ಶಹಾಬಾದ ಇಎಸ್‍ಐ ಆಸ್ಪತ್ರೆಗೆ ಉಸ್ತುವಾರಿ ಸಚಿವರ ಭೇಟಿ ನಾಳೆ: ಭರದ ಸಿದ್ಧತೆ

0
136

ಶಹಾಬಾದ: ನಗರದ ಇಎಸ್‍ಐ ಆಸ್ಪತ್ರೆಗೆ ಸೋಮವಾರ ಮಧ್ಯಾನ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರು ಬೇಟಿ ನೀಡಲಿದ್ದು, ಇವರ ಬೇಟಿಯಿಂದ ಇಎಸ್‍ಐ ಆಸ್ಪತ್ರೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆಗೆ ನೀಡಿದ ಆದೇಶ ಕಾರ್ಯರೂಪಕ್ಕೆ ಬರುವುದೇ ಎಂದು ಸಾರ್ವಜನಿಕರು ಕಾತರದಿಂದ ಕಾಯುತ್ತಿದ್ದಾರೆ.

ಈಗಾಗಲೇ ಕೋವಿಡ್ ಎರಡನೇ ಅಲೆ ಸಾಕಷ್ಟು ಸಂಕಷ್ಟ ತಂದೊಡ್ಡಿದ ಹಿನ್ನೆಲೆಯಲ್ಲಿ ಈ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಾಳು ಬಿದ್ದ ಇಎಸ್‍ಐ ಆಸ್ಪತ್ರೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ ಮಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದರು.

Contact Your\'s Advertisement; 9902492681

ಅದರಂತೆ ಜಿಲ್ಲಾಧಿಕಾರಿಗಳ ನಿರ್ದೆಶನದ ಮೇರೆಗೆ ಜಿಪಂ ಕಾರ್ಯನಿರ್ವಾಹಕ ಅಧಿಕಾರಿ, ತಹಸೀಲ್ದಾರ, ನಗರಸಭೆಯ ಪೌರಾಯುಕ್ತರು ಬೇಟಿ ನೀಡಿ ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.ಅಲ್ಲದೇ ಸಚಿವರು ಸೋಮವಾರ ಆಗಮಿಸುತ್ತಿರುವುದರಿಂದ ಸುಮಾರು ಐದಾರು ದಿನಗಳಿಂದ ಅಧಿಸೂಚಿತ ಕ್ಷೇತ್ರ ಸಮಿತಿಯ ಕಾರ್ಮಿಕರಿಂದ ಇಎಸ್‍ಐ ಆಸ್ಪತ್ರೆಯನ್ನು ಸ್ವಚ್ಛಗೊಳಿಸುವ ಕಾರ್ಯ ಭರದಿಂದ ಸಾಗಿದೆ.

ಸುಮಾರು 4 ಎಕರೆ 10 ಗುಂಟೆ ಪ್ರದೇಶದಲ್ಲಿ ವಿಶಾಲವಾಗಿ ಹಬ್ಬಿದ ಕಟ್ಟಡ, ಸುಮಾರು 20 ವರ್ಷಗಳಿಂದ ಪಾಳು ಬಿದ್ದು, ಕಟ್ಟಡದ ಆವರಣದಲ್ಲಿ ಗಿಡಗಂಟಿಗಳು, ಹಾವು ಚೇಳು, ಅನೇಕ ಕ್ರೀಮಿಕೀಟಗಳು ಕೂಡಿದ್ದವು. ಆಸ್ಪತ್ರೆಯ ಒಳಗಡೆ ಜನರು ಹೋಗಲೂ ಭಯಪಡುವಂತಾಗಿತ್ತು. ಯಾರೂ ಆ ಕಡೆ ಸುಳಿಯುತ್ತಿರಲಿಲ್ಲ.ಈಗ ಆ ಕಟ್ಟಡದ ಪರಿಶೀಲನೆ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರು ಬೇಟಿ ನೀಡುತ್ತಿರುವುದರಿಂದ ಆಸ್ಪತ್ರೆಯ ಆವರಣ ಸಂಪೂರ್ಣ ಸ್ವಚ್ಛಗೊಳಿಸಲಾಗಿದೆ.ಮುಖ್ಯ ಧ್ವಾರದ ಬಳಿ ಹತ್ತಾರು ಟಿಪ್ಪರ್ ಮುರುಮ್ ಹಾಕಿ ಸಮತಟ್ಟು ಮಾಡಲಾಗಿದೆ.

ಅಲ್ಲದೇ ಕಟ್ಟಡದಲ್ಲಿ ಆವರಿಸಿರುವ ಧೂಳು, ಕಸವನ್ನು ತೆಗೆಯಲಾಗಿದೆ.ಅಲ್ಲದೇ ಸಂಪೂರ್ಣ ತೊಳೆದು ಸ್ವಚ್ಛಗೊಳಿಸಲಾಗಿದೆ.ಆದರೆ ಕಟ್ಟಡದ ಒಳಗಡೆ ನೆಲ ಕುಸಿದಿದ್ದು, ಸಂಪೂರ್ಣ ನೆಲ ಹಾಸಿಗೆ ಮೇಲಕ್ಕೆದ್ದಿವೆ.ಅಲ್ಲದೇ ಎಲ್ಲೆಂದರಲ್ಲಿ ಕಟ್ಟಡ ಬಿರುಕು ಮೂಡಿದೆ.ಕೆಲವು ಕೋಣೆಗಳು ಬೀಳುವ ಸ್ಥಿತಿಯಲ್ಲಿವೆ. ಮೊದಲನೆ ಮಹಡಿಯ ಕೋಣೆಗಳಲ್ಲಿ ಕಾಲಿಟ್ಟರೇ ಕೋಣೆಯ ಗೋಡೆ, ನೆಲ ಮಾಳಿಗೆ ಕುಸಿಯುವ ರೀತಿಯಲ್ಲಿದ್ದು. ಕಾಲಿಡುವುದಕ್ಕೂ ಭಯ ಭರುವಂತಿದೆ.ಆದರೂ ಪೌರಕಾರ್ಮಿಕರು ಕೋಣೆಯ ಬಹುತೇಖ ಕೋಣೆಯನ್ನು ಸ್ವಚ್ಛಗೊಳಿಸಿದ್ದಾರೆ.

ಆಸ್ಪತ್ರೆಯ ಹಿಂಭಾಗದ ಕೋಣೆಗಳಿಗೆ ಹೋಗುವಂತಿಲ್ಲ. ಅಲ್ಲಿನ ಕೋಣೆಗಳ ನೆಲ ಕುಸಿಯುವ ಸ್ಥಿತಿಯಲ್ಲಿವೆ.ವಿದ್ಯುತ್ ಸೌಲಭ್ಯವೂ ಇಲ್ಲ.ಎಲ್ಲಾ ವಿದ್ಯುತ್ ಭೋರ್ಡಗಳು ಹಾಳಾಗಿವೆ.ಇಷ್ಟೆಲ್ಲಾ ತೊಂದರೆಗಳ ನಡುವೆ ಇಲ್ಲೊಂದು ಕೋವಿಡ್ ಕೇರ್ ಸೆಂಟರ್ ಪ್ರಾರಂಭವಾಗುತ್ತದೆ ಎಂದರೆ ಇಲ್ಲಿನ ಜನರಿಗೆ ಎಲ್ಲಿಲ್ಲದ ಸಂತೋಷವಾಗಿದೆ. ಈ ಆಸ್ಪತ್ರೆ ಯಾವುದಕ್ಕಾದರೂ ಬಳಕೆಯಾಗಲಿ ಎಂಬ ಬಹು ದಿನಗಳ ಕನಸು ಈಗ ನನಸಾಗುವತ್ತ ಹೊರಟಿದೆ.ಸಚಿವರ ಭರವಸೆ ಮಾತ್ರ ಈಡೇರಬೇಕಾಗಿದೆ.

ಅಲ್ಲದೇ ಅಗತ್ಯವಿರುವ ವೈದ್ಯಕೀಯ ಸೌಲಭ್ಯಗಳನ್ನು ಈ ಆಸ್ಪತ್ರೆಯಲ್ಲಿ ಕಲ್ಪಿಸಬೇಕು. ಹಾಸಿಗೆ, ವೆಂಟಿಲೇಟರ್, ಆಕ್ಸಿಜನ್ ಪೂರೈಕೆ, ಕುಡಿಯುವ ನೀರು, ಅಡುಗೆ ಮನೆ, ಶೌಚಾಲಯ ಸೇರಿದಂತೆ ಆಧುನಿಕ ಆಸ್ಪತ್ರೆಗೆ ಇರಬೇಕಾದ ಎಲ್ಲಾ ಮೂಲ ಸೌಕರ್ಯಗಳನ್ನೂ ಕಲ್ಪಿಸಬೇಕಾಗಿದೆ.ಅಲ್ಲದೇ ಸುಣ್ಣ ಬಣ್ಣ ಬಡಿದುಕೊಂಡು ರೋಗಿಗಳಿಗೆ ಉತ್ತಮ ಸೌಲಭ್ಯ ನೀಡಲು ಸಿದ್ಧತೆಯಾಗಬೇಕು.ಇದು ಕೇವಲ ಆದೇಶವಾಗಿರದೇ ಕಾರ್ಯರೂಪಕ್ಕೆ ಬರುವುದೇ ಎಂದು ಸಾರ್ವಜನಿಕರ ಚಿತ್ತ ಈಗ ಜಿಲ್ಲಾ ಉಸ್ತುವಾರಿಗಳ ಸುತ್ತ ನೆಟ್ಟಿದೆ.

ಪಾಳುಬಿದ್ದಿರುವ ಇಎಸ್‍ಐ ಆಸ್ಪತ್ರೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆಯಾದರೆ ನೂರಾರು ಸಂಖ್ಯೆಯ ಸೋಂಕಿತರಿಗೆ ಇಲ್ಲಿ ಚಿಕಿತ್ಸೆ ಸಿಗಲಿದೆ. ಅದರಲ್ಲೂ ಬಡ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ.ಆ ನಿಟ್ಟಿನಲ್ಲಿ ಸಚಿವರು ಅಗತ್ಯ ಕ್ರಮ ಕೈಗೊಳ್ಳುವರೆಂಬ ಭರವಸೆ ನನಗಿದೆ .ಅಲ್ಲದೇ ಮುಂಬರುವ ದಿನಗಳಲ್ಲಿ ತಾಲೂಕಾ ಆಸ್ಪತ್ರೆಯನ್ನಾಗಿ ಪರಿವರ್ತಿಸಬೇಕೆಂದು ಮನವಿ. –ಅಣವೀರ ಇಂಗಿನಶೆಟ್ಟಿ ಅಧ್ಯಕ್ಷರು ಬಿಜೆಪಿ ಶಹಾಬಾದ.

ಜಿಲ್ಲಾ ಉಸ್ತುವಾರಿ ಸಚಿವರು ಪಾಳು ಬಿದ್ದ ಆಸ್ಪತ್ರೆಯನ್ನು ಕೋವಿಡ್ ಕೇರ್ ಸೆಂಟರ್ ಮಾಡುತ್ತಿರುವುದು ಬಹಳ ಸಂತೋಷದ ವಿಷಯ. ಕೇವಲ ಹೆಸರಿಗೆ ಕೋವಿಡ್ ಸೆಂಟರ್ ಆಗದೇ ಅಗತ್ಯ ವೈದ್ಯಕೀಯ ಮೂಲ ಸೌಲಭ್ಯ ಒದಗಿಸುವುದಲ್ಲೇ, ಸಿಬ್ಬಂದಿಗಳನ್ನು, ವೈದ್ಯರನ್ನು ನಿಯೋಜಿಸಿ ಇಲ್ಲಿನ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆದಷ್ಟು ಬೇಗ ಪ್ರಾರಂಭ ಮಾಡಲು ಮುಂದಾಗಬೇಕು. – ಡಾ.ರಶೀದ್ ಮರ್ಚಂಟ್ ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಶಹಾಬಾದ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here