ಆಳಂದ: ತಾಲೂಕಿನ ನಿಂಬರ್ಗಾ ಸಮುದಾಯ ಆರೋಗ್ಯ ಕೆಂದ್ರದಲ್ಲಿ ೪೮ ಲಕ್ಷ ರೂ. ವೆಚ್ಚದಲ್ಲಿ ೩೦ ಬೆಡ್ ಮತ್ತು ಆಕ್ಸಿಜನ್ ಪ್ಲಾಂಟ್ ಸಿದ್ದವಾದರೂ ಕಾಮಗಾರಿ ಪೂರ್ಣಗೊಳಿಸಿ ಹಸ್ತಾಂತರ ಮಾಡಿಲ್ಲ. ಹೀಗಾಗಿ ಈ ವ್ಯಾಪ್ತಿಯ ೧೨ ಗ್ರಾಮಗಳ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ಮಾತ್ರ ಸಂಪೂರ್ಣ ಮರಿಚಿಕೆಯಾಗಿದೆ.
ಸಕಾಲದಲ್ಲಿ ಚಿಕಿತ್ಸೆ ಸಿಗದಿದ್ದರಿಂದ ರೋಗಿಗಳು ಕಲಬುರಗಿ ಇಲ್ಲವೆ ಮಹಾರಾಷ್ಟ್ರದ ವಿವಿಧ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುವಂತಾಗಿದೆ. ಚಿಕಿತ್ಸೆಗಾಗಿ ಲಕ್ಷಾಂತರ ಹಣ ಖರ್ಚು ಮಾಡಲಾಗುತ್ತಿದೆ. ತಾಲೂಕಿನಲ್ಲಿಯೇ ದೊಡ್ಡ ಕಂದಾಯ ಹೋಬಳಿ ಗ್ರಾಮವಾದರೂ ಚಿಕಿತ್ಸೆಗೆ ಬೇಕಾಗುವ ಸೌಲಭ್ಯಗಳು ಮಾತ್ರ ಸಿಗುತ್ತಿಲ್ಲ ಎಂಬುದು ಸ್ಥಳೀಯ ಆರೋಪವಾಗಿದೆ.
ಆಕ್ಸಿಜನ್ ಕೊರತೆ: ಕಲಬುರಗಿಯಲ್ಲಿ ಮತ್ತೆ ಐವರ ಸಾವು
ಸುಸಜ್ಜಿತ ಕಟ್ಟಡವಿದೆ, ವೈದ್ಯರು ಸೇರಿ ಉಳಿದ ಖಾಲಿ ಹುದ್ದೆಗಳು ಭರ್ತಿ ಮಾಡಿ ಗ್ರಾಮ ಮತ್ತು ಸುತ್ತಲಿನ ಗ್ರಾಮಗಳ ಜನರಿಗೆ ಕೊರೋನಾ ಹಾಗೂ ಸಾಮಾನ್ಯ ಚಿಕಿತ್ಸೆ ಸಿಗುವಂತಾಗಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ. ಆದರೆ ಸೌಲಭ್ಯವಿದ್ದರೂ ಕೊರತೆ ಎದ್ದು ಕಾಣುತ್ತಿದೆ. ಈ ಭಾಗದ ಜನ ಪ್ರತಿನಿಧಿಗಳು ಹಾಗೂ ತಾಲೂಕು ಆಡಳಿತ ಗಮನಹರಿಸಿ ಜನರಿಗೆ ಸರ್ಕಾರಿ ಸೌಲಭ್ಯ ನೀಡಬೇಕು. ಇಲ್ಲವಾದರೇ ಬಿದಿಗಿಳಿದು ಹೋರಾಟ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
೪೮ ಲಕ್ಷ ರೂ. ಆಕ್ಸಿಜನ್ ಸಲಕರಣೆಗಳು ಸಿದ್ದಪಡಿಸಿದರೂ ಅವುಗಳಿಗೆ ಸಿಲಿಂಡರ್ ಕೊರತೆಯಿದೆ. ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗುವಂತೆ ಕ್ರಮ ಕೈಗೊಳ್ಳಬೇಕು. ಜನ ಪ್ರತಿನಿಧಿಗಳು ಇತ್ತ ಗಮನ ಹರಿಸದೇ ಇರೋದು ವಿಪರ್ಯಾಸ.-ಬಸವರಾಜ ಯಳಸಂಗಿ ಕ.ರ.ವೇ ಅಧ್ಯಕ್ಷರು ನಿಂಬರ್ಗಾ ವಲಯ.
ನಿಂಬರ್ಗಾದಲ್ಲಿ ೪೮ ಲಕ್ಷ ರೂ. ವೆಚ್ಚದ ಆಕ್ಸಿಜನ್ ಪ್ಲಾಂಟ್ ಸಿದ್ದವಾಗಿದೆ. ಆದರೆ ಇದುವರೆಗೂ ನಮಗೆ ಕಾಮಗಾರಿ ಪೂರ್ಣಗೊಳಿಸಿ ಹಸ್ತಾಂತರಿಸಿಲ್ಲ. ಕೇವಲ ಡೆವೋ ಮಾತ್ರ ನೀಡಲಾಗಿದೆ. ೧೦ ಜಂಭೋ ಆಕ್ಸಿಜನ್ ಸಿಲಿಂಡರ್ ಗಳಿಗಾಗಿ ಮೇಲಾಧಿಕಾರಿಗಳಿಗೆ ಕೋರಲಾಗಿದೆ.-ಡಾ. ಇರ್ಫಾನ್ ಅಲಿ, ವೈಧ್ಯಾಧಿಕಾರಿ ನಿಂಬರ್ಗಾ.