ಭಂಕೂರ ಗ್ರಾಪಂಯ ವಾರ್ಡ ನಂ.5ರಲ್ಲಿ ಡ್ರೈನೇಜ್ ಪೈಪ್ ಒಡೆದು ಕೊಳಚೆ ನೀರು

0
119

ಶಹಾಬಾದ: ಮನೆಯ ಮುಂದಿನ ರಸ್ತೆ, ಆವರಣ ಮತ್ತು ಸಾರ್ವಜನಿಕ ರಸ್ತೆಯ ಮೇಲೆ ಮಲ ಮೂತ್ರದಿಂದ ತೊಂಬಿಕೊಂಡು ಹರಿಯುತ್ತಿರುವ ಕೊಳಚೆ ನೀರು, ಗಬ್ಬೆದ್ದು ನಾರುತ್ತಿರುವ ವಾತಾವರಣದಿಂದ ಇಲ್ಲಿನ ಬಡಾವಣೆಯ ಜನರು ಎಲ್ಲಿಲ್ಲದ ಸಂಕಟ ಪಡುತ್ತಿದ್ದಾರೆ.

ಇದು ಭಂಕೂರ ಗ್ರಾಪಂ ವ್ಯಾಪ್ತಿಯ ವಾರ್ಡ ನಂ. 5 ಮತ್ತು 6ರಲ್ಲಿ ಬರುವ ಶಾಂತನಗರ ಬಡಾವಣೆಯಯಲ್ಲಿ ಕಂಡು ಬರುವ ಸಾಮನ್ಯ ದೃಶ್ಯವಾಗಿದೆ.ಇಲ್ಲಿನ ಜನರು ಈಗಾಗಲೇ ಗ್ರಾಪಂ ಅಧಿಕಾರಿಗಳಿಗೆ, ವಾರ್ಡ ಸದಸ್ಯರಿಗೆ ಹಾಗೂ ತಾಪಂ ಕಾರ್ಯನಿರ್ವಾಕ ಅಧಿಕಾರಿಗಳಿಗೆ ತಿಳಿಸಿದರೂ ಕ್ಯಾರೇ ಎನ್ನುತ್ತಿಲ್ಲ. ಸುಮಾರು 20 ದಿನಗಳಿಂದ ಇಲ್ಲಿನ ಜನರು ಉಸಿರುಗಟ್ಟುವ ಗಬ್ಬು ವಾಸನೆಯಲ್ಲೇ ದಿನ ಕಳೆಯುತ್ತಿದ್ದಾರೆ.

Contact Your\'s Advertisement; 9902492681

ಒಡೆದಿರುವ ಡ್ರೈನೇಜ್ ಪೈಪು ರಿಪೇರಿ ಮಾಡುವ ಬದಲು ಸುಳ್ಳು ನೆಪ ಹೇಳುತ್ತಿದ್ದಾರೆ. ಮಲಮೂತ್ರಗಳಿಂದ ಕೂಡಿದ ಕೊಳಚೆ ನೀರು ಸಂಪೂರ್ಣ ಬಡಾವಣೆಯ ಮನೆಯ ಆವರಣ, ಪಕ್ಕದ ಖಾಲಿ ಸ್ಥಳದಲ್ಲಿ, ರಸ್ತೆಯ ಮೇಲೆ ಹರಡಿಕೊಂಡಿದೆ.ಇದರಿಂದ ನಿತ್ಯ ಇಲ್ಲಿನ ಜನರು ಈ ನೀರನ್ನೇ ದಾಟಿಕೊಂಡು ಹೋಗಬೇಕಾದ ಪ್ರಸಂಗ ಎದುರಾಗಿದೆ.ಅಲ್ಲದೇ ಚಿಕ್ಕ ಮಕ್ಕಳು ಇದೇ ನೀರಿನಲ್ಲಿ ಆಟವಾಡುತ್ತಿದ್ದಾರೆ.ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ.ಈಗಾಗಲೇ ಕರೋನಾ ಭಯದಿಂದಲೇ ಜನರು ತತ್ತರಿಸಿ ಹೋಗಿದ್ದಾರೆ.

ಈ ಮಧ್ಯೆ ಈ ಕೊಳಚೆ ನೀರಿನಿಂದ ದುರ್ವಾಸನೆ ಬೀರಿ, ಕಲುಷಿತ ವಾತಾವರಣ ಸೃಷ್ಠಿಯಾಗಿದೆ.ಅಲ್ಲದೇ ಸೊಳ್ಳೆ ಕಾಟ ಹೆಚ್ಚಿ ರೋಗಗಳಿಗೆ ತುತ್ತಾಗುವ ಆತಂಕ ಇಲ್ಲಿನ ಜನರದ್ದಾಗಿದೆ.
ಈ ಬಗ್ಗೆ ವಾರ್ಡ ನಂ.5ರ ಸದಸ್ಯರ ಗಮನಕ್ಕೆ ತಂದರೆ ಇದು ನನ್ನ ವಾರ್ಡಗೆ ಬರೋದಿಲ್ಲ.ವಾರ್ಡ ನಂ.6ಕ್ಕೆ ಬರುತ್ತದೆ ಎಂದು ಹೇಳುತ್ತಾರೆ. ವಾರ್ಡ ನಂ.6 ರ ಸದಸ್ಯರಿಗೆ ಕೇಳಿದರೇ ವಾರ್ಡ ನಂ.7ಕ್ಕೆ ಬರುತ್ತದೆ ಎಂದು ಒಬ್ಬರ ಮೇಲೆ ಮೇಲೊಬ್ಬರೂ ಹಾಕಿ ಜಾರಿಕೊಳ್ಳುತ್ತಿದ್ದಾರೆ.

ಗ್ರಾಪಂ ಅಧ್ಯಕ್ಷರ ಗಮನಕ್ಕೂ ತಂದರೂ ಇಲ್ಲಿಯವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ.ಅಲ್ಲದೇ ಸಿಬ್ಬಂದಿ ವರ್ಗದವರು ಬಂದು ನಿವೇ ಬೇರೆ ಕಾರ್ಮಿಕರಿಂದ ಡ್ರೈನೇಜ್ ಸಮಸ್ಯೆಯನ್ನು ಸರಿಪಡಿಸಿಕೊಳ್ಳಿ. ಅದಕ್ಕೆ ತಗುಲುವ ಹಣ ನೀಡುತ್ತೆವೆ ಎಂದು ಹೇಳಿ ಹೊರಟು ಹೋಗುತ್ತಿದ್ದಾರೆ. ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ಬೀದಿ ದೀಪ ಸೇರಿದಂತೆ ನೈರ್ಮಲ್ಯ ಸಮಸ್ಯೆ ಕಾಪಾಡುವುದು ಗ್ರಾಪಂಯ ಕರ್ತವ್ಯ.ಆದರೆ ಇಲ್ಲಿನ ಸ್ಥಿತಿ ಒಮ್ಮೆ ನೋಡಿದರೇ ಗ್ರಾಪಂ ಇಲ್ಲಿನ ಸಮಸ್ಯೆ ಬಗೆಹರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ.ಚುನಾವಣೆಯ ಸಮಯದಲ್ಲಿ ಮತ ಕೇಳಲು ಬರುತ್ತಾರೆ.

ಗೆಲುವು ಸಾಧಿಸಿದ ನಂತರ ಜನರ ಸಮಸ್ಯೆಯನ್ನು ನಿಭಾಯಿಸಲು ಮುಂದಾಗದಿರುವ ವಾರ್ಡ ಸದಸ್ಯರು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ.ಕೂಡಲೇ ಈ ಸಮಸ್ಯೆ ಬಗೆಹರಿಯದಿದ್ದರೇ ಬೀದಿಗೆ ಬರಬೇಕಾದ ಪ್ರಸಂಗ ಎದುರಾಗುತ್ತದೆ ಎಂದು ಬಡಾವಣೆಯ ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.

ಬಡಾವಣೆಯ ನಿವಾಸಿಗಳ ಮನೆಯ ಮುಂದೆ ಮಲ, ಮೂತ್ರದ ನೀರು ಆವರಿಸಿ, ಗಬ್ಬೆದ್ದು ನಾರುತ್ತಿದೆ.ಇದರಿಂದ ಸಾಕಷ್ಟು ಸಂಕಟ ಉಂಟಾಗುತ್ತಿದೆ.ಈ ಬಗ್ಗೆ ಎಲ್ಲಾ ಅಧಿಕಾರಿ ವರ್ಗದವರಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.ಇಲ್ಲದ ಸಬೂಬು ಹೇಳುತ್ತಾರೆ ಹೊರತು ಸಮಸ್ಯೆ ಬಗೆಹರಿಸುತ್ತಿಲ್ಲ. ವಾರ್ಡನ ಸದಸ್ಯರು ಮಾತ್ರ ನಾಮಕೇ ಬಾಸ್ತೆ ಎನ್ನುವಂತಾಗಿದೆ.ಸದ್ಯ ಜಿಪಂ ಸಿಎಸ್ ಅವರ ಗಮನಕ್ಕೂ ತಂದಿದ್ದೆನೆ. – ಉಮೇಶ ಗಾಯಕವಾಡ ಸ್ಥಳೀಯ ನಿವಾಸಿ.

ಈಗಾಗಲೇ ಸ್ಥಲೀಯ ನಿವಾಸಿಯೊಬ್ಬರೂ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ.ಅಲ್ಲದೇ ವಿಡಿಯೋ ಮತ್ತು ಫೋಟೋ ವಾಟ್ಸಪ್‍ಗೆ ಹಾಕಿದ್ದಾರೆ.ಅದನ್ನು ನೋಡಿ ತಾಪಂ ಇಓ ಅವರಿಗೆ ತಕ್ಷಣವೇ ಸಮಸ್ಯೆಯನ್ನು ಬಗೆಹರಿಸಲು ನಿರ್ದೇಶನ ನೀಡಿದ್ದೆನೆ.ಅಲ್ಲದೇ ಎರಡು ದಿನದಗಳಲ್ಲಿ ಸಮಸ್ಯೆ ಬಗೆಹರಿಯದಿದ್ದರೇ ತಿಳಿಸಿ ಕ್ರಮ ಕೈಗೊಳ್ಳುತ್ತೆನೆ-ಡಾ. ದಿಲೀಷ ಶಾಸಿ ಜಿಪಂ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಕಲಬುರಗಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here