ಸೇವಾ ಟ್ರಸ್ಟ್ ಗಳ ಸಹಯೋಗದಲ್ಲಿ ಕೊರೊನಾ ಜಾಗೃತಿ ಅಭಿಯಾನ

0
54

ಜೇವರ್ಗಿ: ಲಾಕ್ಡೌನ್ ಹಿನ್ನೆಲೆಯಲ್ಲಿ ಜೇವರ್ಗಿ ತಾಲ್ಲೂಕಿನಲ್ಲಿ ಸಾರ್ವಜನಿಕರಿಗೆ ಕರೋನವೈರಸ್ ನ ಕುರಿತು ಜಾಗೃತಿ ಅಭಿಯಾನವನ್ನು ಮಾತೋಶ್ರೀ ಶ್ರೀಮತಿ ಪಾರ್ವತಿ ವಿ ಮುದ್ದಡಗಿ ಸೇವಾ ಟ್ರಸ್ಟ್ ಹಾಗೂ ಹಂಸವಾಹಿನಿ ಸಂಗೀತ ಕಲಾ ಮತ್ತು ಶಿಕ್ಷಣ ಸೇವಾ ಟ್ರಸ್ಟ್ ಜಂಟಿಯಾಗಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿ ಕಟ್ಟಿಸಂಗಾವಿ ಗ್ರಾಮ ಸೇರಿದಂತೆ ಪುರಸಭೆ ವ್ಯಾಪ್ತಿಯಲ್ಲಿ ಬರುವ ವಿವಿಧ ವಾರ್ಡಗಳಲ್ಲಿ ಸಂಚರಿಸಿ ಧ್ವನಿವರ್ಧಕದ ಮೂಲಕ ಪ್ರಚಾರ ಕೈಗೊಳ್ಳಲಾಯಿತು .

ಕರೋನವೈರಸ್ ಮಹಾಮಾರಿ ಕಾಯಿಲೆಯಾಗಿದ್ದು ಇದರಿಂದ ರಕ್ಷಿಸಿಕೊಳ್ಳಲು ಪ್ರತಿಯೊಬ್ಬರೂ ಮನೆಯಿಂದ ಹೊರಗಡೆ ಬರುವಾಗ ಕಡ್ಡಾಯವಾಗಿ ಮಾತುಗಳನ್ನು ಬಳಕೆ ಮಾಡಬೇಕು. ಹಾಗೂ ಒಂದು ಗಂಟೆಗೆ ಒಂದು ಸಾರಿ ಸಾಬೂನಿನಿಂದ ಕೈ ತೊಳೆಯಬೇಕು.

Contact Your\'s Advertisement; 9902492681

ಅಲ್ಲದೆ ಬೆಳಿಗ್ಗೆ ಆರರಿಂದ ಹತ್ತು ಗಂಟೆ ವರೆಗೆ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಸಮಯ ಆಕಾಶವನ್ನು ನಿಗದಿಪಡಿಸಲಾಗಿ . ಅನವಶ್ಯಕವಾಗಿ ಮನೆಯಿಂದ ಹೊರಗಡೆ ಬರಬಾರದು ,ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಸೇರಿದಂತೆ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಬೇಕೆಂದು . ತಿಳಿಸಲಾಯಿತು.

ಕರೋನವೈರಸ್ ಭಾರತ ದೇಶದಿಂದ ಹೊಡೆದು ಓಡಿಸಬೇಕಾದರೆ ಕಡ್ಡಾಯವಾಗಿ ಎಲ್ಲರೂ ವ್ಯಾಕ್ಸಿನೇಷನ್ ಮಾಡಿಸಿಕೊಳ್ಳಬೇಕು. ಹಾಗೂ ಈ ಕುರಿತಂತೆ ಇರುವ ತಪ್ಪು ಅಭಿಪ್ರಾಯಗಳನ್ನು, ಮೂಢನಂಬಿಕೆಗಳನ್ನು ಹೊಡೆದೋಡಿಸಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಆರೋಗ್ಯ ಕೇಂದ್ರ ಅಥವಾ ತಾಲೂಕ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಬೇಕೆಂದು ಮನವೊಲಿಸಲಾಯಿತು.

ಕರೋನವೈರಸ್ ನ ರೋಗದ ಲಕ್ಷಣಗಳು ಕಂಡುಬಂದರೆ ಕೂಡಲೇ ಹತ್ತಿರದ ಆಸ್ಪತ್ರೆಯನ್ನು ಸಂಪರ್ಕಿಸಿ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ಸುಮ್ಮಸುಮ್ಮನೆ ವದಂತಿಗಳಿಗೆ ಕಿವಿ ಕೊಡಬಾರದು. ಹಾಗೂ ಇದರಿಂದಾಗಿ ಉಂಟಾಗುವ ತೊಂದರೆಗಳಿಂದ ಇಡೀ ಕುಟುಂಬವನ್ನು ರಕ್ಷಣೆ ಕೊಳ್ಳಬೇಕಾದರೆ ಮೊದಲು ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ಎಂದು ತಿಳಿಸಲಾಯಿತು.

ಈ ಕರೋನಾ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತೋಶ್ರೀ ಶ್ರೀಮತಿ,ಪಾರ್ವತಿ ವಿ ಮುದ್ದಡಗಿ ಸೇವಾ ಟ್ರಸ್ಟ್ ನ ರಾಜು ಮುದ್ದಡಗಿ ಹಾಗೂ ಹಂಸವಾಹಿನಿ ಸಂಗೀತ ಕಲಾ ಮತ್ತು ಶಿಕ್ಷಣ ಸೇವಾ ಟ್ರಸ್ಟ್ ಸಿದ್ದಲಿಂಗ ಮಾಹುರು ಸೇರಿದಂತೆ ಸ್ವಯಂಸೇವಕ ಸದಸ್ಯರಾದ ಪತ್ತೆ ಮೊಮ್ಮದ್ ನಾಯ್ಕೋಡಿ, ಮಹೇಶ್ ಕೋಕಿಲ, ಮಹಮ್ಮದ್ ಗೌಸ್ ಇನಮ್ದಾರ್, ಶರಣು ನಿರಡಗಿ, ಪತ್ರುಪಟೇಲ್ ಗುತ್ತೇದಾರ್, ಕಾಸಿಮ್ ಪಟೇಲ್ ಜೇವರ್ಗಿ ದೇವಾನಂದ ದುಗನಕರ್ ಇತರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here