ಹೆಚ್ಚಿನ ಬೆಲೆಯಲ್ಲಿ ದಿನಸಿ ವಸ್ತು ಮಾರಾಟ: 66,000 ರೂ. ದಂಡ ವಸೂಲಿ

0
47

ಕಲಬುರಗಿ: ಕೊವೀಡ್-19 ಸಂದರ್ಭದಲ್ಲಿ ಕಲಬುರಗಿ ಕಾನೂನು ಮಾಪನಶಾಸ್ತç ಇಲಾಖೆಯಿಂದ ದಿನಸಿ ಪದಾರ್ಥ ಹಾಗೂ ಇತರೆ ದಿನನಿತ್ಯದ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಹಾಗೂ ಪೊಟ್ಟಣ ಸಾಮಗ್ರಿ ಅಧಿನಿಯಮ 2011ರ ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆ ಹಾಗೂ ವಿವಿಧ ತಾಲೂಕುಗಳಲ್ಲಿನ ಕಿರಾಣ ಬಜಾರ, ಸುಪುರ ಮಾರ್ಕೇಟ್, ಎ.ಪಿ.ಎಂ.ಸಿ. ನೆಹರು ಗಂಜಿನ ಸಟಗು ಹಾಗೂ ರಿಟೇಲ್ (ಚಿಲ್ಲರೆ) ವ್ಯಾಪಾರಸ್ಥರ ಮಳಿಗೆಗಳಿಗೆ ಏಪ್ರಿಲ್ 28 ರಿಂದ ಮೇ 7 ರವರೆಗೆ ತಪಾಸಣೆ ನಡೆಸಿ ವ್ಯಾಪಾರಸ್ಥರ ವಿರುದ್ಧ ಕ್ರಮ ಕೈಗೊಂಡು ದಂಡ ವಸೂಲಿ ಮಾಡಲಾಗಿದೆ ಎಂದು ಕಲಬುರಗಿ ಕಾನೂನು ಮಾಪನಶಾಸ್ತç ಇಲಾಖೆಯ ಸಹಾಯಕ ನಿಯಂತ್ರಕರಾದ ರಫೀಕಸಾಬ್ ಲಾಡಜಿ ಅವರು ತಿಳಿಸಿದ್ದಾರೆ.

ಕಲಬುರಗಿ ಕಾನೂನು ಮಾಪನಶಾಸ್ತç ಇಲಾಖೆಯ ಸಹಾಯಕ ನಿಯಂತ್ರಕರಾದ ರಫೀಕಸಾಬ್ ಲಾಡಜಿ ಹಾಗೂ ನಿರೀಕ್ಷಕರುಗಳಾದ ಅನಿಲಸಿಂಗ್, ಜಯರಾಜ್ ಸಿಂಗ್ ಹಾಗೂ ಅಶ್ವಥ ಜಿ. ಪತ್ತಾರ ಇವರನ್ನೊಳಗೊಂಡ ತಂಡವು ಏಪ್ರಿಲ್ 28 ರಿಂದ ಮೇ 7 ರವರೆಗೆ 84 ತಪಾಸಣೆ ನಡೆಸಿ 25 ಮೊಕದ್ದಮೆ ಹೂಡಿ 66,000 ರೂ.ಗಳ ಅಭಿಸಂಧಾನದ ದಂಡ ವಸೂಲಿ ಮಾಡಿರುತ್ತಾರೆ.

Contact Your\'s Advertisement; 9902492681

ಸಾರ್ವಜನಿಕರು ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಕಲಬುರಗಿ ಕಾನೂನು ಮಾಪನಶಾಸ್ತç ಇಲಾಖೆಯ ಕಚೇರಿಯ ದೂರವಾಣಿ ಸಂಖ್ಯೆ 08472-295856ಗೆ ಸಂಪರ್ಕಿಸಬೇಕೆAದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here