ಸೋಂಕಿತರು ಕರೆ ಮಾಡಿದರೆ ಶಮಶೀರ್ ಟೀಂ ಹಾಜರ್: ಫೇಸ್‌ಬುಕ್ ಮೂಲಕ ರೋಗಿಗಳ ಸಂಪರ್ಕ

0
37

ಕಲಬುರಗಿ: ಆಸ್ಪತ್ರೆಗೆ ದಾಖಲಾಗುವವರನ್ನು ಸೀದಾ ಸಾವಿನ ಮನೆಯತ್ತ ಸಾಗಿಸುತ್ತಿರುವ ಮಹಾಮಾರಿ ಕೊರೊನಾ ಸೋಂಕಿತರನ್ನು ಕಂಡರೆ ನೂರಡಿ ದೂರ ಸರಿಯುವ ಜನಗಳೇ ಹೆಚ್ಚಿರುವ ಈ ಗಳಿಗೆಯಲ್ಲಿ, ಗೆಳೆಯರ ಗುಂಪೊಂದು ಫೇಸ್‌ಬುಕ್ ಮೂಲಕ ಸಾರ್ವಜನಿಕರಿಗೆ ಕಾಂಟೆಕ್ಟ್ ನಂಬರ್ ನೀಡಿ ಸೊಂಕಿತರನ್ನು ಸಂಪರ್ಕಿಸುವ ಮೂಲಕ ವೈದ್ಯಕೀಯ ನೆರವು ಒದಗಿಸುವಲ್ಲಿ ತೊಡಗಿಕೊಂಡಿದೆ. ವೈಯಕ್ತಿಕ ಪ್ರಚಾರವನ್ನು ಬಯಸದೆ ತೆರೆಮರೆಯಲ್ಲಿ ಕೋವಿಡ್ ರೋಗಿಗಳಿಗೆ ಆಸರೆಯಾಗುವ ಮೂಲಕ ನಿಸ್ವಾರ್ಥ ಸೇವೆಗೈದು ಆದರ್ಶ ಮೆರೆದಿದ್ದಾರೆ.

ಕಳೆದ ಏರಡು ವರ್ಷಗಳ ಹಿಂದೆ ಕರ್ನಾಟಕ ಮತ್ತು ಕೇರಳ ರಾಜ್ಯದಲ್ಲಿ ಉಂಟಾಗಿದ್ದ ಮಹಾ ಪ್ರವಾಹ ಸಂದರ್ಭದಲ್ಲಿ ಲಾರಿಗಟ್ಟಲೇ ದವಸದಾನ್ಯ, ಬಟ್ಟೆ, ಸಾಬೂನು, ಹಾಸಿಗೆ, ಸೇರಿದಂತೆ ಇನ್ನಿತರ ಅಗತ್ಯತೆಗಳನ್ನು ಸಾಗಿಸಿ ಕೇರಳ ಜನತೆಗೆ ತಲುಪಿಸುವ ಮೂಲಕ ನಿರಾಶ್ರಿತರಿಗೆ ನೆರವಾಗಿದ್ದ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಭಾಯ್ ಭಾಯ್ ಗ್ರೂಪ್ ಹಾಗೂ ಟೀಂ ಪ್ರಿಯಾಂಕ್ ಬಳಗದ ಅಧ್ಯಕ್ಷ ಶಮಶೀರ್ ಅಹ್ಮದ್ ಅವರ ನೇತೃತ್ವದಲ್ಲಿ ಗೆಳೆಯರ ತಂಡವೇ ಈ ಬಾರಿ ಕ್ರೂರಿ ಕೊರೊನಾ ಸೋಂಕಿತರ ಸೇವೆಯಲ್ಲಿ ತೊಡಗಿದೆ. ಫೇಸ್ಬುಕ್ ಖಾತೆಯಲ್ಲಿ ಸಂದೇಶವನ್ನು ಬರೆದುಕೊಂಡು ಮೋಬಾಯಿಲ್ ನಂಬರ್ ದಾಖಲಿಸಿದ ಶಮಶೀರ್ ಟೀಂ, ಕಳೆದ ಒಂದು ತಿಂಗಳಿಂದ ವಾಡಿ, ಚಿತ್ತಾಪುರ, ಕಲಬುರಗಿ, ಯಾದಗಿರಿ, ಸುರಪುರ, ಬೀದರ್, ಹುಮನಾಬಾದ ಸೇರಿದಂತೆ ವಿವಿದೆಡೆಯಿಂದ ಸಂಪರ್ಕಕ್ಕೆ ಬಂದ ೭೦ಕ್ಕೂ ಹೆಚ್ಚು ಕೊರೊನಾ ಸೋಂಕಿತರಿಗೆ ವಾಹನ ಸೌಲಭ್ಯದ ಜತೆಗೆ ವೈದ್ಯಕೀಯ ನೆರವು ಒದಗಿಸಿಕೊಟ್ಟಿದ್ದಾರೆ.

Contact Your\'s Advertisement; 9902492681

ಸ್ವತಹ ಭಾಯ್ ಭಾಯ್ ಗ್ರೂಪಿನ ಸದಸ್ಯರು ಸ್ವಜಾತಿ-ವಿಜಾತಿ ಎಂದು ಲೆಕ್ಕಿಸದೆ ಸಹಾಯಕ್ಕೆ ಮೊರೆಯಿಟ್ಟವರೆಲ್ಲರಿಗೂ ನೆರವಾಗಿದ್ದಾರೆ. ಭಾಯ್ ಭಾಯ್ ಗ್ರೂಪ್ ಮತ್ತು ಟೀಂ ಪ್ರಿಯಾಂಕ್ ಖರ್ಗೆ ಗ್ರೂಪಿನ ಪದಾಧಿಕಾರಿಗಳಾದ ಮಹ್ಮದ್ ಇರ್ಫಾನ್, ಖಯ್ಯೂಮ್, ಸಲಮಾನ್ ಪಟೇಲ, ಮಮ್ಮು, ಅಭೀದ್, ಇಮ್ರಾನ್, ಗಿರೆಪ್ಪಾ, ಮಲ್ಲಿಕಾರ್ಜುನ, ಆರೀಫ್, ರಾಜು ಕೋಲಿ, ಆಕಾಶ, ಮಹೇಶ, ಭಗವಾನ ದಾಸ ಹಾಗೂ ಇನಾಯತ್ ಅವರು ಪಿಪಿಇ ಕಿಟ್ ಧರಿಸಿಕೊಂಡು ನಿರ್ಭಯವಾಗಿ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿ, ಮಾತ್ರೆಗಳನ್ನು ಒದಗಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಯುವಕರ ಈ ಸ್ಪೂರ್ತಿದಾಯಕ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಕೊರೊನಾ ಏರಡನೇ ಅಲೆಯ ವ್ಯಾಪಕ ಹರಡುವಿಕೆಯಿಂದ ಬಡ ಕುಟುಂಬದ ರೋಗಿಗಳು ಕಂಗಾಲಾಗಿದ್ದಾರೆ. ಬೆಡ್ ಮತ್ತು ಆಕ್ಸಿಜನ್ ಸಿಗದೆ ಮಸಣ ಸೇರುತ್ತಿದ್ದಾರೆ. ಸದಾ ಸಂಕಷ್ಟದಲ್ಲಿರುವ ಜನರ ನೆರವಿಗೆ ದಾವಿಸುವ ಉತ್ಸಾಹ ಹೊಂದಿರುವ ನಮ್ಮ ಟೀಂ ಸದಸ್ಯರು, ಈ ಬಾರಿ ಸೋಂಕಿತರಿಗೆ ನೆರವಾಗಿವ ಧೈರ್ಯ ಪ್ರದರ್ಶಿಸಿದರು. ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಚಾರ ಮಾಡುವ ಮೂಲಕ ನೆರವಿನ ಹಸ್ತ ಚಾಚಿದ್ದೇವು. ಸುಮಾರು ೭೦ ಜನ ಸೋಂಕಿತರನ್ನು ನಾವುಗಳೇ ಆಸ್ಪತ್ರೆಗೆ ಸಾಗಿಸಿದ್ದೇವೆ. ವಾಹನ, ಊಟ, ಮಾತ್ರೆ, ಔಷಧ ಉಚಿತವಾಗಿ ಸಿಗುವಂತೆ ನೋಡಿಕೊಂಡಿದ್ದೇವೆ. ಜನರು ಸಾವಿನ ದವಡೆಯಲ್ಲಿರುವಾಗ ನೋಡಲಾಗದೆ ಈ ಸೇವೆಗೆ ಮುಂದಾಗಿದ್ದೇವೆ. ಸಂಕಷ್ಟದಲ್ಲಿರುವ ರೋಗಿಗಳು ನನ್ನ ಮೋ.9742533763ಗೆ ಸಂಪರ್ಕಿಸಬಹುದು. -ಶಮಶೀರ್ ಅಹ್ಮದ್. ಅಧ್ಯಕ್ಷರು, ಭಾಯ್ ಭಾಯ್ ಗ್ರೂಪ್-ಟೀಂ ಪ್ರಿಯಾಂಕ್ ಖರ್ಗೆ. ವಾಡಿ ಜಂ).

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here