ಖಾಲಿ ಆಕ್ಸಿಜನ್ ಸಿಲೆಂಡರ್ ಹೊತ್ತೊಯ್ಯುತ್ತಿದ್ದ ಆ್ಯಂಬುಲೆನ್ಸ್ ಗೆ ಬೆಂಕಿ

0
65

ಕಲಬುರಗಿ: ಶಹಬಾದ್ ಸಮಿಪದ ರಾಷ್ಟೀಯ ಹೆದ್ದಾರೆಗೆ ಹೊಂದಿಕೊಂಡಿರುವ ಶಂಕರವಾಡಿ ಗ್ರಾಮದ ಕಾಗಿಣಾ ಸೇತುವೆಯ ಬಳಿಯ ರಘುಜಿ ಕಾರ್ಖಾನೆಯ ಮುಂಭಾಗದಲ್ಲಿ ಆಕಸ್ಮಿಕ ಆ್ಯಂಬುಲೆನ್ಸ್ ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು ಮಧ್ಯಾಹ್ನ ನಡೆಸಿದೆ.

ಚಿತ್ತಾಪುರ ಸರಕಾರಿ ಆಸ್ಪತ್ರೆಯ 108 ಆ್ಯಂಬುಲೆನ್ಸ್ ಖಾಲಿ ಜಂಬೋ ಆಕ್ಸಿಜನ್ ಸಿಲೆಂಡರ್ ಹೊತ್ತು ಕಲಬುರಗಿ ನಗರಕ್ಕೆ ಹೊರಟಿತ್ತು. ಮಾರ್ಗ ಮದ್ಯೆ ಆ್ಯಂಬುಲೆನ್ಸ್ ಇಂಜಿನಲ್ಲಿ ಆಕಾಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ ವಾಹನದಲ್ಲಿ ಮೂವರು ಸಿಬ್ಬಂದಿ ಹಾಗೂ  ಚಾಲಕ ವಾಹನದಿಂದ ಕೆಳಗೆ ಇಳಿದ್ದು ಪ್ರಾಣ ರಕ್ಷಿಸಿಕೊಂಡಿದ್ದಾರೆ.

Contact Your\'s Advertisement; 9902492681

ಪಿಎಸ್ಐ ತೀರುಮಲ್ಲೇಶ್ ಎಎಸ್ಐಗಳಾದ ವೆಂಕಟೇಶ, ಅಶೋಕ ಕಟ್ಟಿ ಹಾಗೂ ಪೊಲೀಸ್ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಯತ್ನಿಸಿದ್ದಾರು. ಬೆಂಕಿ ತೀವ್ರತೆ ಕಂಡು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ತಕ್ಷಣವೇ ಅಗ್ನಿ ಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಆ್ಯಂಬುಲೆನ್ಸ್ ಮುಂಬಾಗ ಸಂಪೂರ್ಣ ಸುಟ್ಟು ಹೋಗಿದ್ದು. ಯಾವುದೇ ರೀತಿ ಜೀವ ಹಾನಿ ಉಂಟಾಗಿಲ್ಲ.

ಈ ಕುರಿತು ಶಹಬಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here