ಕಲಬುರಗಿ: ಕೋವಿಡ್ ವೈದ್ಯಕೀಯ ತುರ್ತು ಸಂದರ್ಭದಲ್ಲಿಯೂ ಇಲ್ಲಿರುವ ಬೃಹತ್ತಾದಂತಹ ಇಎಸ್‍ಐಸಿ ಆಸ್ಪತ್ರೆ ಸಂಪೂರ್ಣ ಬಳಕೆಯಾಗುತ್ತಿಲ್ಲವೆಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ, ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ವಿಷಾದಿಸಿದ್ದಾರೆ.
ಇಲ್ಲಿನ ಸೇಡಂ ರಸ್ತೆಯಲ್ಲಿರುವ ಇಎಸ್‍ಐಸಿ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿಗಳನ್ನೆಲ್ಲ ಖುದ್ದು ಪರಿಶೀಲಿಸಿ, ನಿರ್ದೇಶಕಿ ಡಾ. ಐವಾನ್ ಲೋಬೋ ಅವರೊಂದಿಗೆ ಮಾತುಕತೆ ನಡೆಸಿರುವ ಡಾ. ಅಜಯ್ ಸಿಂಗ್ ಇಲ್ಲಿ 500 ಹಾಸಿಗೆಗಳ ಸಾಮಥ್ರ್ಯದ ವಾರ್ಡ್‍ಗಳಿವೆ, ಆದರೆ ಅದಕ್ಕೆ ತಕ್ಕಂತೆ ಆಕ್ಸೀಜನ್ ಪೂರೈಸುವ ಘಟಕವಿಲ್ಲ, ಹೀಗಾಗಿ ಇಂತಹ ಆಸ್ಪತ್ರೆಬೆಡ್ ಹಾಹಾಕಾರದಲ್ಲಿಯೂ ಇಲ್ಲೀಗ ಕೇವಲ 130 ಬೆಡ್‍ಗಳು ಮಾತ್ರ ಕೋವಿಡ್ ರೋಗಿಗಳಿಗೆ ಬಳಕೆಯಾಗುವಂತಾಗಿದೆ. ತುರ್ತಾಗಿ ಇಲ್ಲಿ 25 ಕೆಎಲ್ ಸಾಮಥ್ರ್ಯದ ಆಕ್ಸೀಜನ್ ಉತ್ಪಾದನೆ ಘಟಕ ಸ್ಥಾಪನೆಯಾದಲ್ಲಿ ಇಡೀ ಆಸ್ಪತ್ರೆಯನ್ನು ಬಲು ಸಮರ್ಥವಾಗಿ ಕೋವಿಡ್ ಸೇರಿದಂತೆ ಎಲ್ಲಾ ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಬಳಸಬಹುದು ಎಂದು ಡಾ. ಅಜಯ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಈ ಆಸ್ಪತ್ರೆಗೆ ಕಳೆದ ವರ್ಷವೇ ಆಕ್ಸೀಜನ್ ಉತ್ಪಾದನೆ ಘಟಕ ಮಂಜೂರಾಗಿದ್ದರೂ ಟೆಂಡರ್ ಇತ್ಯಾದಿ ಪ್ರಕ್ರಿಯೆಗಳಲ್ಲಿಯೇ ನರಳುತ್ತಿರೋದು ಭೇಟಿ ಸಂದರ್ಭದಲ್ಲಿ ಗೊತ್ತಾಗಿದೆ. ಸ್ಥಳೀಯವಾಗಿರುವ ಸಂಸದರು ಈ ಬಗ್ಗೆ ಇಷ್ಟೊತ್ತಿಗಾಗಲೇ ಗಮನ ಹರಿಸಬೇಕಿತ್ತು, ಇಂತಹ ವೈದ್ಯಕೀಯ ತುರ್ತು ಕಾಲದಲ್ಲೂ ಟೆಂಡರ್‍ನಲ್ಲೇ ಮಹತ್ವದ ಯೋಜನೆ ಸಿಲುಕಿ ನರಳಿದರೆ ಇಂತಹ ಬೃಹತ್ತಾದಂತಹ ಆಸ್ಪತ್ರೆ ಹೊಂದಿದ್ದರೂ ಸ್ಥಳೀಯ ಜನರಿಗೆ ಅದಿರಂದ ಪ್ರಯೋಜನವೇನು? ಎಂದು ಡಾ. ಸಿಂಗ್ ಖಾರವಾಗಿ ಪ್ರಶ್ನಿಸಿದ್ದಾರೆ.
ಕಳೆದ ವರ್ಷವೇ ಟೆಂಡರ್ ಕರೆಯಲಾಗಿತ್ತಾದರೂ ಹಲವಾರು ತಾಂತ್ರಿಕ ಕಾರಣಗಳಿಂದ ಟೆಂಡರ್ ಪ್ರಕ್ರಿಯೆ ರದ್ದಾಗಿದೆ. ಅದಿನ್ನೂ ಪೂರ್ಣಗೊಂಡಿಲ್ಲವೆಂಬ ಸಂಗತಿ ಗಮನಕ್ಕೆ ಬಂದಿದೆ. ಇಲ್ಲಿನ ಸಂಸದರು ಬೇಗ ಈ ವಿಚಾರವಾಗಿ ಮಧ್ಯಪ್ರವೇಶ ಮಾಡಬೇಕು, ಕೇಂದ್ರದ ಮೇಲೆ ಒತ್ತಡ ತಂದು ತುರ್ತಾಗಿ ಆಕ್ಸೀಜನ್ ಘಟಕ ಇಲ್ಲಿ ತಲೆ ಎತ್ತುವಂತೆ ಮಾಡಬೇಕೆಂದು ಡಾ. ಅಜಯ್ ಸಿಂಗ್ ಆಗ್ರಹಿಸಿದ್ದಾರೆ.
130 ಬೆಡ್ ಕೋವಿಡ್ ಹಾಸಿಗೆಗಳಿರುವ ಇಲ್ಲೀಗ 1. 3 ಕೆಎಲ್ ಸಾಮಥ್ರ್ಯದ ಆಕ್ಸೀಜನ್ ಜನರೇಟರ್ ಪಡೆಯಲಾಗುತ್ತಿದೆ. ಅದು ಮೇ 31 ರೊಳಗೆ ಇಲ್ಲಿಗೆ ಬರಲಿದೆ. ಈ ಪ್ರಮಾಣದ ಆಕ್ಸೀಜನ್ ಈಗಿರುವ ಹಾಸಿಗೆÀಗಳಿಗೂ ಸಾಲದು. ಪ್ರತ್ಯೇಕ 25 ಕೆಎಲ್ ಆಕ್ಸೀಜನ ಉತ್ಪಾದನೆ ಘಟಕವೇ ಇಲ್ಲಿನ ಸಮಸ್ಯೆಗೆ ಪರಿಹಾರ. ಇನ್ನೂ 3 ನೇ ಅಲೆ ಬರೋದಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಹೀಗಾಗಿ ಆವುದೇ ಸಂದರ್ಭ ಬಂದದರೂ ಸಮರ್ಥವಾಗಿ ಎದುರಿಸಬೇಕಾದಲ್ಲಿ ಇಎಸ್‍ಐಸಿಯಲ್ಲಿ ತುರ್ತಾಗಿ ಆಕ್ಸೀಜನ್ ಉತ್ಪಾದನೆ ಘಟಕ ಸ್ಥಾಪನೆಯಾಗಲೇಬೇಕು. ಈ ಸಂದರ್ಭ ಅರಿತು ಸಂಬಂಧಪಟ್ಟವರ ಮೇಲೆ ಒತ್ತಡ ಹೇರುವ ಮೂಲಕ ಇಲ್ಲಿನ ಸಂಸದರು ಈ ಕೆಲಸ ಆದ್ಯತೆ ಮೇರೆಗೆ ಮಾಡಬೇಕೆಂದು ಡಾ. ಅಜಯ್ ಸಿಂಗ್ ಒತ್ತಾಯಿಸಿದ್ದಾರೆ.