ಕಲಬುರಗಿ ಜಿಲ್ಲಾಧಿಕಾರಿ ವರ್ಗಾವಣೆಗೆ ಒತ್ತಾಯ

0
101

ಕಲಬುರಗಿ: ಕೊರೊನಾ ನಿಯಂತ್ರಣ ಮತ್ತು ನಿರ್ವಹಣೆಯಲ್ಲಿ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ವಿಫಲರಾಗಿದ್ದು, ಕೂಡಲೇ ವರ್ಗಾವಣೆ ಮಾಡಿ, ಹಿರಿಯ ಐಎಎಸ್ ಅಧಿಕಾರಿಯೋಬ್ಬರನ್ನು ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿ ಹೆಚ್ಚುತ್ತಿರುವ ಸಾವುಗಳನ್ನು ತಪ್ಪಿಸಬೇಕೆಂದು ಫಿರದೋಸ್ ಕಾಲೋನಿ ವೇಲ್ಫರ್ ಸೂಸೈಟಿಯ ಅಧ್ಯಕ್ಷರಾದ ದಸ್ತೇಗಿರ್ ಅಹ್ಮದ್ ಒತ್ತಾಯಿಸಿದ್ದಾರೆ.

ಜಿಲ್ಲೆಯಲ್ಲಿ ಆಕ್ಸಿಜನ್ ಮತ್ತು ಬೇಡ್ ಕೊರತೆ ಸೋಂಕಿತರ ಸಂಖ್ಯೆ ಏರಿಕೆ ಕಾಣುತಿರುವುದು ಜಿಲ್ಲಾಧಿಕಾರಿ ನಿರ್ಲಕ್ಷ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

Contact Your\'s Advertisement; 9902492681

ಕೊರೊನಾ ನಿಯಂತ್ರಣ ಮತ್ತು ಬೇಡ್, ಆಕ್ಸಿಜನ್ ಹಾಗೂ ರೆಮ್ ಡಿಸಿವಿರ್ ಇಂಜೆಕ್ಷನ್‌ ಆಕ್ರಮ ಮಾರಾಟ ಜಾಲವನ್ನು ನಿಯಂತ್ರಿಸುವಲ್ಲಿ ಜಿಲ್ಲಾಧಿಕಾರಿ ಸಂಪೂರ್ಣ ವಿಫಲರಾಗಿದ್ದಾರೆ.

ಕೋವಿಡ್ ಮೊದಲನೇ ಅಲೆಯಲ್ಲಿ ಹಿಂದಿನ ಜಿಲ್ಲಾಧಿಕಾರಿ ಸಾಕಷ್ಟು ‌ಕಾರ್ಯಕ್ರಮಗಳ, ಮುಂಜಾಗ್ರತಾ ಕ್ರಮಗಳು ಹಾಗೂ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿ ಇದ್ದು ಹಗಲು ರಾತ್ರಿ ಶ್ರಮಿಸು ಕೋವಿಡ್ ಮತ್ತು ಸಾವುಗಳು ಅಷ್ಟೊಂದು ಅನುಭವಿಸಿರಲಿಲ್ಲ.

ವಿ.ವಿ ಜೋತ್ಸ್ನಾ ಅವರ ಕೋವಿಡ್ ಸೋಂಕು ಹರಡುವಿಕೆ ಮತ್ತು ಆಗುವ ಅನಾಹುತಗಳ ಬಗ್ಗೆ ದೂರದೃಷ್ಟಿ ಇಲ್ಲದಿರುವುದು ಕಂಡುಬರುತ್ತಿದೆ. ಶೀಘ್ರದಲ್ಲಿ ಡಿಸಿಯನ್ನು ವರ್ಗಾವಣೆ ಮಾಡಿ ಹಿರಿಯ ಐಎಎಸ್ ಅಧಿಕಾರಿಯೊಬ್ಬರಿಗೆ ನೇಮಕ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here