ಎರಡನೇ ದಿನವೂ ಮುಂದುವರೆದ ಲಾಕ್‌ಡೌನ್:ತಪಾಸಣೆ ನಡೆಸಿದ ಡಿವೈಎಸ್ಪಿ

0
118

ಸುರಪುರ: ನಗರದಲ್ಲಿ ಎರಡನೇ ದಿನವೂ ಕಟ್ಟು ನಿಟ್ಟಿನ ಲಾಕ್‌ಡೌನ್‌ಗೆ ಜನರಿಂದ ಸ್ಪಂದನೆ ವ್ಯಕ್ತವಾಗಿದೆ.

ಎರಡನೇ ದಿನವೂ ಯಾವುದೇ ಅಂಗಡಿ ಮುಂಗಟ್ಟುಗಳು ತೆರೆಯದೆ ಜನರು ಕೂಡ ಮನೆಯಿಂದ ಹಿರಗೆ ಬಾರದೆ ಉತ್ತಮವಾಗಿ ಸ್ಪಂದಿಸಿದ್ದಾರೆ.ಬೆಳಿಗ್ಗೆ ಜನರು ಹಾಲು ಪತ್ರಿಕೆಗಾಗಿ ಕೆಲ ಜನರು ಹೊರಗೆ ಬಂದರೆ,ಹತ್ತು ಗಂಟೆಯ ನಂತರ ಸಂಪೂರ್ಣ ಲಾಕ್‌ಡೌನ್ ಕಂಡುಬಂತು.ಆದರೆ ಎರಡನೇ ದಿನದಲ್ಲಿ ಕೆಲವರು ಬೈಕ್ ಹತ್ತಿ ಅನಾವಶ್ಯಕವಾಗಿ ಓಡಾಡಿದ್ದು ಕಂಡು ಬಂದಿದ್ದು,ಡಿವೈಎಸ್ಪಿ ವೆಂಕಟೇಶ ಹುಗಿಬಂಡಿಯವರು ಸ್ವತಃ ರೋಡಿಗಿಳಿದು ಅನಾವಶ್ಯಕವಾಗಿ ಓಡಾಡುವವರ ಕಡಿವಾಣಕ್ಕಿಳಿದರು.

Contact Your\'s Advertisement; 9902492681

ಬೆಳಿಗ್ಗೆ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಕೊರೊನಾ ಸೊಂಕಿತರಿಬ್ಬರು ಬೈಕ್ ಹತ್ತಿ ಹೋಗುತ್ತಿರುವಾಗ ತಡೆದ ಡಿವೈಎಸ್ಪಿಯವರು ವಿಚಾರಣೆ ನಡೆಸಿದಾಗ ಬೈಕ್ ಮೇಲಿದ್ದ ಇಬ್ಬರು ಕೊರೊನಾ ಸೊಂಕಿತರೆಂದು ಹೇಳುತ್ತದ್ದಂತೆ ಅಲ್ಲಿದ್ದ ಪೊಲೀಸ್ ಸಿಬ್ಬಂದಿ ಒಂದು ಕ್ಷಣ ಗಾಬರಿಗೊಂಡಂತೆ ಕಂಡುಬಂದರು.ಆದರೆ ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ ಅವರ ಪ್ರಮಾಣ ಪತ್ರಗಳನ್ನು ವೀಕ್ಷಣೆ ಮಾಡಿ ನಂತರ ಹೀಗೆಲ್ಲ ಹೊರಗಡೆ ಬರಬಾರದು ಎನ್ನುವ ಸಲಹೆ ನೀಡಿದರು.ಆದರೆ ಇಬ್ಬರು ಸೊಂಕಿತರು ತಾವು ಆಸ್ಪತ್ರೆಗಾಗಿ ಹೋಗುತ್ತಿರುವುದಾಗಿ ತಿಳಿಸಿ ನಂತರ ತೆರಳಿದ ಪ್ರಸಂಗ ನಡೆಯಿತು.

ಇನ್ನುಳಿದಂತೆ ಇಡೀ ನಗರದಲ್ಲಿನ ಎಲ್ಲಾ ರಸ್ತೆಗಳು ನಿಶಬ್ದಗೊಂಡು ನಗರವೆಲ್ಲ ಖಾಲಿ ಖಾಲಿಯಾಗಿತ್ತು.ಒಟ್ಟಾರೆಯಾಗಿ ಮೂರು ದಿನಗಳ ಲಾಕ್‌ಡೌನ್ ಎರಡನೇ ದಿನವೂ ಯಶಸ್ವಿಯಾಗಿದ್ದು ಇದರಿಂದ ಕೊರೊನಾ ಸೊಂಕು ನಿರ್ಮೂಲನೆಯಲ್ಲಿ ಎಷ್ಟರ ಮಟ್ಟಿಗೆ ಲಾಕ್‌ಡೌನ್ ಪರಿಣಾಮ ಬೀರಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here