ಶಹಾಬಾದ: ನಗರಸಭೆಯಿಂದ ನಗರದ ಪ್ರಮುಖ ಸ್ಥಳಗಳಲ್ಲಿ ಸ್ಯಾನಿಟೈಸರಿಂಗ್

0
40

ಶಹಾಬಾದ: ನಗರದ ಮುಖ್ಯ ರಸ್ತೆ ಹಾಗೂ ಜನನಿ ಬೀಡು ಪ್ರದೇಶಗಳಲ್ಲಿ ಕೊರೊನಾ ಸೊಂಕು ಹರಡದಂತೆ ನಗರಸಭೆಯಿಂದ ಸ್ಯಾನಿಟೈಜರ್ ಮಾಡಲು ನಗರಸಭೆಯಿಂದ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಚಾಲನೆ ನೀಡಿ ಮಾತನಾಡಿದ ಅಂಜಲಿ ಗಿರೀಶ ಕಂಬಾನೂರ, ಯಾವುದೇ ಕಾರಣಕ್ಕೂ ಸಾರ್ವಜನಿಕರು ಭಯಪಡುವ ಅವಶ್ಯಕತೆಯಿಲ್ಲ. ನಗರಸಭೆಯಿಂದ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೆವೆ.ಅಲ್ಲದೇ ಸಾರ್ವಜನಿಕರು ಹೊರಗಡೆ ಬರದೇ ಮನೆಯಲ್ಲಿದ್ದರೇ ಸಾಕು. ಅದುವೇ ಕರೊನಾ ವೈರಸ್‌ಗೆ ದೊಡ್ಡ ಮದ್ದು. ಅನಾವಶ್ಯಕವಾಗಿ ಹೊರಗಡೆ ಬಾರದೇ ಕುಟುಂಬದ ಸದಸ್ಯರೊಂದಿಗೆ ಹಾಯಾಗಿ ಇರಿ ಎಂದು ಹೇಳಿದರು.

Contact Your\'s Advertisement; 9902492681

ಅಬಕಾರಿ ದಾಳಿ: 1.5 ಲಕ್ಷ ಮೌಲ್ಯದ ಸ್ವದೇಶಿ ಮದ್ಯ ಜಪ್ತಿ

ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಮಾತನಾಡಿ, ನಗರದಲ್ಲಿ ಕರೋನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ನಗರಸಭೆ ನಗರದ ಎಲ್ಲಾ ಬಡಾವಣೆಯ ಪ್ರಮುಖ ರಸ್ತೆಯಲ್ಲಿ ರಾಸಾಯನಿಕದಿಂದ ಸಿಂಪಡನೆ ಮಾಡಲು ಮುಂದಾಗಿದೆ. ರಾಸಾಯನಿಕ ಸಿಂಪರಣೆಗೆ ನೀರಿನ ಟ್ಯಾಂಕ್ ಇರುವ ಟ್ರ್ಯಾಕ್ಟರ್ ಹಾಗೂ ಸ್ಪ್ರೆಯರ್ ಅನ್ನು ನಗರ ನಗರದ ಮುಖ್ಯ ರಸ್ತೆಗಳಲ್ಲಿ ಹಾಗೂ ನಗರದ ೨೭ ವಾರ್ಡಗಳಲ್ಲಿ ಸಿಂಪರಣೆಗೆ ಮುಂದಾಗಿದ್ದೆವೆ. ಅಲ್ಲದೇ ನಗರದ ಕೆಲವು ವ್ಯಾಪಾರಸ್ಥರು ನಿಗದಿಪಡಿಸಿದ ಸಮಯ ಮುಗಿದ ಬಳಿಕವೂ ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡುತ್ತಿದ್ದಾರೆ ಎಂದು ದೂರು ಬರುತ್ತಿವೆ.ಒಂದು ವೇಳೆ ನಗರಸಭೆಯ ಅಧಿಕಾರಿಗಳ ಕಣ್ಣಿಗೆ ಬಿದ್ದರೇ ಮುಲಾಜಿಲ್ಲದೇ ದಂಡ ಹಾಕಲಾಗುವುದು.ಅದಕ್ಕೂ ಮೀರಿದರೇ ಕೇಸ್ ದಾಖಲಿಸಲಾಗುವುದೆಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆಯ ಮಾಜಿ ಅಧ್ಯಕ್ಷ ಗಿರೀಶ ಕಂಬಾನೂರ, ಪರಿಸರ ಅಭಿಯಂತರ ಮುಜಾಮಿಲ್, ಕಂದಾಯ ಅಧಿಕಾರಿ ಸುನೀಲಕುಮಾರ ವೀರಶೆಟ್ಟಿ, ಆರೋಗ್ಯ ನಿರೀಕ್ಷಕ ಶಿವರಾಜಕುಮಾರ, ಶರಣು, ಹುಣೇಶ, ಈರಣ್ಣ ಕುರಿ, ಹಣಮಂತ ಪವಾರ, ಅನಿಲ ಹೊನಗುಂಟಿಕರ್ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here