ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿ: ಶಾಸಕ ರಾಜುಗೌಡ ತಾಕಿತು

0
47

ಸುರಪುರ: ನಗರಕ್ಕಿರುವ ನೀರಿನ ಸಮಸ್ಯೆಯು ವ್ಯಾಪಕವಾಗಿದೆ ಈ ಸಮಸ್ಯ ಕುರಿತು ಹಲವುಬಾರಿ ಅಧಿಕಾರಿಗಳಿಗೆ ಹೇಳಿದರು ಸಹ ಸರಿಯಾಗಿ ಜನರಿಗೆ ಸ್ಪಂದಿಸುತ್ತಿಲ್ಲವೆಂಬ ಆರೋಪವಿದೆ ನಗರಕ್ಕೆ ನೀರು ಕಲ್ಪಸಲು ಸಾಖಷ್ಟು ಅನುದಾನವಿದ್ದರು ಅನುದಾನವನ್ನು ಬಳಕೆಮಾಡಿಕೊಳ್ಳುವಲ್ಲಿ ಅಧಿಕಾರಿಗಳು ನಿರ್ಲಕ್ಷ ವಹಸಿದ್ದಾರೆ. ಆನರು ನೀರಿನ ತೊಂದರೆಯಿಂದ ಬಳಲುತಿದ್ದು ತಕ್ಷಣವೆ ಅಧಿಕಾರಿಗಳು ಎಚ್ಚತ್ತು ಸೂಕ್ತ ಪರಿಹಾರ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಕ್ಲಾಸ ತೆಗೆದುಕೊಂಡರು.

ನಗರಸಭೆ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯ ಅಧ್ಯಕ್ಷತೆ ವಹಸಿ ಮಾತನಾಡಿದ ಅವರು ನೀರಿನ ಬವಣೆಯನ್ನು ನೀಗಿಸಲು ಸಾಕಷ್ದಟು ಅನುದಾನವಿದೆ ಹಾಗೂ ನಗರದಲ್ಲಿ ಹಲವು ಬಾವಿಗಳಿವೆ ಅವುಗಳನ್ನು ಉಪಯೋಗಿಸಿಕೊಂಡು ನೀರಿನ ಸಮಸ್ಯೆಯನ್ನು ಬಗೆಹರಿಸಬಹುದು ಈ ನಿಟ್ಟಿನಲ್ಲಿ ಅಧಿಕಾರಿಗಳು ಆಲೋಚಿಸಿ ಮತ್ತು ಯಾವ ವಾರ್ಡಗಳಲ್ಲಿ ಏರಡು ದಿನಗಳಮೇಲೆ ನೀರು ಪೂರೈಸಲು ಆಗುವುದಿಲ್ಲವೊ ಅತಂಹ ವಾರ್ಡುಗಳ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಿ ಎಂದರು.

Contact Your\'s Advertisement; 9902492681

ಇನ್ನು ನಗರೊತ್ಥಾನ ಯೋಜನೆ ಅಡಿಯಲ್ಲಿ ನಡೆಯುತ್ತಿರುವ ಸಿಸಿರಸ್ತೆಗಳ ಕಾಮಗಾರಿಯನ್ನು ಮೂದಲು ಪರಿಶೀಲಿಸಿ ಕಾಮಗಾರಿಗಳನ್ನು ಸರಿಯಾದ ರೀತಿಯಲ್ಲಿ ಗುತ್ತಿಗಾದರರು ಮಾಡುವಂತೆ ಕ್ರಮಕೈಗೊಳ್ಳಿ ಹಾಗೂ ಪ್ರತಿ ವಾರ್ಡಗಳಲ್ಲಿ ಬೀದಿ ದೀಪಾ ಹಾಗೂ ಪ್ರಮುಖವಾಗಿ ಕುಡಿಯುವ ನೀರಿನ ಸಮಸ್ಯ ಇವಗಳನ್ನು ಗಂಭೀರವಾಗಿ ತೆಗೆದುಕೊಂಡು ಕೆಲಸ ನಿರ್ವಹಸಿ ಇಲ್ಲವಾದರೆ ಎಲ್ಲಾದರು ವರ್ಗಾವಣೆತೆಗೆದುಕೊಂಡು ಹೋಗಿ ಎಂದು ಅಧಿಕಾರಿಗಳಿಗೆ ಖಡಕ್ಕಾಗಿ ಎಚ್ಚರಿಸಿದರು.

ಇನ್ನು ರಂಗಂಪೇಟ ವ್ಯಾಪ್ತಿಯಲ್ಲಿ ಬರುವ ಕೆಲವು ವಾರ್ಡಗಳ್ಲಿ ರಸ್ತೆಯ ಅಗಲಿಕರಣದ ಸಮಸ್ಯ ಇದೆ ಈ ಸಮಸ್ಯಗೆ ಅಲ್ಲಿಯ ನಗರಸಭೆ ಸದಸ್ಯರು ಹಾಗೂ ಮುಖಂಡರು ಮತ್ತು ಅಧಿಕಾರಿಗಳು ಎಲ್ಲರೂ ಸೇರಿ ಚರ್ಚಸಿ ಎಷ್ಟು ಅಗಲಿಕರಣ ಮಾಡುವ ಬಗ್ಗೆ ಒಂದು ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ ಜನರಿಗೆ ತೊಂದರೆಯಾಗದ ರೀತಿಯಲ್ಲಿ ರಸ್ತೆಯನ್ನು ಅಗಲಿಕರಣಗೋಳಿಸಬೇಕು ಎಂದು ಮನವಿಮಾಡೋಣ ಎಂದರು.

ಪೌರಾಯುಕ್ತ ಎಜಾಜ ಹುಸೇನ್, ನಗರಸಭೆ ಸದಸ್ಯರುಗಳಾದ ವೇಣುಮಾಧವ ನಾಯಕ, ರಾಜಾ ಪಿಡ್ಡನಾಯಕ, ಜುಮ್ಮಣ್ಣ, ಅಹ್ಮದ ಷರೀಫ, ನರಸಿಂಹ ಪಂಚಮಗಿರಿ, ಮಲ್ಲಿಕಾರ್ಜುನ, ಸಿದ್ರಾಮ ಎಲಿಗಾರ, ಗಾಳೆಪ್ಪ, ಮಹೆಬೂಬ, ಶಿವುಕುಮಾರ, ವಿಷ್ಣುಗುತ್ತೆದಾರ, ಮಾನಪ್ಪ ಚಳ್ಳಿಗಿಡ ಸೇರಿದಂತೆ ಇನ್ನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here