ಮೇ 14ಕ್ಕೆ ಆಕ್ಸೀಜನ್ ಸಹಿತ 20 ಹಾಸಿಗೆ ಸಾಮಥ್ರ್ಯದ ಕೋವಿಡ್ ಕೇರ್ ಸೆಂಟರ್‍ಗೆ ಚಾಲನೆ

0
15

ಕಲಬುರಗಿ:  ಸದಾಕಾಲ ವಿಧಾಯಕ ಯೋಜನೆಗಳ ಮೂಲಕ ಸಮಾಜದ ಪ್ರತಿ ಉತ್ತಮ ಕೆಲಸಗಳನ್ನು ಮಾಡುತ್ತ ನೋಂದವರ ಕಣ್ಣೀರು ಒರೆಸುವಲ್ಲಿ ಮುಂದಿರುವ ಧರಂಸಿಂಗ್ ಫೌಂಡೇಷನ್ ಕೊರೋನಾ 2 ನೇ ಅಲೆ ತೀವ್ರ ಆಆಂಕ ಹುಟ್ಟು ಹಾಕಿರುವ ಈ ಸಂಧಿಗ್ಧ ಕಾಲದಲ್ಲಿ ಜೇವರ್ಗಿಯಲ್ಲಿ ಆಕ್ಸೀಜನ್ ಸಹಿತ 20 ಬೆಡ್‍ಗಳಿರುವ ಕೋವಿಡ್ ಕೇರ್ ಸೆಂಟರ್ ಆರಂಭಿಸುವ ಮೂಲಕ ಸೋಂಕಿತರತ್ತ ನೆರವಿನ ಹಸ್ತ ಚಾಚಲು ಮುಂದಾಗಿದೆ.

ಜಿಲ್ಲಾಡಳಿತದ ಸಹಯೋಗದಲ್ಲಿ ತಾಲೂಕು ಆಸ್ಪತ್ರೆಯಲ್ಲೇ ಆರಂಭವಾಗಲಿರುವ ಈ ಕೇಂದ್ರದಲ್ಲಿ ಧರಂಸಿಂಗ್ ಫೌಂಡೇಷನ್ ಆಕ್ಸೀಜನ್, ಔಷಧಿ ಇತ್ಯಾದಿ ರೋಗಿಗಳ ಉಪಚಾರಕ್ಕೆ ಅಗತ್ಯವಿರುವ ವಸ್ತುಗಳನ್ನು ಸರಬರಾಜು ಮಾಡಲು ಮುಂದಾದಗಿದೆ. ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಜೇವರ್ಗಿ ±ಸಾಕರಾಗಿರುವ ಡಾ. ಅಜಯ್ ಸಿಂಗ್ ನೇತೃತ್ವದಲ್ಲಿ ಈ ಕೇಂದ್ರ ಕಾರ್ಯಾರಂಭ ಮಾಡುತ್ತಲಿದ್ದು ಮೇ 14ರ ಶುಕ್ರವಾರ ಈ ಕೇಂದ್ರಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಗುತ್ತಿದೆ. ಆರೋಗ್ಯ ಇಲಾಖೆಯ ಅದಿಕಾರಿಗಳು, ಜಿಲ್ಲಾಡಳಿತ, ತಾಲೂಕು ಆಡಲಿತದ ಅದಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ.

Contact Your\'s Advertisement; 9902492681

ಕೊರೋನಾ 2 ನೇ ಅಲೆಯ ಸೋಂಕು- ಸಾವು ಹೆಚ್ಚುತ್ತ ಆತಂಕದ ವಾತಾವರಣ ಉಂಟಾಗಿರುವ ಕಲಬುರಗಿಯಲ್ಲಿ ಹಾಸಿಗೆ ಬರ ಕಾಡುತ್ತಿರೋದನ್ನ ಮನಗಂಡು ಸೋಂಕಿತರ ನೆರವಿಗೆ ಧರಂಸಿಂಗ್ ಫೌಂಡೇಷನ್ ಧಾವಿಸುತ್ತಿದೆ. ಕಳೆÉದ ಬಾರಿಯೂ ಕೊರೋನಾ ಕಾಡಿದಾಗ ದಿನಸಿ ಕಿಟ್, ಕೋವಿಡ್ ಸೆಂಟರ್, ಉಚಿತ ಊಟೋಪಚಾರದಂತಹ ಅನೇಕ ವಿದಾಯಕ ಕಾರ್ಯಕ್ರಮಗಳೊಂದಿಗೆ ಜನರಿಗೆ ಸ್ಪಂದಿಸಿದ್ದ ಫೌಂಡೇಷನ್ ಈ ಬಾರಿ ಆಕ್ಸೀಜನ್ ಬೆಡ್ ನೀಡುವುದರೊಂದಿಗೆ ಜನರ ಕಣ್ಣೀರು ಒರೆಸಲು ಮುಂದಾಗಿರೋದು ಜಿಲ್ಲೆಯಲ್ಲಿಯೇ ಇದೇ ಮೊದಲ ಬೆಳವಣಿಗೆಯಾಗಿದೆ.

ಜೇವರ್ಗಿಯಲ್ಲಿರುವ ಕೋವಿಡ್ ಸೋಂಕಿತ ಜನರ ಬವಣೆ ನೀಗಿಸಲು, ಅವರು ಎದುರಿಸುತ್ತಿರುವ ಆಕ್ಸೀಜನ್ ಬೆಡ್ ಕೊರತೆ ನೀಗಿಸಲು ಧರಂಸಿಂಗ್ ಫೌಂಡೇಷನ್ ಸಿದ್ದವಾಗಿದೆ. ಜಿಲ್ಲಾಡಳಿತದ  ಸಹಯೋಗದಲ್ಲಿ ಧರಂಸಿಂಗ್ ಫೌಂಡೇಷನ್ ವತಿಯಿಂದ ಜೇವರ್ಗಿ ತಾಲೂಕಾಸ್ಪತ್ರೆಯಲ್ಲಿ 20 ಆಕ್ಸೀಜನ್ ಬೆಡ್ ಇರುವಂತಹ ಕೋವಿಡ್ ಕೇರ್ ಸೆಂಟರ್ ಆರಂಭವಾಗಲಿದೆ. ಯಾವುದೇ ಕಾರಣಕ್ಕು ಇಲ್ಲಿ ಆಕ್ಸೀಜನ್, ಔಷಧಿಗಳ ಕೊರತೆ ಕಾಡದಂತೆ ನಿಗಾ ವಹಿಸಲಾಗುತ್ತಿದೆ. ಬರುವ ದಿನಗಳಲ್ಲಿ ಬೆಡ್‍ಗಳ ಸಂಖ್ಯೆ ಇನ್ನೂ ಹೆಚ್ಚಿಸಲು ಚಿಂತನೆ ನಡೆಸುತ್ತೇವೆ. ಸೋಂಕಿನಿಂದ ಕಂಗಾಲಾಗಿ ಜನ ಧೈರ್ಯ ಕಳೆದುಕೊಂಡು ಅನಾಹುತ ಮಾಡಿಕೊಳ್ಳಬಾರದು ಎಂದು ನನ್ನ ಮನವಿ. -ಡಾ. ಅಜಯ್ ಸಿಂಗ್, ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಶಾಸಕರು ಜೇವರ್ಗಿ ಮತಕ್ಷೇತ್ರ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here