ಮೂರನೇ ಅಲೆಯ ಬಗ್ಗೆ ಅರಿವು ಮೂಡಿಸಿ

0
90

ಕಲಬುರಗಿ: ಕೊರೊನಾ ಸೊಂಕು ಎಲ್ಲರನ್ನೂ ತಲ್ಲಣಗೊಳಿಸಿದೆ ಮೊದಲನೇ ಅಲೆ ವೃದ್ಧರನ್ನು ಕಾಡಿತ್ತು , ಎರಡನೇ ಅಲೆಯಲ್ಲಿ ವಯಸ್ಸಿನ ಅಂತರವಿಲ್ಲದೆ ಸಾವು ನೋವುಗಳ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೂರನೇ ಅಲೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೈದ್ರಾಬಾದ್ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ನಂದಕುಮಾರ ನಾಗಭುಜಂಗೆ ರಾಜ್ಯ ಸರಕಾರಕ್ಕೆ ಮನವಿ ಮಾಡಿದರು.

ಈ ಕುರಿತು ಸರಕಾರಕ್ಕೆ ಮನವಿ ಮಾಡಿರುವ ಅವರು, ಸರ್ಕಾರದ ಉಢಾಪೆ, ಸಿದ್ದತೆ ಇಲ್ಲದೇ ನಿರ್ಲಕ್ಷ್ಯ , ಸಾರ್ವಜನಿಕರ ಬೇಜವಬ್ದಾರಿತನ ಕೂಡಾ ಎಂದು ಹೇಳುತ್ತೇವೆ. ತಜ್ಞರು ಮುನ್ಸೂಚನೆ ನೀಡಿದರೂ ಜನರು ಹಾಗೂ ಸರಕಾರ ನಿರ್ಲಕ್ಷ್ಯ ತಾಳಿದ್ದಾರೆ.

Contact Your\'s Advertisement; 9902492681

ಜೂನ್ ನಂತರ ಮೂರನೇಯ ಅಲೆಯ ಆರ್ಭಟ ಇದೆಯಂದೂ ಅದು ಮಕ್ಕಳನ್ನು ಕಾಡಬಹದು ಎಂದು ತಜ್ಞರು ಮುನ್ಸೂಚನೆ ಕೊಟ್ಟಿದರೂ ಸಹ ಸರಕಾರ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆದ್ದರಿಂದ ಕೂಡಲೇ ವೈದ್ಯರು ಈ ಕುರಿತು ಜನರಿಗೆ ಸೂಕ್ತ ಜಾಗೃತಿ ಮೂಡಿಸಬೇಕು. ಈ ಸಮಯದಲ್ಲಿ ಮಕ್ಕಳ ಆರೋಗ್ಯಕರ , ಆಹಾರ , ಜೀವನಶೈಲಿ ಬಗ್ಗೆ ತಿಳಿ ಹೇಳಬೇಕು ಎಂದು ಅವರು ಸರಕಾರಕ್ಕೆ ಮನವಿ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here