ಸಾಪ ವತಿಯಿಂದ ಬುದ್ಧಪೂರ್ಣಿಮೆ ಕಾರ್ಯಕ್ರಮ

0
113

ಶಹಾಬಾದ: ಜಗತ್ತಿಗೆ ಶಾಂತಿಯ ಸಂದೇಶವನ್ನು ನೀಡಿದ ಗೌತಮ ಬುದ್ಧನ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು ಕಸಾಪ ಕಲಬುರಗಿ ಗ್ರಾಮೀಣ ಅಧ್ಯಕ್ಷ ಶರಣಗೌಡ ಪಾಟೀಲ ಹೇಳಿದರು.
ಅವರು ಬುಧವಾರ ಹಳೆಶಹಾಬಾದನಲ್ಲಿ ಕಸಾಪ ವತಿಯಿಂದ ಬುದ್ಧಪೂರ್ಣಿಮೆ ನಿಮಿತ್ತ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬುದ್ಧ ತನ್ನ ೨೯ನೇ ವಯಸ್ಸಿನಲ್ಲಿಯೇ ಸತ್ಯವನ್ನು ಹುಡುಕುತ್ತಾ ಪ್ರಪಂಚ ಪರ್ಯಟನೆ ಕೈಗೊಂಡ ಮಹಾನ್? ವ್ಯಕ್ತಿ ಬುದ್ಧ. ಬಡವರಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟನು. ಮೋಕ್ಷ ಸಾಧಿಸಲು ಕರುಣೆ ಮತ್ತು ಶಾಂತಿಯ ಮಾರ್ಗದಲ್ಲಿ ಸಾಗಬೇಕು ಎಂದು ಲೋಕಕ್ಕೆ ಸಾರಿದಾತ. ಸರಿಯಾದ ತಿಳುವಳಿಕೆ, ಸರಿಯಾದ ಚಿಂತನೆ, ಸರಿಯಾದ ಕ್ರಿಯೆ, ಮಾತು, ಮನಸ್ಸು, ಪ್ರಯತ್ನ, ಏಕಾಗ್ರತೆಯ ಮೌಲ್ಯಗಳನ್ನು ತಿಳಿಸಿಕೊಟ್ಟ ಮಹಾನ್? ವ್ಯಕ್ತಿ ಗೌತಮ್ ಬುದ್ಧ ಎಂದು ಹೇಳಿದರು.

Contact Your\'s Advertisement; 9902492681

ಸಾಮಾಜಿಕ ಚಿಂತಕ ಗುರು ರೇವಣಸಿದ್ದ ಪೂಜಾರಿ ಮಾತನಾಡಿ, ಮನುಷ್ಯನಲ್ಲಿ ಅಹಂ ಹೆಚ್ಚಾದರೆ ಭಿನ್ನಮತಗಳು ಹೆಚ್ಚಾಗುತ್ತವೆ.ಈ ಅಹಂ ಜೀವನದಲ್ಲಿ ಹೋಗಲಾಡಿಸಬೇಕಾದರೆ ಗೌತಮ ಬುದ್ಧನ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಸಂಗೀತ ಶಿಕ್ಷಕ ಶಾಂತಪ್ಪ ಹಡಪದ ಮಾತನಾಡಿ, ಜೀವನದಲ್ಲಿ ನಿದ್ದೆಯನ್ನು ಗೆದ್ದರೆ ಹಲವು ಸಾಧನೆಗಳನ್ನು ಮಾಡಬಹುದು.ಬುದ್ಧನ ಹಾಗೇ ದೇಹಕ್ಕೆ ಅಗತ್ಯವಿದ್ದಷ ನಿದ್ದೆ ಮಾಡಿ ಇತರ ಸಮಯವನ್ನು ಸಾಧನೆಗೆ ಬಳಸಿಕೊಂಡಾಗ ಹೆಚ್ಚಿನದು ಸಾಧಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಕಸಾಪ ನಗರಾಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ ಶಿಕ್ಷಕ ರಮೇಶ ಜೋಗದನಕರ್, ಕುಪೇಂದ್ರ ಪೋತನಕರ,ಸುಭಾ? ಅವಂಟಿ,ವೀರಭದ್ರ ಕಲ್ಮಠ,ಭೀಮಶಾ ಇಂಗಳೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here