ಸುರಪುರ: ’ಕಲಬುರಗಿಯ ಖ್ಯಾತ ಪತ್ರಕರ್ತ ಜಯತೀರ್ಥ ಕಾಗಲಕರ ಶ್ರೇಷ್ಠ ಮಾನವತೆಯ ಪ್ರತೀಕವಾಗಿದ್ದರು. ಎಲ್ಲ ಜಾತಿ, ಧರ್ಮ, ಪ್ರಾಂತ, ಭಾಷೆ ಎಲ್ಲವುಗಳನ್ನೂ ಮೀರಿದ ’ಪತ್ರಿಕಾ ಸಂತರೇ’ ಆಗಿದ್ದರು. ಒಬ್ಬ ಪತ್ರಕರ್ತ ಹೇಗಿರಬೇಕೆಂಬುದಕ್ಕೆ ’ಕಾಗಲಕರ’ ಎಂಬವರ ಕಡೆಗೆ ನಿಸ್ಸಂಶಯವಾಗಿಯೂ ತೋರಿಸಬಹುದಾಗಿತ್ತು. ಆದರೆ ಅಂತಹ ’ಶ್ರೇಷ್ಠತೆಯ ವ್ಯಸನಿಯನ್ನು ಕಳೆದುಕೊಂಡ ನಾಡು ನೀಜಕ್ಕೂ ಬಡವಾಗಿದೆ’ ಎಂದು ಸುರಪುರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಹೇಳಿದ್ದಾರೆ.
’
ಅವರ ತಂದೆ ವ್ಹಿ.ಎನ್.ಕಾಗಲಕರರಂತೆಯೇ ಜಯತೀರ್ಥರೂ ಕೂಡ ನಿಸ್ವಾರ್ಥಿಗಳು, ಶುದ್ಧಹಸ್ತರೂ ಆಗಿದ್ದರು. ಸದಾ ಅವರ ಮನಸ್ಸು ಬಡವರ, ದೀನ-ದಲಿತರ ಕಡೆಯೇ ತುಡಿಯುತ್ತಿತ್ತು. ಸಮಸ್ಯೆಗಳನ್ನು ಬರಹದಲ್ಲಿ ಬಿಚ್ಚಿಟ್ಟು, ಅವರು ಯಾವಾಗಲೂ ಸಾರ್ವಜನಿಕರಿಗೆ ಉಪಯೋಗವಾಗುವಂಥದ್ದನ್ನು ಮಾಡುತ್ತಿದ್ದರು. ಸಮಸ್ಯೆಗಳ ಪರಿಹಾರವಾದಾಗ ಅವರಿಗೆ ತಮ್ಮ ಮನೆಯ ಸಮಸ್ಯೆಯೇ ಪರಿಹಾರವಾಯ್ತೇನೋ ಎಂಬಂತೆ ಅವರು ಸಂತೋಷಪಡುತ್ತಿದ್ದರು.’
ಎಎಸ್‌ಐ ಮಲ್ಲಿಕಾರ್ಜುನ್ ಪಂಚ್‌ಕಟ್ಟಿ ಶ್ರದ್ಧಾಂಜಲಿ
ಕಳೆದ ನಾಲ್ಕು ದಶಕಗಳಿಂದ ಪತ್ರಿಕಾರಂದಲ್ಲಿ ದುಡಿದು, ಅದರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದ್ದರು. ಈಗ ತಮ್ಮ ನೆಚ್ಚಿನ ಪತ್ರಿಕೆಯ ಶತಮಾನೋತ್ಸವದ ಸಂದರ್ಭದಲ್ಲಿಯೇ ’ಜಯತೀರ್ಥ’ರ ನಿರ್ಗಮನ ತುಂಬ ಆಘಾತಕಾರಿಯಾಗಿದೆ.
ಜಾಲವಾದಿಯವರೇ, ’ಕಲ್ಯಾಣ ಕರ್ನಾಟಕ ಪುರವಣಿಗೆ’ ಏನಾದರೂ ಕಳಸ್ರಿ’ ಅಂತ ಸದಾ ನಗುತ್ತಲೇ ಫೋನಾಯಿಸುತ್ತಿದ್ದ, ಅವರು ಇನ್ನೂ ಕೇವಲ ನೆನಪು ಮಾತ್ರ. ’ಕಾಗಲಕರ’ ಎಂಬ ಹೆಸರಿನಲ್ಲಿಯೇ ತುಂಬಿದೆ ಮಮತೆ, ಪ್ರೀತಿ, ಅಂತಃಕರುಣ! ವಿಧಿ ಅದನ್ನೂ ಸಹಿಸಲಿಲ್ಲ. ನಾವು ’ಕೋವಿಡ್’ನ ಶಪಿಸುವುದೋ, ವಿಧಿಯನ್ನು ಶಪಿಸುವುದೋ ಒಂದೂ ತಿಳಿಯದಾಗಿದೆ. ಒಂದು ಮಾನವೀಯ ಮೌಲ್ಯದ ಪರಿಪೂರ್ಣತೆಯನ್ನೇ ಕಳುಕೊಂಡಿದ್ದೇವೆ. ದೇವರು ಅವರ ಕುಟುಂಬದವರಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಜಾಲವಾದಿ ಹೇಳಿದ್ದಾರೆ.