ಕಾವ್ಯ ಕಟ್ಟಲು ಅಧ್ಯಯನಶೀಲತೆ ಮುಖ್ಯ: ಮಧು ನಾಯ್ಕ

0
149

ಕಲಬುರಗಿ : ಉದಯೋನ್ಮುಖ ಕವಿಗಳು ತಮ್ಮ ಕಾವ್ಯವನ್ನು ಕಟ್ಟಲು ಮೊದಲು ಅಧ್ಯಯನಶೀಲತೆ ಮುಖ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಬರಹಗಾರರ ಬಳಗದ ಅಧ್ಯಕ್ಷ ಮಧು ನಾಯ್ಕ ಎಲ್ ಹೇಳಿದರು.

ಕಲಬುರ್ಗಿ ಬರಹಗಾರರ ಬಳಗದ ಜಿಲ್ಲಾ ಘಟಕ ಆಯೋಜಿಸಿ ದ “ಬಸವ ಜ್ಯೋತಿ ” ಎಂಬ ರಾಜ್ಯ ಮಟ್ಟದ ಅಂತರ್ಜಾಲ ಕವಿಗೋಷ್ಠಿಯಲ್ಲಿ ಪಾಲ್ಗೊಂಡು ಆಶಯ ನುಡಿ ಮಾತನಾಡಿದರು. ಈ ಅಧ್ಯಯನಶೀಲತೆ ಇಲ್ಲದ ಕಾವ್ಯ ಸೊರಗುತ್ತದೆ.ಗಟ್ಟಿ ಸಾಹಿತ್ಯಕ್ಕೆ ಹಿರಿಯ ಸಾಹಿತಿಗಳ ಕಾವ್ಯ ಓದುವ, ಆಸ್ವಾದಿಸುವ ಕಾರ್ಯ ಕೈಗೊಳ್ಳಬೇಕು ಎಂದರು.

Contact Your\'s Advertisement; 9902492681

ಸಾಹಿತಿ ಮತ್ತು ಪತ್ರಕರ್ತ ಧರ್ಮಣ್ಣ ಎಚ್ ಧನ್ನಿ ಅಧ್ಯಕ್ಷತೆ ವಹಿಸಿ, ನಾವು ಬರೆದ ಕವನ ಕವಿತ್ವ ಹೊಂದಬೇಕು.ಇಂದಿನ ಸಂಕೀರ್ಣ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುವ ಕಾವ್ಯಗಳು ಪ್ರಕಟವಾಗಬೇಕಾಗಿದೆ.ವಾಸ್ತವ ನೆಲೆಗಟ್ಟಿನಲ್ಲಿ ಸಾಹಿತ್ಯದ ಜೀವಂತಿಕೆ ಎದ್ದು ಕಾಣಬೇಕು.ಓದಬೇಕು ಓದಿ ಅರಿಯಬೇಕು.ಆ ಮೂಲಕ ಸಾಹಿತ್ಯ ಚಲನಶೀಲತೆ ಪಡೆದು ಕೊಳ್ಳುತ್ತದೆ ಎಂದರು.

ಬಳಗದ ಜಿಲ್ಲಾಧ್ಯಕ್ಷ ಮಹಾಂತೇಶ ಎನ್ ಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಹಾಸನ ಜಿಲ್ಲಾ ಘಟಕಧ್ಯಕ್ಷ ಅನಂತರಾಜು, ಚಿಕ್ಕಮಗಳೂರು ಜಿಲ್ಲಾ ಘಟಕಧ್ಯಕ್ಷ ಮಂಜಪ್ಪ ಎಲ್ ಪಾಲ್ಗೊಂಡಿದ್ದರು.

ಇದೆ ಸಂದರ್ಭದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಪಾಲ್ಗೊಂಡ ಅಂತರ್ಜಾಲ ಕವಿಗೋಷ್ಠಿಯಲ್ಲಿ ಸುಭಾಶ ಚವ್ಹಾಣ(ಪ್ರಥಮ), ಶೋಭಾ ವಿಜಯನಗರ(ದ್ವಿತೀಯ), ರೇಣುಕಾ ಡಾಂಗೆ(ತೃತೀಯ) ಹಾಗೂ ಸುರೇಶ ಕಲಾಪ್ರಿಯ ಮತ್ತು ರಶ್ಮಿ ಅನೀಲ ಮಂಗಳೂರು ಅವರ ಕವನಗಳು ತೀರ್ಪುಗಾರರ ಮೆಚ್ಚುಗೆ ಪಡೆದವು. ಸುಮಾರು ನಾಲ್ಕು ತಾಸುಗಳ ಅವಧಿಯಲ್ಲು 60 ಜನ ಕವಿಗಳು ಭಾಗವಹಿಸಿ ಸ್ವರಚಿತ ಕವನ ವಾಚನ ಮಂಡಿಸಿದರು. ಶಿಕ್ಷಕಿ ಸುರೇಖಾ ಬಿರಾದಾರ ಸ್ವಾಗತಿಸಿದರು.ಕಸ್ತೂರಿ ರಾಜೇಶ್ವರ ನಿರೂಪಿಸಿದರು. ಅನುಸೂಯಾ ನಾಗನಳ್ಳಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here