ಕಲಬುರಗಿ: ಜಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ರೋಗಿ ಒಬ್ಬರು ಮೃತಪಟ್ಟಿ ಹತ್ತು ಗಂಟೆಗಳು ಕಳೆದರು ಅನಾಥ ಶವವಾಗಿ ಬಿದ್ದಿರುವ ಘಟನೆ ಇಲ್ಲಿನ ಜಿಮ್ಸ್ ಆಸ್ಪತ್ರೆಯಲ್ಲಿ ಮೇ. 5 ರಂದು ನಡೆದಿರುವ ಘಟನೆ ಬೆಳಕಿಗೆ ಬಂದಿದೆ.
ನಾಲವರ್ ನಿವಾಸಿ ಹಫಿಜ್ ಬೇಗ್ ಮೃತಪಟ್ಟ ರೋಗಿ. ಜಿಮ್ಸ್ ಆಸ್ಪತ್ರೆ ಜಯದೇವ ಕಟ್ಟಡದ ಎರಡನೇ ಮಹಡಿಯ ವಿಶೇಷ ನಿಗ್ರಹ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದರು. ಮೇ 5 ರಂದು ಬೆಳಿಗ್ಗೆ 2 ಗಂಟೆಗೆ ಮೃತಪಟ್ಟಿರುವ ರೋಗಿಯನ್ನು ಅಪರಾಹ್ನ 10ಗಂಟೆ ಕಳೆದರು ರೋಗಿಯ ಸಾವಿನ ಸುದ್ದಿ ಕುಟುಂಬಸ್ಥರಿಗೆ ತಿಳಿಸಿದಿರುವ ಅಮಾನವಿ ಘಟನೆ ನಡೆದಿದೆ ೆಮದು ತಿಳಿದುಬಂದಿದೆ.
11 ಗಂಟೆಗಳ ಕಾಲ ಮೃತ ದೇಹ ಒಂಟಿಯಾಗಿ ಬೆಡ್ ಮೇಲೆ ಬಿದ್ದರೂ, ಯಾವುದೇ ವೈದ್ಯರಾಗಲಿ, ಸಿಬ್ಬಂದಿಗಳಾಗಲಿ ಗಮನ ಹರಿಸಿಲ್ಲ. ರೋಗಿ ಸಾವಿಗೆ ಆಸ್ಪತ್ರೆಯ ಸಿಬ್ಬಂದಿಗಳ ನಿರ್ಲಕ್ಷ್ಯವೇ ಕಾರಣವೆಂದು ಮೃತ ವ್ಯಕ್ತಿಯ ಕುಟುಂಬಸ್ಥರು ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಂತರ ಹ್ಯೂಮಾನ್ ಐಡ್ ಆರ್ಗನೈಸೇಶನ್ ತಂಡದ ಅಜೀಮ್ ಶೇಕ್ ಮೃತ ವ್ಯಕ್ತಿಯ ಶವವನ್ನು ಬೆಳಿಗ್ಗೆ 11 ಗಂಟೆಗೆ ಪಡೆದು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.
ರೋಗಿಗಳಿಗೆ ವೈದ್ಯರು ಮತ್ತು ಸಿಬ್ಬಂದಿಗಳು ಕಾರ್ಯಾನಿರ್ವಹಿಸುತ್ತಿರುವ ಬಗ್ಗೆ ಸೂಕ್ಷ್ಮವಾಗಿ ಗಮನಿಸಲು ನೋಡಲ್ ಅಧಿಕಾರಿಗಳ ನೇಮಕ ಮಾಡಬೇಕು ಮತ್ತು ರೋಗಿಗಳಿರುವ ವಾರ್ಡ್ ಗಳಲ್ಲಿ ಸಿಸಿಟಿವಿ ಕ್ಯಾಮೇರಾ ಅಳವಡಿಸಬೇಕೆಂದು ನ್ಯಾಯಲಯ ಆದೇಶ ನೀಡಿದೆ. ಆದರೆ ಕಲಬುರಗಿಯಲ್ಲಿ ಇದುವರೆಗೆ ನೋಡಲ್ ಅಧಿಕಾರಿಗಳ ನೇಮಕ, ವಾರ್ಡ್ ಗಳಲ್ಲಿ ಸಿಸಿಟಿವಿ ಅಳವಡಿಸಿಲ್ಲ. ಆಸ್ಪತ್ರೆಯ ಸಿಬ್ಬಂದಿ ರೋಗಿಗಳ ಚಿಕಿತ್ಸೆ ನೀಡುವಲ್ಲಿ ಹಿಂದೇಟು ಹಾಕುತ್ತಿರುವುದು ಕುಟುಂಬಸ್ಥರ ಆರೋಪಗಳು ಕೆಳಿಬರುತ್ತಿವೆ. ಆಸ್ಪತ್ರೆಯ ಆಡಳಿತ ಮಂಡಳಿ ನ್ಯಾಯಲಯದ ಆದೇಶ ಪಾಲಿಸಬೇಕು. ರೋಗಿಗಳಿಗೆ ಬೆಡ್ ಮತ್ತು ಸೂಕ್ತ ಚಿಕಿತ್ಸೆಯ ಅನುಕೂಲಕ್ಕಾಗಿ ಉಚ್ಛನ್ಯಾಯಲಯ ಸಾರ್ವಜನಿಕರಿಗೆ ದೂರು ನೀಡಲು ಹೇಲ್ಪ್ ಲೈನ್ ಆರಂಭಿಸಬೇಕೆಂದು ಆದೇಶ ನೀಡಿದರು ಅದು ಸಹ ಆಗಿಲ್ಲ. ರಿಯಾಜ್ ಖತೀಬ್, ಮಾನವ ಹಕ್ಕುಗಳ ಹೋರಾಟಗಾರ.