ಸುರಪುರ: ಈಗ ಕೊರೊನಾ ಸೊಂಕು ಹೆಚ್ಚು ಜನರಿಗೆ ತಗುಲುತ್ತಿರುವುದಕ್ಕೆ ಮಾಸ್ಕ್ ಧರಿಸದೆ ಇರವುದು ಕಾರಣವಾಗಿದೆ.ಆದ್ದರಿಂದ ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇವೆ ಯಾರೂ ಮನೆಯಿಂದ ಮಾಸ್ಕ್ ಇಲ್ಲದೆ ಹೊರಗೆ ಬರಬೇಡಿ ಎಂದು ಶಾಸಕ ನರಸಿಂಹ ನಾಯಕ (ರಾಜುಗೌಡ) ಮನವಿ ಮಾಡಿದರು.
ನಗರದ ವಾರ್ಡ್ ಸಂಖ್ಯೆ ೨೦ರ ಹಸನಾಪುರದಲ್ಲಿ ಇಪ್ಪತ್ತಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭೇಟಿ ನೀಡಿದ ಶಾಸಕರು,ಈಗ ದೇಶದಲ್ಲಿಯೆ ಒಂದು ರೀತಿಯ ಸಂಕಷ್ಟ ಕಾಲವಿದೆ.ಕೊರೊನಾ ಸೊಂಕು ಹೇಗೆ ಹರಡುತ್ತಿದೆ ಎಂದು ಯಾರಿಗೂ ತಿಳಿಯುತ್ತಿಲ್ಲ.ಆದ್ದರಿಂದ ದಯವಿಟ್ಟು ಯಾರೂ ಮನೆಯಿಂದ ಹೊರಗೆ ಬರಬೇಡಿ ಹಾಗೊಮ್ಮೆ ಬರುವ ಅವಶ್ಯಕತೆ ಇದ್ದರೆ ಮಾಸ್ಕ್ ಧರಿಸಿಯೇ ಬರುವಂತೆ ತಿಳಿಸಿದರು.
ಆಕ್ಸಿಜನ್ ಪ್ಲಾಂಟ್ ಉದ್ಘಾಟಿಸಿದ ಸಚಿವ ಆರ್.ಶಂಕರ
ಅಲ್ಲದೆ ಎಲ್ಲರು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಯನ್ನು ಮಾಡಿಸಿಕೊಳ್ಳಿ.ನಿರ್ಲಕ್ಷ್ಯ ತೋರುವುದರಿಂದಲೇ ಅನಾಹುತಗಳಾಗುತ್ತಿವೆ.ಆದ್ದರಿಂದ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ತಿಳಿಸಿದರು ಅಲ್ಲದೆ ಪೌರಾಯುಕ್ತರಿಗೆ ಕೂಡಲೇ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಕ್ರಮ ವಹಿಸುವಂತೆ ಸೂಚಿಸಿದರು.ನಂತರ ಇದೇ ಸಂದರ್ಭದಲ್ಲಿ ವಾರ್ಡಿನ ಎಲ್ಲಾ ಮನೆಗಳಿಗೂ ವಿತರಣೆ ಮಾಡುವಂತೆ ಮಾಸ್ಕ್‌ಗಳನ್ನು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ನೀಡಿದರು.
ಈ ಸಂದರ್ಭದಲ್ಲಿ ವಾರ್ಡ್ ಸದಸ್ಯರಾದ ಲಕ್ಷ್ಮೀ ಮಲ್ಲು ಬಿಲ್ಲವ್ ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ ಪೌರಾಯುಕ್ತ ಜೀವನಕುಮಾರ ಮಟ್ಟಿಮನಿ ಮುಖಂಡರಾದ ವೇಣುಗೋಪಾ ಜೇವರ್ಗಿ ಬಿ.ಎಮ್.ಹಳ್ಳಿಕೋಟೆ ಹೊನ್ನಪ್ಪ ತಳವಾರ ಮಲ್ಕಪ್ಪ ತೇಲ್ಕರ್ ಅರವಿಂದ್ ಬಿಲ್ಲವ್ ಸೇರಿದಂತೆ ಅನೇಕರಿದ್ದರು.