ಆಕ್ಸಿಜನ್ ಪ್ಲಾಂಟ್ ಉದ್ಘಾಟಿಸಿದ ಸಚಿವ ಆರ್.ಶಂಕರ

0
23

ಸುರಪುರ: ತಾಲೂಕು ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಆಕ್ಸಿಜನ್ ಪ್ಲಾಂಟ್‌ನ್ನು ತೋಟಗಾರಿಕೆ ಮತ್ತು ರೇಷ್ಮೆ ಸಚಿವ ಹಾಗು ಯಾದಗಿರಿ ಜಿಲ್ಲಾ ಉಸ್ತುವಾರಿ ಮಂತ್ರಿ ಆರ್.ಶಂಕರ ಉದ್ಘಾಟಿಸಿದರು.

ನಂತರ ಮಾತನಾಡಿದ ಸಚಿವರು,ಆಸ್ಪತ್ರೆಯಲ್ಲಿನ ಮೂವತ್ತು ಜನ ಸೊಂಕಿತರಿಗೆ ಏಕಕಾಲಕ್ಕೆ ಆಕ್ಸಿಜನ್ ಸರಬರಾಜು ಮಾಡುವ ಸಾಮರ್ಥ್ಯವುಳ್ಳ ಪ್ಲಾಂಟ್ ನಿರ್ಮಿಸಲಾಗಿದ್ದು,ಆಸ್ಪತ್ರೆಯಲ್ಲಿ ಯಾವುದೇ ಸಮಸ್ಯೆ ಇಲ್ಲದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.ಅಲ್ಲದೆ ಆಸ್ಪತ್ರೆಗೆ ವೆಂಟಿಲೇಟರ್ ವ್ಯವಸ್ಥೆ ಇದೆ ಹಾಗು ವೈದ್ಯರನ್ನು ಮತ್ತು ಫೀಜಿಶಿಯನ್ ಸ್ಟಾಪ್ ನರ್ಸ್‌ಗಳನ್ನು ಒದಗಿಸಲು ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆಯ ಆಯುಕ್ತರಿಗೆ ಶಾಸಕ ರಾಜುಗೌಡ ಅವರ ಜೊತೆಗೂಡಿ ಮಾತನಾಡಿ ವೈದ್ಯರ ಸಮಸ್ಯೆಯನ್ನು ಪರಿಹರಿಸುವುದಾಗಿ ಭರವಸೆ ನೀಡಿದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಶಾಸಕ ನರಸಿಂಹ ನಾಯಕ (ರಾಜುಗೌಡ) ಮಾತನಾಡಿ,ಆಸ್ಪತ್ರೆಗೆ ಈಗಾಗಲೇ ರೆಮಿಡಿ ಸಿವಿರ್ ಚುಚ್ಚುಮದ್ದು ಸರಬರಾಜು ಆಗುತ್ತಿದ್ದು ಸದ್ಯ ರೆಮಿಡಿ ಸಿವಿರ್ ಕೊರತೆ ಇಲ್ಲ.ಆದರೆ ಲಸಿಕೆಯ ಕೊರತೆ ಇದ್ದು ಲಸಿಕೆ ಸರಬರಾಜು ಮಾಡುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಲಸಿಕೆ ಲಭ್ಯವಿರುವುದಾಗಿ ತಿಳಿಸಲು ಬಂದ ಜಿಲ್ಲಾ ಆರೋಗ್ಯಾಧಿಕಾರಿ ಡಾ: ಇಂದುಮತಿ ಕಾಮಶೆಟ್ಟಿ ಅವರ ವಿರುದ್ಧ ಅಸಮಧಾನಗೊಂಡ ಶಾಸಕ ರಾಜುಗೌಡ ಸರಿಯಾಗಿ ಮಾಹಿತಿ ಇಲ್ಲದೆ ಯಾಕೆ ಹೇಳುತ್ತೀರಿ ಎಂದು ಅಸಮಧಾನಗೊಂಡು,ಎರಡನೇ ಹಂತದ ಸಲಿಕೆ ನೀಡಲು ಲಭ್ಯವಿದೆ ಆದರೆ ಮೊದಲ ಲಸಿಕೆ ಪಡೆಯುವವರಿಗೆ ವಾಕ್ಸಿನ್ ಇಲ್ಲದ ಬಗ್ಗೆ ನಿಜವನ್ನು ಹೇಳುವಂತೆ ತಿಳಿಸಿದರು.ನಂತರ ಜಿಲ್ಲಾ ಆರೋಗ್ಯಾಧಿಕಾರಿಗಳು ಲಸಿಕೆಯ ಕೊರತೆ ಇರುವುದಾಗಿ ಒಪ್ಪಿಕೊಂಡ ಪ್ರಸಂಗವು ನಡೆಯಿತು.

ಈ ಸಂದರ್ಭದಲ್ಲಿ ಸಂಸದ ರಾಜಾ ಅಮರೇಶ್ವರ ನಾಯಕ ಜಿಲ್ಲಾಧಿಕಾರಿ ಡಾ: ರಾಗಪ್ರಿಯ ಆರ್. ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಎಸ್ಪಿ ವೇದಮೂರ್ತಿ ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ ವೈದ್ಯಾಧಿಕಾರಿ ಹರ್ಷವರ್ಧನ ರಫಗಾರ ಬಿಜೆಪಿ ಜಿಲ್ಲಾಧ್ಯಕ್ಷ ಡಾ: ಶರಣಭೂಪಾಲರಡ್ಡಿ ಬಿ.ಎಮ್.ಹಳ್ಳಿಕೋಟಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here