ಉಚಿತ ಅಂಬುಲೆನ್ಸ್ ಸೇವೆ

0
13

ಕಲಬುರಗಿ: ರಾಷ್ಟ್ರೀಯ ಸ್ವಯಂಸೇವಕ ಸಂಘ ಕಲಬುರಗಿ ವತಿಯಿಂದ ನಗರದಲ್ಲಿ ಉಚಿತವಾಗಿ ಅಂಬುಲೆನ್ಸ್ ಸೇವೆಯನ್ನು ಇಂದು ನಗರದಲ್ಲಿ ಪ್ರಾರಂಭಿಸಲಾಯಿತು.

ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್, ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಅವರು ಉಚಿತ ಎಂಬುಲೆನ್ಸ್ ಸೇವೆಯನ್ನು ಉದ್ಘಾಟಿಸಿ ಚಾಲನೆ ನೀಡಿದರು.

Contact Your\'s Advertisement; 9902492681

ನಗರದಲ್ಲಿ ಮೊಟ್ಟ ಮೊದಲ ಬಾರಿಗೆ ಕೋವಿಡ ಕೆರ್ ಸೆಂಟರ್,ನ್ನು ಪ್ರಾರಂಭ ಮಾಡಿದ್ದು, ಇದೀಗ ಬಡ ಜನರಿಗೆ ಕೋವಿಡ ಸಂದರ್ಭದಲ್ಲಿ ಯಾವುದೇ ತೊಂದರೆಯಾಗದಂತೆ ಈ ಸೇವೆಯನ್ನು ನೀಡಲಾಗುತ್ತಿದೆ ಎಂದು ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಹೇಳಿದರು.
ಕೋರೋನ ಪಾಸಿಟಿವ್ ಕಂಡು ಬಂದ ನಂತರ ಸೊಂಕಿತರಿಗೆ ಸಮಸ್ಯೆ ಆಗಬಾರದು ಎನ್ನುವ ನಿಟ್ಟಿನಲ್ಲಿ ಈ ಸೇವೆ ಅನುಕೂಲಕರವಾಗಲಿದೆ, ಸೊಂಕಿತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಶಾಸಕ ಬಸವರಾಜ ಮತ್ತಿಮೂಡ ಹೇಳಿದರು.

ಸಂಘ ಪರಿವಾರದ ಪ್ರಮುಖರಾದ ಕೃ? ಜೋಶಿ , ವಿಭಾಗ ಪ್ರಚಾರಕರಾದ ವಿಜಯ ಮಹಾಂತೇಶ , ರಮೇಶ್ ತಿಪನೂರ, ಕಮಲಾಪುರೇ, ದಯಾಘನ ದಾರವಾಡಕರ್, ಸಿದ್ದಾಜೀ ಪಾಟೀಲ್, ದಿವ್ಯ ಹಾಗರಗಿ, ಸೂರಜ್ ಪ್ರಸಾದ್ ತಿವಾರಿ, ಅಪ್ಪು ಕಣಕಿ, ಉಮೇಶ್ ಪಾಟೀಲ್, ಶ್ರೀನಿವಾಸ ದೇಸಾಯಿ, ಸೇರಿದಂತೆ ಅನೇಕ ಸಂಘ ಪರಿವಾರದ ಸದಸ್ಯರು ಉಪಸ್ಥಿತರಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here