ಬರಹಗಾರರಿಂದ ಆಹಾರ ಧಾನ್ಯ,ಸ್ಯಾನಿಟೈಜರ್ ವಿತರಣೆ

0
56

ಕಲಬುರಗಿ : ಇಂದು ಕರೋನಾ ಮಹಾ ಮಾರಿ ನಮ್ಮೆಲ್ಲರ ಬದುಕನ್ನು ಕಟ್ಟಿ ಹಾಕಿದೆ. ಹೌದು,ನಿತ್ಯ ಬೆಳಗಾದರೆ ನಮ್ಮವರ ಸಾವು ನೋವುಗಳೇ ಕಾಣುತ್ತಿದ್ದೇವೆ.ಕೂಲಿ ಕಾರ್ಮಿಕರು,ರೈತರು ಹಾಗೂ ಕಟ್ಟಡ ಕಾರ್ಮಿಕರ ಬದುಕು ಸಂಕಷ್ಟದಲ್ಲಿವೆ.ಈ ತಲ್ಲಣಗೊಂಡ ಮನಸ್ಸುಗಳಿಗೆ ಮುಂದೇನು? ಎಂಬ ಮಾನಸಿಕ ಯಾತನೆ ಎದುರಾಗಿದೆ.ಇಂಥ ದುಸ್ತರ ಸ್ಥಿತಿಯಲ್ಲಿ ಕಲಬುರ್ಗಿ ಜಿಲ್ಲೆಯ ಬರಹಗಾರರು ತಮ್ಮ ಬರವಣಿಗೆ ಮೂಲಕ ಸ್ಪಂದಿಸಿದ್ದಾರೆ.

ಕೆಲವರು ಕಾವ್ಯದಿಂದ ಮನ ಮಿಡಿದಿದ್ದುಂಟು.ವಸ್ತು ಸ್ಥಿತಿ ಅರಿತ ಬರಹಗಾರರು ತಮ್ಮ ಆರ್ಥಿಕ ಸಹಾಯದಿಂದಲೂ ನೆರವಾಗಬೇಕೆಂಬ ತುಡಿತ ಹೊರ ಹೊಮ್ಮಿತು.ಹೀಗಾಗಿ ಕಲಬುರ್ಗಿ ಜಿಲ್ಲಾ ಬರಹಗಾರರ ಬಳಗದ ಸದಸ್ಯರಿಂದ ನಿರ್ಗತಿಕ ಕುಟುಂಬಗಳಿಗೆ ಇಂದು ಸಹಾಯ ಹಸ್ತದ ಮೂಲಕ ಮಾನವೀಯತೆ ಮೆರೆದಿದ್ದಾರೆ.ನೋವಿನಲ್ಲೂ ಮಿಂದಿರುವರು.
ಬಳಗದ ಜಿಲ್ಲಾಧ್ಯಕ್ಷ ಮಹಾಂತೇಶ ಎನ್ ಪಾಟೀಲ ಹಾಗೂ ಜಿಲ್ಲಾ ಸಂಚಾಲಕ ಧರ್ಮಣ್ಣ ಧನ್ನಿ ಅವರ ನೇತೃತ್ವದಲ್ಲಿ ಇಂಥ ಸಮಾಜಮುಖಿ ಕಾರ್ಯವೊಂದು ಕಲಬುರ್ಗಿ ನಗರದ ಕಾಂತಾ ಕಾಲೋನಿಯಲ್ಲಿ ಕೈಗೊಳ್ಳಲಾಯಿತು.

Contact Your\'s Advertisement; 9902492681

ಇಲ್ಲಿಯ ಬಡ ಕುಟುಂಬಗಳಿಗೆ ಆಹಾರ ಧಾನ್ಯಗಳು,ಸ್ಯಾನಿಟೈಜರ್.ಮಾಸ್ಕ್ ತೊಗರಿ ಬೆಳೆ ವಿತರಿಸಲಾಯಿತು.ಕವಯತ್ರಿಯರಾದ ಸುರೇಖಾ ಬಿರಾದಾರ,ಗಂಗಮ್ಮ ನಾಲವಾರ,ಗೀತಾ ಭರಣಿ,ಮಹೇಶ ಜೇವರ್ಗಿ,ಮಹಾದೇವಪ್ಪ ಕೊಥಲಿ,ವಿಠ್ಠಲ ಅರ್ಜುಣಗಿ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here