ಸೇವಾ ಟ್ರಸ್ಟ್ ಯಿಂದ ಕೊರೋನಾ ಕುರಿತು ಜಾಗೃತಿ

0
34

ಜೇವರ್ಗಿ : ಜೇವರ್ಗಿ ಪಟ್ಟಣದಲ್ಲಿ ಇಂದು ಕರೋನವೈರಸ್ ಮಹಾಮಾರಿಯನ್ನು ತಡೆಗಟ್ಟುವಲ್ಲಿ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಾಜಕು ಎಂದು ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.

ಪಟ್ಟಣದ ಅಖಂಡೇಶ್ವರ ವೃತ್ತ ಹಾಗೂ ಟಿಪ್ಪು ಸುಲ್ತಾನ್ ಚೌಕಗಳಲ್ಲಿ ಈ ಕುರಿತು ಸಾರ್ವಜನಿಕರ ಅರಿವಿನ ಕಾರ್ಯಕ್ರಮವನ್ನು ಹಮ್ಮಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಹಾಗೂ ಕಡ್ಡಾಯವಾಗಿ ಎಲ್ಲರೂ ಕರೋನ ವ್ಯಾಕ್ಸಿನೇಷನ್ ಹಾಕಿಕೊಳ್ಳುವ ಮೂಲಕ ಭಾರತವನ್ನು ಮಹಾಮಾರಿ ಕರೋನವೈರಸ್ ಮುಕ್ತವನ್ನಾಗಿಸಿ
ಮಹಾಮಾರಿಯನ್ನು ಹೊಡೆದೋಡಿಸಬೇಕು ಎಂದು ಸಾರ್ವಜನಿಕರಿಗೆ ತಿಳಿಸಲಾಯಿತು.

Contact Your\'s Advertisement; 9902492681

ಮಾತೃಶ್ರೀ ಶ್ರೀ ಮತಿ ಪಾರ್ವತಿ ವಿ ಮುದ್ದಡಗಿ ಸೇವಾ ಟ್ರಸ್ಟ್ ಹಾಗೂ ಹಂಸವಾಹಿನಿ ಸಂಗೀತ ಕಲಾ ಮತ್ತು ಶಿಕ್ಷಣ ಸೇವಾ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ತಾಲೂಕ ಆಡಳಿತ ಜೇವರ್ಗಿ ಹಾಗೂ ಪುರಸಭೆ ಕಾರ್ಯಾಲಯ ಜೇವರ್ಗಿ ಜಂಟಿ ಆಶ್ರಯದಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಎಲ್ಲರೂ ಕಡ್ಡಾಯವಾಗಿ ಹೊರಗಡೆ ಬಂದಾಗ ಮುಖಕ್ಕೆ ಮಾಸ್ಕ್ ಧರಿಸಬೇಕು ಹಾಗೂ ಬೇರೆಯವರೊಂದಿಗೆ ಸಂಪರ್ಕಕ್ಕೆ ಬಂದಾಗ ಬಂದಾಗ ಸ್ಯಾನಿಟೇಷನ್ ಮೂಲಕ ಸ್ವಚ್ಛಗೊಳಿಸಿಕೊಳ್ಳಬೇಕು ಹಾಗೂ ಅವಶ್ಯಕವಾಗಿ ತಿರುಗಾಡ ಬಾರದು ಎಂದು ತಿಳಿಸಲಾಯಿತು.

ಟ್ರಸ್ಟಿನ ಸಿದ್ದಲಿಂಗ ಮಹೂರ್. ಮಹೇಶ್ ಕೋಕಿಲ, ಪತೃ ಪಟೇಲ್. ಸೇರಿದಂತೆ ಪತ್ತೆ ಅಹಮದ್ ನಾಯ್ಕೋಡಿ, ರಾಜು ಮುದ್ದಡಗಿ, ಕಾಸಿಮ್ ಪಟೇಲ್, ದೇವಾನಂದ ಡುಗನಕಾರ್ ಸೇರಿದಂತೆ ಬಡಾವಣೆ ನಾಗರಿಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here