ಮನೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಆಕ್ಸಿಜನ್ ಕೊಡಿ

0
92

ಕಲಬುರಗಿ: ಮನೆಯಲ್ಲಿ ವೈದ್ಯರ ನಿರ್ದೇಶನದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಆಕ್ಸಿಜನ್ ರಿಫಿಲಿಂಗ್ ಮಾಡಿಕೊಡಬೇಕು ಎಂದು ಮಾನವ ಹಕ್ಕುಗಳ ಹೋರಾಟಗಾರರ ತಂಡದ ರಿಯಾಜ್ ಖತೀಬ್ ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.

ಜಿಲ್ಲೆಯಲ್ಲಿ ಬೆಡ್ ಮತ್ತು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಹಿನ್ನೆಲೆಯಲ್ಲಿ ಸ್ಥಳೀಯ ಎನ್ ಜಿಓ ಮತ್ತು ಸಂಸ್ಥೆಗಳ ಸಹಕಾರದಿಂದ ಮನೆಯಲ್ಲೇ ವೈದ್ಯರ ನೆರವು ಪಡೆದು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂತಹ ರೋಗಿಗಳಿಗೆ ಆಕ್ಸಿಜನ್ ಅಗತ್ಯವಿದ್ದು  ಜಿಲ್ಲಾಡಳಿತ ಆಕ್ಸಿಜನ್ ನೀಡಲು ನಿರಾಕರಿಸುತ್ತಿರುವುದರಿಂದ ಸಂಕಷ್ಟ ಎದುರಾಗಿದೆ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ಕಲಬುರಗಿ: ಆಸ್ಪತ್ರೆಯಲ್ಲಿ ಮೃತಪಟ್ಟು ಹತ್ತುಗಂಟೆ ಕಳೆದರು ನೋಡುವವರಿಲ್ಲ

ಆಸ್ಪತ್ರೆಯಲ್ಲಿ ಬೆಡ್ ಮತ್ತು ಆಕ್ಸಿಜನ್ ಸಿಗದ ರೋಗಿಗಳು ಮನೆಯಲ್ಲಿ ಚಿಕಿತ್ಸೆ ಪಡೆಯಲು ಆರಂಭಿಸಿದ್ದಾರೆ. ಜಿಲ್ಲೆಯಲ್ಲಿ ಬೆಡ್ ಮತ್ತು  ಆಕ್ಸಿಜನ್ ಕೊರತೆಯಿಂದ ಮೃತಪಟುತ್ತಿರುವವರ ಸಾವು ದಾಖಲೆ ಸೃಷ್ಟಿಸುತ್ತಿದೆ. ಜಿಲ್ಲಾಡಳಿತ ಜನರ ಅನುಕೂಲಕ್ಕೆ ಮುಂದೆ ಬರದಿರುವುದು ಅಗತ್ಯ ವಿದೆ. ತಕ್ಷಣ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಗಿಗಳಿಗೂ ವೈದ್ಯರ ಸೂಚನೆಯಂತೆ ಆಕ್ಸಿಜನ್ ಒದಗಿಸುವ ವ್ಯವಸ್ಥೆ ಜಿಲ್ಲಾಡಳಿತ ಮಾಡಬೇಕು. ಆಕ್ಸಿಜನ್ ನೀಡಲು ನಿರಾಕರಿಸಿದರೆ ಜಿಲ್ಲೆಯ ಪ್ರತಿಯೊಂದು ಬಡಾವಣೆಯಿಂದ ಆಕ್ಸಿಜನ್ ಸಿಗದೆ ಸಾವುಗಳ ಸಂಭವಿಸು ಸಾಧ್ಯತೆ ಹೆಚ್ಚಿವೆ ಎಂದು ರಿಯಾಜ್ ಖತೀಬ್ ಮಾತನಾಡಿ ಆತಂಕ ವ್ಯಕ್ತಪಡಿಸಿದ್ದಾರೆ.

ಕೋವಿಡ್ ನಿಂದ ತಂದೆ ತಾಯಿ ಇಬ್ಬರನ್ನು ಕಳೆದು ಕೊಂಡ ಮಕ್ಕಳಿಗೆ ಉಚಿತ ಶಿಕ್ಷಣ: ಶ್ರೀಗಳು

ಜಿಲ್ಲೆಯಲ್ಲಿ ಸಾವುಗಳ ಸಂಖ್ಯೆ ಕಮ್ಮಿಯಾಗಲು ಮತ್ತು ಉತ್ತಮ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಮಸ್ಯೆಗಳಿಗೆ ಸ್ಪಂದಿಸಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ. ಹೆಚ್ಚಿನ ಸಾವು ನೋವುಗಳಿಗೆ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳೆ ನೇರ ಹೊಣೆ ಹೊರಬೇಕಾಗುತ್ತದೆ. ಸಮಯ ಇರುವಾಗಲೇ ಜನರ ನೇರವಿಗೆ ಜಿಲ್ಲಾಡಳಿತ ಮುಂದೆ ಬರಬೇಕೆಂದು ಹೋರಾಟಗಾರರ ತಂಡ ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ ಅವರೊಂದಿಗೆ ಚರ್ಚೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here