ಕಲಬುರಗಿ: ಆರ್.ಎಸ್.ಎಸ್ ಸಂಚಾಲಿತ ಸೇವಾ ಭಾರತಿ ಟ್ರಸ್ಟ್ ಹಾಗೂ ಅನ್ನಪೂರ್ಣ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಕಲಬುರಗಿ ಇವರುಗಳ ಸಹಯೋಗದಲ್ಲಿ 50 ಬೆಡ್‌ಗಳ ಕೋರೊನಾ ಸೊಂಕಿತರ ಸುಸಜ್ಜಿತ ಆರೈಕೆ ಕೇಂದ್ರವನ್ನು ನಗರದ ಎಮ್.ಎಸ್.ಕೆ.ಮಿಲ್ ರಸ್ತೆಯಲ್ಲಿರುವ ಅನ್ನಪೂರ್ಣ ನರ್ಸಿಂಗ್ ಕಟ್ಟಡದಲ್ಲಿ ನಿರ್ಮಿಸಲಾಗಿದೆ.
ಇದರ ಉದ್ಭಾಟನೆಯನ್ನು 07 ರಂದು ಮದ್ಯಾಹ್ನ 2:30 ಗಂಟೆಗೆ ಮಾನ್ಯ ಕರ್ನಾಟಕ ಸರಕಾರದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಮುರಗೇಶ ನಿರಾಣಿ ಹಾಗೂ ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್, ಜಿಲ್ಲೆಯ ಶಾಸಕರ ಸಮ್ಮುಖದಲ್ಲಿ ಉದ್ಭಾಟನೆ ಆಗಲಿದೆ ಎಂದು ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.