ಸುರಪುರ: ನಗರದ ಮಹಾತ್ಮ ಗಾಂಧಿ ವೃತ್ತದ ಬಳಿಯಲ್ಲಿನ ನಗರ ಸಮುದಾಯ ಆರೋಗ್ಯ ಕೇಂದ್ರದ ಬಳಿಯಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಬಂದಾಗಿದ್ದು ದುರಸ್ಥಿಗೊಳಿಸುವಂತೆ ಸಾರ್ವಜನಿಕರು ನಗರಸಭೆಗೆ ಒತ್ತಾಯಿಸಿದ್ದಾರೆ.
ಈ ಕುರಿತು ಮುಖಂಡ ಮಹಾದೇವಪ್ಪ ಬೊಮ್ಮನಹಳ್ಳಿಯವರು ಮಾತನಾಡಿ,ಈ ಶುದ್ಧ ಕುಡಿಯುವ ನೀರಿನ ಘಟಕದಿಂದ ಸುಮಾರು ಮೂರು ವಾರ್ಡ್ಗಳಲ್ಲಿನ ಜನರಿಗೆ ಶುದ್ಧ ಕುಡಿಯುವ ನೀರು ದೊರೆಯುತ್ತದೆ.ಅಲ್ಲದೆ ಮಹಾತ್ಮ ಗಾಂಧಿ ವೃತ್ತದ ಸುತ್ತ ಮುತ್ತಲು ಇರುವ ಅನೇಕ ಹೋಟೆಲ್ಗಳು ಅಂಗಡಿಗಳಿಗೆ ಕುಡಿಯುವ ನೀರು ಸಿಗುತ್ತದೆ ಅಲ್ಲದೆ ಸುರಪುರ ಮತ್ತು ರಂಗಂಪೇಟೆಯಿಂದಲೂ ಜನರು ಇಲ್ಲಿಗೆ ಬಂದು ಕುಡಿಯಲು ನೀರು ತೆಗೆದುಕೊಂಡು ಹೋಗುತ್ತಾರೆ.
ಬೇಸಿಗೆಯ ಸಂದರ್ಭದಲ್ಲಿ ಜನರಿಗೆ ತುಂಬಾ ಅನುಕೂಲವಾಗಿದ್ದ ಈ ಘಟಕವು ಈಗ ಕಳೆದ ನಾಲ್ಕೈದು ದಿನಗಳಿಂದ ಕೆಟ್ಟು ನಿಂತಿದ್ದರಿಂದ ಜನರಿಗೆ ತುಂಬಾ ತೊಂದರೆಯಾಗಿದೆ.ಆದ್ದರಿಂದ ನಗರಸಭೆಯ ಅಧ್ಯಕ್ಷರು ಮತ್ತು ಅಧಿಕಾರಿಗಳು ಈ ಘಟಕದತ್ತ ಗಮನಹರಿಸಿ ಶೀಘ್ರವಾಗಿ ದುರಸ್ಥಿಗೊಳಿಸಬೇಕು ಎಂದು ವಿನಂತಿಸುವುದಾಗಿ ತಿಳಿಸಿದ್ದಾರೆ.