ಸಮಯಕ್ಕೆ ಜನರಿಗೆ ತಲುಪಸಿಬೇಕು ಎಂದು ಅಧಿಕಾರಿಗಳಿಗೆ ಶಾಸಕ ರಾಜುಗೌಡ ಕಡಕ್ಕಾಗಿ ಎಚ್ಚರಿಸಿದರು.

ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ತಾಲೂಕಿನಲ್ಲಿ ಸರಕರಾದ ಜಮೀನುಗಳು ಸಾಕಷ್ಟಿದೆ ಅವುಗಳನ್ನು ಬಳಸಿಕೊಂಡು ಅರಣ್ಯ ಇಲಾಖೆಯ ಸಿಬ್ಬಂದಿಗಳು ಮರಗಳನ್ನು ಬೆಳಸುವ ಕಾರ್ಯಕ್ಕೆ ಮುಂದಾಗಬೇಕು ಅಂತಯೇ ಸರಕಾರಿ ಶಾಲೆ ಮತ್ತು ಕಚೇರಿ ಹಾಗೂ ಗ್ರಾಮಪಂಚಾಯತಿ ಕಚೇರಿ ಆವರಣದಲ್ಲಿ ಗಿಡಗಳನ್ನು ಬೆಳಸಲು ಪ್ರೇರೆಪಿಸಬೇಕು ಎಂದು ಹೇಳಿದರು.

Contact Your\'s Advertisement; 9902492681

ಇನ್ನು ಗ್ರಾಮೀಣ ನೀರು ಸರಬಾರಜು ಇಲಾಖೆಯವರು ಕುಡಿಯುವ ನೀರನ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುವ ನಿಟ್ಟಿನಲ್ಲಿ ಕ್ರಮಕೈಗೊಳ್ಲಬೇಕು ಅವಶ್ಯಕತೆ ಬಿದ್ದಲ್ಲಿ ಟ್ಯಾಂಕರ್ ಮುಖಾಂತರ ನೀರುಗಳನ್ನು ಸರಬರಾಜು ಮಾಡಬೇಕು ಮತ್ತು ನೀರಿನ ಸಮಸ್ಯಗಳಿದ್ದಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಿ ಎಂದು ಸೂಚಿಸಿದರು ಒಂದು ವೇಳೆ ಯಾವುದೆ ಪಿಡಿಓ ನೀರಿನ ಸಮಸ್ಯೆಗೆ ಸ್ಪಂದಿಸದೆ ಇದ್ದಲ್ಲಿ ಅವರ ಮೇಲೆ ನಿರ್ಧಾಕ್ಷಣ್ಯವಾಗಿ ಕ್ರಮ ಜರುಗಿಸಿ ಎಂದು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು.

ಇನ್ನೂ ತಾಲೂಕಿಗೆ ಕಸ್ತೂರುಬಾ ಶಾಲೆಗಳು ಅವಶ್ಯಕತೆ ಇದೆ ಹೊಸದಾಗಿ ಶಾಲೆಗಳನ್ನು ತೆಗೆಯಲು ಪ್ರಸ್ತಾವನೆಯನ್ನು ಕಳುಸಿಕೊಡಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು ಇನ್ನು ಲೋಕೋಪಯೋಗಿ ಇಲಾಖೆ ಹಾಗೂ ಪಂಚಾಯತರಾಜ ಇಲಾಖೆಯಿಂದ ನಡೆಸುವ ಕಾಮಗಾರಿಗಳು ಬಹುತೇಕ ಗುತ್ತಿಗೆದಾರರು ಹಣವನ್ನು ಲೂಟಿಮಾಡಲು ಶೇ.೩೦ರಷ್ಟು ಲೇಸ್‌ನಲ್ಲಿ ಕಾಮಗಾರಿಯನ್ನು ಗುತ್ತಿಗೆ ಪಡೆಯುತ್ತಾರೆ ಅತಂಹ ಕಾಮಗಾರಿಗಳನ್ನು ಅಭಿಯಂತರರು ಖುದ್ಧಾಗಿ ಪರಿಶೀಲಿಸಿ ವರದಿ ನೀಡಿ ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸುವವರೆಗೆ ಅನುದಾನವನ್ನು ಬಿಡುಗಡೆ ಮಾಡಬಾರದು ಎಂದು ತಾಕಿತು ಮಾಡಿದರು.

ತಾಲೂಕಿನ ಬಹುತೇಕ ಶಿಕ್ಷಕರು ಶಾಲೆಯಲ್ಲಿ ಪಾಠಮಾಡುವುದನ್ನು ಬಿಟ್ಟು ರಾಜಕೀಯ ಮಾಡುತ್ತಾರೆ ಅತಂಹವರಿಗೆ ತಕ್ಕಪಾಠ ಕಲಿಸುವಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮುಂದಾಗುತ್ತಿಲ್ಲ ತಕ್ಷಣವೆ ಅತಂಹ ಶಿಕ್ಷಕರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಿ ಮತ್ತು ಪ್ರತಿಯೊಬ್ಬ ಶಿಕ್ಷಕರೂ ಕೂಡಾ ಮೂದಲು ಶಾಲೆಗೆ ಹೋಗಿ ಪಾಠ ಮಾಡಲು ಕ್ರಮವಹಿಸಿಬೇಕು ಮತ್ತು ಈ ಬಾರಿ ಎಸ್.ಎಸ್.ಎಲ್.ಸಿಯಲ್ಲು ಪ್ರತಿ ವಿದ್ಯಾರ್ಥಿಗಳು ಉತ್ತಮ ಅಂಕಪಡೆಯುವಲ್ಲಿ ಅಗತ್ಯ ಕ್ರಮ ಕೈಗೊಳ್ಳಿ ತಾಲೂಕಿನ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ನನ್ನಿಂದಾಗು ಸಹಾಯ ನಾನು ಮಾಡುತ್ತೇನೆ ಎಂದರು.

ಸಭೆಯಲ್ಲಿ ತಾಲೂಕು ಪಂಚಾಯತ ಅಧ್ಯಕ್ಷ ಅನುಸೂಬಾಯಿ ತಿರುಪತಿ ಚವ್ಹಾಣ, ಕಾರ್ಯನಿರ್ವಾಹಕ ಅಧಿಕಾರಿ ಜಗದೇವಪ್ಪ, ಅಧಿಕಾರಿಗಳಾದ ಕುಮುಲಯ್ಯ, ವೈದ್ಯಾಧಿಕಾರಿ ಡಾ.ವೆಂಕಟಪ್ಪ ನಾಯಕ, ಶಾಂತರೆಡ್ಡಿ, ಸಂತೋಶ ದರಬಾರಿ, ಅಮರೇಶ ಕುಂಬಾರ, ಮೌನೇಶ ಕುಂಬಾರ, ಹಣಮಂತಪ್ಪ ಅಂಬ್ಲಿ ಸೇರಿದಂತೆ ಇನ್ನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here