ಚಿತ್ತಾಪುರ: ರಾಜ್ಯಾದ್ಯಂತ ಹಾಗೂ ನಮ್ಮ ಜಿಲ್ಲೆಯಲ್ಲಿಯು ಕರೋನಾ ಮಹಾಮಾರಿ ತೀವ್ರವಾಗಿ ಹರಡುತ್ತಿದ್ದು ಎಲ್ಲರೂ ಕೋವಿಡ್ ಲಸಿಕೆಯನ್ನು ಪಡೆದುಕೊಳ್ಳಬೇಕು ಎಂದು ತಾಲೂಕು ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ವೀರಣ್ಣ ಸುಲ್ತಾನಪುರ್ ಅವರು ಮನವಿ ಮಾಡಿದ್ದಾರೆ.
ಕರೋನಾ ಕಳೆದ ಒಂದು ವರ್ಷದಿಂದ ಜನ ಜೀವನವನ್ನು ಇನ್ನಿಲ್ಲದಂತೆ ಕಾಡುತ್ತಿದೆ.ಮಹಾಮಾರಿ ಕರೋನಾ ವೈರಸ್ 2ನೇ ಅಲೆ ಬಹಳ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜನ ಸಾಮಾನ್ಯರೇ ಇದನ್ನು ತಡೆಗಟ್ಟಲು ವಾರಿಯರ್ಸ್ ಆಗುವ ಸಂದರ್ಭ ಇದಾಗಿದೆ.ವಾರಿಯರ್ಸ್ ಆಗಿ ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳೋಣ ಎಂದರು.
ಸಾರ್ವಜನಿಕರು ದಯಮಾಡಿ ಮನೆಯಿಂದ ಹೊರಬರದೇ, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮಾತ್ರ ಆರೋಗ್ಯ ಇಲಾಖೆ ಹೊರಡಿಸಿರುವ ನೀತಿ ನಿಯಮಗಳನ್ನು ಪಾಲಿಸುವ ಮೂಲಕ ಸೋಂಕು ಹರಡುವುದನ್ನು ತಡೆಯೋಣ,18 ವರ್ಷಕ್ಕಿಂತ ಮೇಲ್ಪಟ್ಟವರು ಕರೋನಾ ಲಸಿಕೆ ಪಡೆದು ಮಹಾಮಾರಿ ಕೋವಿಡ್ ವೈರಸ್ ಹರಡುವುದನ್ನು ತಡೆಗಟ್ಟಬೇಕಿದೆ ಎಂದು ಜಿಲ್ಲೆಯ ಜನತೆಗೆ ಮನವಿ ಮಾಡಿದ್ದಾರೆ.