ಸುರಪುರ: ತಾಲೂಕಿನಾದ್ಯಂತ ಗ್ರಾಮೀಣ ಭಾಗದಲ್ಲಿ ಕೋವಿಡ್ ನಿಯಮಗಳ ನಿರ್ಲಕ್ಷ್ಯ

0
9

ಸುರಪುರ:ರಾಜ್ಯದಲ್ಲಿನ ಗ್ರಾಮೀಣ ಪ್ರದೇಶದಲ್ಲಿ ಈಗ ಹೆಚ್ಚು ಕೊರೊನಾ ಪ್ರಕರಣಗಳು ಕಂಡು ಬರುತ್ತಿವೆ ಎಂದು ಸರಕಾರ ಘೋಷಿಸುತ್ತಿರುವ ಬೆನ್ನಲ್ಲೆ ಸುರಪುರ ತಾಲೂಕಿನಾದ್ಯಂತ ಅನೇಕ ಗ್ರಾಮಗಳಲ್ಲಿ ಜನರು ಕೋವಿಡ್ ನಿಯಮಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿರುವುದು ಕಂಡು ಬರುತ್ತಿದೆ.

ಗ್ರಾಮೀಣ ಪ್ರದೇಶದಲ್ಲಿನ ಜನರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು ಸಾಮಾಜಿಕ ಅಂತರ ಕಾಪಾಡುವುದು ಜೊತೆಗೆ ಆಗಾಗ ಕೈಗಳನ್ನು ತೊಳೆಯುವುದು ಇದ್ಯಾವುದು ತಮಗೆ ಸಂಬಂಧವಿಲ್ಲ ಎಂಬಂತೆ ಇರುತ್ತಿರುವುದು ಬಹುತೇಕ ಗ್ರಾಮಗಳಲ್ಲಿ ಕಂಡುಬರುತ್ತಿದೆ.ಜನರು ಅನಾವಶ್ಯಕವಾಗಿ ಮನೆಯಿಂದ ಹೊರಗೆ ಬರಬೇಡಿ ಎಂದು ಸರಕಾರ ಹೇಳುತ್ತಿದ್ದರೆ ಜನರು ಸದಾಕಾಲ ಹೊರಗಡೆಯೆ ಇರುತ್ತಿದ್ದಾರೆ.ಮಾಸ್ಕ್ ಧರಿಸುವುದಿಲ್ಲ,ಸಾಮಾಜಿಕ ಅಂತರಕ್ಕೂ ತಮಗೂ ಸಂಬಂಧವಿಲ್ಲ ಎಂಬಂತೆ ಸೇರುತ್ತಿದ್ದಾರೆ.

Contact Your\'s Advertisement; 9902492681

ಪಾಲಿಕೆಯಲ್ಲಿ ಮೊಟ್ಟ ಮೊದಲ ಬಾರಿಗೆ ಥಿಂಕಥಾನ್ ವಿಡಿಯೋ ಸಂವಾದ ಯಶಸ್ವಿ

ಇನ್ನು ತಾಲೂಕಿನ ಕೆಲ ಗ್ರಾಮಗಳಲ್ಲಿ ನಿಶ್ಚಿತಾರ್ಥದಂತಹ ಕಾರ್ಯಕ್ರಮಗಳನ್ನು ನೂರಾರು ಜನರು ಸೇರಿ ಮಾಡುತ್ತಿರುವುದು,ಅಲ್ಲದೆ ನಿಧನರಾದಲ್ಲಿ ಹೆಚ್ಚು ಜನ ಸೇರದಂತೆ ನಿರ್ಬಂಧ ವಿಧಿಸಲಾಗಿದ್ದರು ಹೆಚ್ಚೆಚ್ಚು ಜನರು ಸೇರುವ ಮೂಲಕ ಸೊಂಕಿಗೆ ಆಹ್ವಾನ ನೀಡುತ್ತಿರುವಂತಿದೆ.

ಆದರೆ ತಾಲೂಕು ಆಡಳಿತ ಪೊಲೀಸ್ ಇಲಾಖೆ ಗ್ರಾಮ ಪಂಚಾಯತಿಗಳು ಅನೇಕ ರೀತಿಯ ಪ್ರಚಾರದ ಮೂಲಕ ಜನರಿಗೆ ಎಚ್ಚರಿಸುವಂತ ಕೆಲಸ ಮಾಡುತ್ತಿದ್ದರು,ಜನರು ತಮಗು ಅದಕ್ಕೂ ಸಂಬಂಧವಿಲ್ಲ ಎಂಬಂತೆ ನಡೆದುಕೊಳ್ಳುತ್ತಿರುವುದು ಈಗ ಜನರಲ್ಲಿ ಆತಂಕಕ್ಕೆ ಕಾರಣವಾಗುತ್ತಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here