ಗುರುಮಠಕಲ್ ಅಭಿವೃದ್ಧಿಗೆ 40 ವರ್ಷ ಸಾಕಾಗಲಿಲ್ಲವೇ? ಖರ್ಗೆಗೆ ಜಾಧವ್ ಪ್ರಶ್ನೆ

0
24

ಗುರುಮಠಕಲ್: 40ವರ್ಷಗಳಿಂದ ಗುರುಮಠಕಲ್ ಕ್ಷೇತ್ರದಲ್ಲಿ ಶಾಸಕರಾಗಿ ಹಾಗು ಎರಡು ಬಾರಿ ಲೋಕಸಭಾ ಸದಸ್ಯರಾಗಿ ಕಾರ್ಯನಿರ್ವಹಿಸಿದ ರೂ ಗುರುಮಟ್ಕಲ್ ಕ್ಷೇತ್ರ ಅಭಿವೃದ್ಧಿಪಡಿಸಲು ಯಾಕೆ ಸಾಧ್ಯವಾಗಿಲ್ಲ ಎಂಬುದಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರ ನೀಡಲಿ ಎಂದು ಲೋಕಸಭಾ ಸದಸ್ಯರಾದ ಡಾ ಉಮೇಶ್ ಜಾಧವ್ ನೇರ ಪ್ರಶ್ನೆ ಹಾಕಿದ್ದಾರೆ.

ಗುರುಮಠಕಲ್ ಮಂಡಲದ ಬಳಿಚಕ್ರ ಮಹಾ ಶಕ್ತಿ ಕೇಂದ್ರದಲ್ಲಿ ಭಾನುವಾರ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಗುರುಮಠಕಲ್ ಕ್ಷೇತ್ರದ ಅವಸ್ಥೆಯನ್ನು ನೋಡಿದಾಗ ಮರುಕ ಹುಟ್ಟುತ್ತದೆ. ಎಂಟು ಬಾರಿ ಶಾಸಕರಾಗಿ 40 ವರ್ಷ ಕ್ಷೇತ್ರವನ್ನು ಪ್ರತಿನಿಧಿಸಿದರೂ ಇಲ್ಲಿನ ಬಡತನ ಹಸಿವು, ಕಷ್ಟ ನಿವಾರಣೆ ಮಾಡಲು ಸಾಧ್ಯವಾಗದೆ ಇಲ್ಲಿನ ಜನ ಮುಂಬೈ ಹೈದರಾಬಾದ್ ಬೆಂಗಳೂರಿಗೆ ವಲಸೆ ಹೋಗುತ್ತಿರುವುದು ಈಗಲೂ ಮುಂದುವರೆದಿದೆ. ಮೋದಿಯವರ ಕೊಡುಗೆ ಏನು? ಜಾಧವ್ ಅವರ ಕೊಡುಗೆ ಏನು? ಎಂದು ಪ್ರಶ್ನಿಸುತ್ತಿರುವ ಖರ್ಗೆ ಕುಟುಂಬ ಹಾಗೂ ಕಾಂಗ್ರೆಸ್ ಪಕ್ಷದವರು ಗುರುಮಠಕಲ್ ಕ್ಷೇತ್ರದ ಹಿಂದುಳಿದಿರುವಿಕೆಗೆ ಉತ್ತರ ನೀಡಲಿ.

Contact Your\'s Advertisement; 9902492681

40 ವರ್ಷಗಳ ಅವಧಿ ಸಿಕ್ಕರೆ ಇಡೀ ದೇಶದಲ್ಲಿ ಒಂದು ಮತಕ್ಷೇತ್ರವನ್ನು ಆದರ್ಶ ಮತಕ್ಷೇತ್ರವಾಗಿ ಅಭಿವೃದ್ಧಿ ಪಡಿಸುವ ಅವಕಾಶವಿದ್ದರೂ ಕೇವಲ ಕೋಲಿ ಹಾಗೂ ಹಿಂದುಳಿದ ವರ್ಗಗಳ ಮತ ಪಡೆಯಲು ಮಾತ್ರ ಕ್ಷೇತ್ರವನ್ನು ಬಳಸಿ ಅಭಿವೃದ್ಧಿಯನ್ನು ಕಡೆಗಣಿಸಿರುವುದರ ಪರಿಣಾಮವಾಗಿ ಆ ಸಮುದಾಯದ ಜನರು ಹಸಿವು ನೀಗಿಸಲು ತುತ್ತು ಅನ್ನಕ್ಕಾಗಿ ಮುಂಬೈಗೆ ವಲಸೆ ಹೋಗಿ ಉದ್ಯೋಗ ಕಂಡುಕೊಳ್ಳುತ್ತಿದ್ದಾರೆ. ಈ ಸಮುದಾಯದ ಜನರನ್ನು ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಇನ್ನು ಹೀಗೆ ಹಿಂದುಳಿದಿರುವಂತೆ ಇಡುವುದೇ ಕಾಂಗ್ರೆಸ್ಸಿನ ಗುರಿಯಾಗಿದೆ. ಗುರುಮಠಕಲ್ ಕ್ಷೇತ್ರದಿಂದ ಅತ್ಯಧಿಕ ಸಂಖ್ಯೆಯಲ್ಲಿ ವಲಸೆ ಹೋಗುತ್ತಿರುವ ಅಂಕಿ ಅಂಶಗಳನ್ನು ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತರು ಹಾಗೂ ಪೊಲೀಸ್ ಇಲಾಖೆ ನೀಡುತ್ತಿದೆ.

ಸೋಲಿಲ್ಲದ ಸರದಾರ ಎಂದು ಹೇಳುತ್ತಿರುವವರಲ್ಲಿ ಇಚ್ಛಾಶಕ್ತಿ ಕೊರತೆಯಿಂದಾಗಿ ಈ ರೀತಿಯ ಸಮಸ್ಯೆ ಇನ್ನೂ ಜೀವಂತವಾಗಿದೆ. 65 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಅಭಿವೃದ್ಧಿ ಮಾಡದಿರುವುದನ್ನು ಕೇವಲ ಹತ್ತು ವರ್ಷಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಾಡಿ ದೇಶವನ್ನು ಜಗತ್ತಿನಲ್ಲಿಯೇ ಮುಂಚೂಣಿಯ ಸ್ಥಾನಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ.

ಈ ಭಾಗದ ನಿರುದ್ಯೋಗ ಸಮಸ್ಯೆ ಹಾಗೂ ವಲಸೆ ಹೋಗುವುದನ್ನು ತಪ್ಪಿಸಲು ಒಂದು ಲಕ್ಷ ನೇರ ಉದ್ಯೋಗ ಹಾಗೂ ಎರಡು ಲಕ್ಷ ಪರೋಕ್ಷ ಉದ್ಯೋಗ ಕಲ್ಪಿಸುವ ಮೆಗಾ ಜವಳಿ ಪಾರ್ಕ್ ಯೋಜನೆಯನ್ನು ಮೋದಿಯವರು ಕೊಡುಗೆಯಾಗಿ ನೀಡಿದ್ದಾರೆ. ಇದರಲ್ಲಿ 10ಸಾವಿರದಷ್ಟು ಉದ್ಯೋಗಗಳನ್ನು ಗುರುಮಠಕಲ್ ಕ್ಷೇತ್ರದಿಂದ ವಲಸೆ ಹೋಗುವವರಿಗಾಗಿಯೇ ಮೀಸಲಿಡಲಾಗುವುದು ಎಂದು ಭರವಸೆಯಿತ್ತರು . ಗುರುಮಠಕಲ್ ಕ್ಷೇತ್ರದಲ್ಲಿ ಇನ್ನೂ ಕೂಡ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ಪಕ್ಕಾ ಮನೆಗಳು ಇಲ್ಲದೆ ಇರುವುದಕ್ಕೆ ಕಾಂಗ್ರೆಸ್ ಕಾರಣವಾಗಿದ್ದು ಇದರಿಂದ ಬೇಸತ್ತ ಜನತೆ 45 ಡಿಗ್ರಿ ಕಡುಬಿಸಿಲಿನಲ್ಲೂ ಮೆರವಣಿಗೆಯಲ್ಲಿ ಬಂದು ಬಿಜೆಪಿಯನ್ನು ಬೆಂಬಲಿಸುತ್ತಿರುವುದೇ ಸಾಕ್ಷಿ ಎಂದು ಹೇಳಿದರು.

ಬಿಜೆಪಿ ಮೋದಿ ಅವರ ಹೆಸರಿನಲ್ಲಿ ಮತ ಕೇಳುತ್ತಿದೆ ಎಂದು ಟೀಕಿಸುವ ಕಾಂಗ್ರೆಸ್ ಕಲ್ಬುರ್ಗಿ ಮತಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆಯವರ ಸಾಧನೆಯನ್ನು ಮುಂದಿಟ್ಟು ಮತ ಕೇಳುತ್ತಿರುವುದಕ್ಕೆ ನಾಚಿಕೆಯಾಗುತ್ತಿಲ್ಲವೇ? ಕಾಂಗ್ರೆಸ್ ಬಂದರೆ ಗುರುಮಠಕಲ್ ನಂತೆ ಹಿಂದುಳಿದಿರುವಿಕೆಯನ್ನು ಕಾಣಬೇಕಾಗುತ್ತದೆ. ಮಾವನ (ಮಲ್ಲಿಕಾರ್ಜುನ ಖರ್ಗೆ) ಹೆಸರಿನಲ್ಲಿ ಅಳಿಯ (ರಾಧಾಕೃಷ್ಣ ದೊಡ್ಡಮನಿ)ಮತ ಕೇಳುವ ದುಸ್ಥಿತಿ ಕಲ್ಬುರ್ಗಿಯಲ್ಲಿ ಕಾಣುತ್ತಿದೆ. 100 ಮೀಟರ್ ನಡೆಯಲಾಗದವರು ಉರಿ ಬಿಸಿಲನ್ನು ತಾಳಲಾಗದವರು ಮತಕ್ಕಾಗಿ ಅಂಗಲಾಚುತ್ತಿರುವುದು ಹಾಸ್ಯಸ್ಪದ.

ಕಾಂಗ್ರೆಸ್ ರಾಜ್ಯದಲ್ಲಿ ವಿತರಿಸುತ್ತಿರುವ ಉಚಿತ ಅಕ್ಕಿ ಕೇಂದ್ರ ಸರಕಾರದ್ದು,ಮೋದಿಯವರದ್ದು. ರೈತರಿಗೆ ರಾಜ್ಯದಲ್ಲಿ ನೀಡುತ್ತಿದ್ದ ಕೃಷಿ ಸಮ್ಮಾನ್ ನಿಧಿ ಯೋಜನೆಯಡಿ ಈ ಹಿಂದೆ ಯಡಿಯೂರಪ್ಪ ಅವರು ಪ್ರಾರಂಭಿಸಿದ 10 ಸಾವಿರ ರೂಪಾಯಿಯಲ್ಲಿ ನಾಲ್ಕು ಸಾವಿರ ರೂಪಾಯಿ ಕಡಿತ ಮಾಡಿದೆ. ಮೋದಿಯವರು ನೀಡುವ 6000 ರೂಪಾಯಿ ಮಾತ್ರ ರೈತರಿಗೆ ನೀಡಿ ಈ ಸರಕಾರ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ.

ವಿವಿಧ ಯೋಜನೆ ಅಡಿಯಲ್ಲಿ ಹಿಂದುಳಿದ ವರ್ಗಗಳಿಗೆ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಡಳಿತ ಅವಧಿಯಲ್ಲಿ ನೀಡುತ್ತಿದ್ದ ಸ್ಕಾಲರ್ ಶಿಪ್ ಹಣವನ್ನು ಕೂಡ ನೀಡದೆ ರಾಜ್ಯದ ಜನತೆಗೆ ಅನ್ಯಾಯ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರ ಬಂದು 10 ತಿಂಗಳು ಕಳೆದರೂ ಒಂದು ಬುಟ್ಟಿ ಮಣ್ಣು ಹಾಕಲು ಯೋಗ್ಯತೆ ಇಲ್ಲದೆ ಅಭಿವೃದ್ಧಿಯನ್ನು ಸಂಪೂರ್ಣ ಮರೆತಿದೆ.ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಕೆಟ್ಟ ಆಡಳಿತವನ್ನು ನೀಡುತ್ತಿದೆ.

ಈ ಸರ್ಕಾರವು ಶೀಘ್ರದಲ್ಲೇ ತನ್ನಿಂದ ತಾನೇ ಬೀಳಲಿದ್ದು ಕಾಂಗ್ರೆಸ್ ಈಗ ಕಷ್ಟದ ಸ್ಥಿತಿಯಲ್ಲಿದೆ ಎಂದು ಜಾಧವ್ ಲೇವಡಿ ಮಾಡಿದರು. ದೇಶದ ಸುರಕ್ಷತೆ, ಉತ್ತಮ ಭವಿಷ್ಯಕ್ಕಾಗಿ ಹಾಗೂ ಅಭಿವೃದ್ಧಿಯ ರಾಷ್ಟ್ರವನ್ನು ಕಟ್ಟಲು ಮೋದಿ ಭಕ್ತಿಯು ಜನಶಕ್ತಿಯಾಗಿ ಎದ್ದು ನಿಲ್ಲಬೇಕಾಗಿದೆ. ಮೇ 7ರಂದು ಎಲ್ಲರೂ ಮತಗಟ್ಟೆಗೆ ತೆರಳಿ ಶೇಕಡ ನೂರರಷ್ಟು ಮತದಾನ ಮಾಡಬೇಕು ಎಂದು ಜಾಧವ್ ಹೇಳಿದರು.

ಈ ಕಾರ್ಯಕ್ರಮದಲ್ಲಿ ಬಿಜೆಪಿಯ ಮುಖಂಡರಾದ ಲಲಿತಾ ಆನಪೂರ್, ಶರಣಪ್ಪ ಹದನನೂರ್ . ದೇವೇಂದ್ರ ನಾದ್ ಮಾತನಾಡಿದರು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಹನಗೇರಿ, ಜಗದೀಶ್ ಚಂದ್ರ ಮೆಂಗಜಿ, ವೀರಭದ್ರ ಪಲಿಮುನೂರ್, ವೀರಯ್ಯಸ್ವಾಮಿ ಅಮೃತ ಬೋರಬಂಡ, ಶಂಕ್ರಪ್ಪ ಬೋಳೇರ, ಸೋಮಲಾ, ವೆಂಕಪ್ಪ ,ಲಕ್ಷ್ಮಣ ನಾಯಕ್ ಚಂದ್ರಕಲಾ ಮಲ್ಲಿಕಾರ್ಜುನ ಮತ್ತಿದ್ದರು ಉಪಸ್ಥಿತರಿದ್ದರು.

ಯಾದಗಿರಿ- ರಾಯಚೂರು ಹೆದ್ದಾರಿಯ ಬಳಿ ಚಕ್ರ ಕ್ರಾಸ್ ನಿಂದ ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧ ವ್ ಅವರನ್ನು ಗ್ರಾಮಸ್ಥರು ಸುಡು ಮದ್ದುಗಳ ಹಾಗೂ ಹಲಿಗೆ ವಾದ್ಯಗಳೊಂದಿಗೆ ಅದ್ದೂರಿಯಾಗಿ ಸ್ವಾಗತ ಕೋರಿದರು. ಸುಮಾರು ಒಂದು ಕಿಲೋಮೀಟರ್ ನಷ್ಟು ದೂರ 45 ಡಿಗ್ರಿ ಸುಡು ಬಿಸಿಲಿನಲ್ಲಿ ಗ್ರಾಮ ದೇವತೆ ಮಶ್ಯಮ್ಮ ದೇವಿ ಗುಡಿಯ ತನಕ ಭವ್ಯ ಮೆರೆಯವಣಿಗೆಯಲ್ಲಿ ಸಾಗಿ ವಿಶೇಷ ಪೂಜೆ ನೆರವೇರಿಸಿದರು. ನಂತರ ಬಹಿರಂಗ ಸಭೆಯಲ್ಲಿ ಪಾಲ್ಗೊಂಡರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here