ಜಾತೀಯತೆ, ಕಂದಾಚಾರ, ಮೌಡ್ಯತೆ ವಿರುದ್ಧ ಎದೆಗಾರಿಕೆ ತೋರಿದವರು ಬಸವಣ್ಣನವರು-ದೇವಣಿ

0
25

ಶಹಾಬಾದ:ರಾಜಾಶಾಹಿ ವ್ಯವಸ್ಥೆ ಮತ್ತು ಜಾತೀಯತೆ ತಾಂಡವವಾಡುತ್ತಿರುವ ಸಂದರ್ಭದಲ್ಲಿ ಸಮಾಜದ ಬೇರೂರಿದ್ದ ಜಾತೀಯತೆ, ಅಂಧಕಾರ, ಮೌಡ್ಯತೆ, ಕಂದಾಚಾರವನ್ನು ಹೋಗಲಾಡಿಸಲು ಅರಸನ ಆಡಳಿತದ ವಿರುದ್ಧ ದಿಟ್ಟ ಎದೆಗಾರಿಕೆ ತೋರಿದವರು ಅಣ್ಣ ಬಸವಣ್ಣನವರು ಎಂದು ಸರಸ್ವತಿ ಸಾಂಸ್ಕೃತಿಕ ಕಲಾ ಟ್ರಸ್ಟ್ ಟ್ರಸ್ಟ್ ಕಾರ್ಯದರ್ಶಿಯಾದ ಮಹೇಶ್ ದೇವಣಿ ಹೇಳಿದರು.

ಅವರು ಸರಸ್ವತಿ ಸಾಂಸ್ಕೃತಿಕ ಕಲಾ ಟ್ರಸ್ಟ್ (ರಿ) ವತಿಯಿಂದ ದೇವನ ತೆಗನೂರ ಗ್ರಾಮದಲ್ಲಿ ಆಯೋಜಿಸಲಾದ ವಿಶ್ವಗುರು ಬಸವಣ್ಣನವರ 888 ನೇಯ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ರಾಜಾಶಾಹಿ ವ್ಯವಸ್ಥೆಯಲ್ಲಿ ಮಂತ್ರಿಯಾಗಿ ಕೆಲಸ ನಿರ್ವಹಿಸುತ್ತ, ಸಮಾಜದಲ್ಲಿ ಮೇಳುಕೀಳು ಭಾವನೆಯನ್ನು ತೊಡೆದು ಹಾಕಲು ಅರಸನ ವಿರುದ್ಧ ಅಂದು ಅಂತರ್ಜಾತಿ ವಿವಾಹ ಮಾಡಿದ  ಪ್ರಪಂಚದ ಮೊಟ್ಟ ಮೊದಲ ದಾರ್ಶನಿಕ ಪುರುಷರೆಂದರೆ ಬಸವಣ್ಣನವರು ಎಂದು ಹೇಳಿದರು. 

ರೈತ ಸಂಘ ಅಧ್ಯಕ್ಷ ಅಪ್ಪಾಸಾಬ ಸರಡಗಿ ಮಾತನಾಡಿ, ಜ್ಯೋತಿ ತಾನು ಬೆಳುಗುವುದಲ್ಲದೇ, ಇತರರಿಗೆ ಬೆಳಕು ಕೊಟ್ಟ ರೀತಿಯಲ್ಲಿ ಕುಲಕ್ಕೊಬ್ಬ ಶರಣರನ್ನು ಸೃಷ್ಠಿಸಿ, ಆಧ್ಯಾತ್ಮಿಕ ಸಂಸತ್ತು ಅನುಭವ ಮಂಟಪವನ್ನು ರೂಪಿಸಿದವರು ಬಸವಣ್ಣನವರು ಎಂದು ಹೇಳಿದರು.

ಗ್ರಾಮ ಪಂಚಾಯತ್ ಸದಸ್ಯರಾದ ಶಿವಾನಂದ್ ಬಿ. ಮಕಾಶಿ ಮಾತನಾಡಿ, ೧೨ನೇ ಶತಮಾನದಲ್ಲಿಯೇ ಸರ್ವರಿಗೂ ಸಮಪಾಲು, ಸಮಬಾಳು ಬಿತ್ತಿದಂಥ ಬೀಜ ಇಂದು ವಿಶ್ವದಾದ್ಯಂತ ಪಸರಿಸಿದೆ. ಅವರು ಎಂದಿಗೂ ಕೇವಲ ಹೇಳುವಂತವರಾಗಿರಲಿಲ್ಲ. ನುಡಿದಂತೆ ನಡೆದವರು.ವಿಪ್ರ ಸಮಾಜದಲ್ಲಿ ಹುಟ್ಟಿ ಅಲ್ಲಿನ ಗೊಡ್ಡು ಆಚರಣೆಗಳನ್ನು ತೀರಸ್ಕರಿಸಿ ಲಿಂಗಾಯತ ಧರ್ಮವನ್ನು ಕೊಟ್ಟರು.ಜಗತ್ತು ಇಂದು ಬಸವಣ್ಣವರನ್ನು ಒಪ್ಪಿಕೊಂಡಿದೆ ಮತ್ತು ಅಪ್ಪಿಕೊಂಡಿದೆ ಎಂದರೆ ಅದು ಅವರ ಕಾಯಕ, ದಾಸೋಹ ಹಾಗೂ ನುಡಿದಂತೆ ನಡೆಯುವ ತತ್ವಗಳಿಂದ ಮಾತ್ರ ಎಂದು ಹೇಳಿದರು.

ಮರತೂರ ಗ್ರಾಮ ಪಂಚಾಯತ ಉಪಾಧ್ಯಕ್ಷ ಸುಜಾತ ನಾಗಯ್ಯ ಗುತ್ತೇದಾರ್ , ದತ್ತ ಕುಮಾರ್, ಶಿವಕುಮಾರ್ , ಮಹದೇವ ಇತರರು ಭಾಗಿಯಾಗಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here