ವಿವಿಧ ಬೇಡಿಕೆಗೆ ಆಗ್ರಹಿಸಿ ಮುಖ್ಯಮಂತ್ರಿ, ರಾಜ್ಯಪಾಲರಿಗೆ ಮನವಿ

0
65

ಶಹಾಬಾದ: ವಿವಿಧ ಬೇಡಿಕೆಗಳನ್ನು ಒತ್ತಾಯಿಸಿ ಬುಧವಾರ ನಗರದ ಜೆಡಿಎಸ್ ಘಟಕದ ವತಿಯಿಂದ ಗ್ರೇಡ್-೨ ತಹಸೀಲ್ದಾರ ವೆಂನಗೌಡ ಪಾಟೀಲ ಮುಖಾಂತರ ಮುಖ್ಯಮಂತ್ರಿಗಳಿಗೆ ಹಾಗೂ ರಾಜ್ಯಪಾಲರಿಗೆ ಎರಡು ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಅಧ್ಯಕ್ಷ ರಾಜಮಹ್ಮದ್ ರಾಜಾ, ಲಾಕ್‌ಡೌನದಿಂದ ಸಾರ್ವಜನಿಕರ ಬದುಕು ತತ್ತರಿಸಿ ಹೋಗಿದೆ.ಅದರಲ್ಲಿ ಕೂಲಿ ಕಾರ್ಮಿಕರ, ರೈತರ, ನಿರ್ಗತಿಕರ ಜೀವನ ಮಾತ್ರ ಕಷ್ಟದಾಯಕವಾಗಿದೆ.ಅದರಲ್ಲೂ ಕೊರೊನಾ ವ್ಯಾಪಕವಾಗಿ ಹರಡುತ್ತಿರುವುದರಿಂದ ಸಾರ್ವಜನಿಕರಿಗೆ ಕೋವಿಡ್-೧೯ ಲಸಿಕೆ ಪೂರೈಕೆಯಾಗುವಂತೆ ಮಾಡಬೇಕು.

Contact Your\'s Advertisement; 9902492681

ರೈತ ಕೂಲಿ ಕಾಂಇಕರಿಗೆ ಆಹಾರ ಕಿಟ್ ವಿತರಣೆ ಮಾಡಬೇಕು.ಅಲ್ಲದೇ ಹತ್ತು ಸಾವಿರ ರೂ. ಪ್ಯಾಕೇಜ್ ಘೋಷಣೆ ಮಾಡಬೇಕು. ಪದವೀಧರ ನಿರೋದ್ಯೋಗ ಯುವಕರಿಗೆ, ಅತಿಥಿ ಶಿಕ್ಷಕರಿಗೆ ಹಾಗೂ ಖಾಸಗಿ ಶಿಕ್ಷಕರಿಗೆ ಹಾಘೂ ಹಮಾಲರಿಗೆ ಪ್ಯಾಕೇಜ್ ಘೋಷಣೆ ಮಾಡಬೇಕು. ಶಿಕ್ಷಕ ವೃಂದಕ್ಕೆ Pಕೊರೊನಾ ವಾರಿಯರ್ಸ ಎಂದು ಘೋಷಣೆ ಮಾಡಬೇಕು.ಅಲ್ಲದೇ ಶಹಾಬಾದ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸ್ಯಾನಿಟೈಜೇಷನ್ ಹಾಗೂ ಲಸಿಕೆ ನೀಡುವಲ್ಲಿ ಮುಂದಾಗಬೇಕೆಂದು ಆಗ್ರಹಿಸಿದರು.

ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಲೋಹಿತ್ ಕಟ್ಟಿ ಮಾತನಾಡಿ, ಕೊರೊನಾದಿಂದ ಸಂದರ್ಭದಲ್ಲಿ ಕೂಲಿ ಕಾರ್ಮಿಕರ, ರೈತರ, ನಿರ್ಗತಿಕರ ಮೂರಾಬಟ್ಟೆಯಾಗಿದೆ.ಅವರಿಗಾಗಿ ಸರಕಾರ ಯಾವುದೇ ಸಹಾಯ ಹಸ್ತ ಚಾಚಿಲ್ಲ.ಆದ್ದರಿಂದ ಸರಕಾರ ಇವರೆಲ್ಲರಿಗೂ ಪರಿಹಾರ ಒದಗಿಸಬೇಕು.ಇಲ್ಲದಿದ್ದರೇ ರಾಜ್ಯಪಾಲರು ಬಿಜೆಪಿ ಸರಕಾರವನ್ನು ವಜಾಗೊಳಿಸಿ ಜನರ ಜೀವನ ರಕ್ಷಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಅಬ್ದುಲ್ ಜಬ್ಬಾರ, ಮಹ್ಮದ್ ಚಾಂದ್ ವಾಹೀದಿ,ಬಸವರಾಜ ಮಯೂರ, ವಿಶ್ವಾನಾಥ ಚಿತ್ತಾಪೂರ, ಸುನೀಲ ಸೂರ್ಯವಂಶಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here