17 ಬೇಡಿಕೆಗೆ ಒತ್ತಾಯಿಸಿ ಎಸ್.ಡಿ.ಪಿ.ಐದಿಂದ ಪಿಐಎಲ್: ಕ್ರಮಕ್ಕೆ ಅಧಿಕಾರಿಗಳಿಗೆ ನ್ಯಾಯಲಯದಿಂದ ಆದೇಶ

0
267

ಕಲಬುರಗಿ: ಕಾಳ ಸಂತೆಯಲ್ಲಿ ಆಕ್ರಮವಾಗಿ ಔಷಧಿ, ಆಕ್ಸಿಜನ್ ಸಿಲೆಂಡರ್ ಮಾರಾಟ ಹಾಗೂ ಬೆಡ್ ಕೊರತೆ ಸೇರಿದಂತೆ ವಿವಿಧ 17 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಎಸ್.ಡಿ.ಪಿ.ಐ ಕಲಬುರಗಿ ಜಿಲ್ಲಾ ಘಟಕ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಲ ವಿಚಾರಣೆ ನಡೆಸಿ ಕ್ರಮಕೈಗೊಳ್ಳಲು ಆರೋಗ್ಯ ಇಲಾಖೆಯ ಕಾರ್ಯದರ್ಶಿ, ಆಯುಕ್ತರಿಗೆ, ಕಲಬುರಗಿ ಪ್ರಾದೇಶಿಕ ಆಯುಕ್ತ ಹಾಗೂ ಜಿಲ್ಲಾಧಿಕಾರಿಗೆ ಆದೇಶ ನೀಡಿದೆ.

ಜಿಲ್ಲೆಯಲ್ಲಿ ಬಡ್ ಗಳ ಕೊರತೆ, ಔಷಧಿ ಹಾಗೂ ಆಕ್ಸಿಜನ್ ಸಿಲಿಂಡರ್ ಆಕ್ರಮವಾಗಿ ಕಳಾ ಸಂತೆಯಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮಕೈಗೋಳಬೇಕೆಂದು @SDPI ಪಕ್ಷದಿಂದ ಪ್ರಾದೇಶಿಕ ಆಯುಕ್ತರು, ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳಿಗೆ ದೂರು ನೀಡಿ ಕ್ರಮ ಕೈಗೋಳ್ಳಬೇಕೆಂದು ಅಧಿಕಾರಿಗಳಿಗೆ ದೂರು ಸಲ್ಲಿಸಿ ಮನವಿ ಮಾಡಿದರು.

Contact Your\'s Advertisement; 9902492681

ಅರ್ಜಿಗಳ ಬಗ್ಗೆ ಇಲಾಖೆಯಿಂದ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಎಸ್.ಡಿ‌.ಪಿ.ಐ ಪಕ್ಷದಿಂದ ನ್ಯಾಯವಾದಿ ನವಿದ್ ಅಹ್ಮದ್ ಅವರ ಮೂಲಕ ಉಚ್ಚ ನ್ಯಾಯದಲ್ಲಿ ಆರ್ಟಿಕಲ್ 226 ಅನ್ವಯ ಪಿಐಎಲ್ ದಾಖಲಿಸಿತು.

ಪಿಐಎಲ್ ಕುರಿತು ವಿಡಿಯೋ ಕಾನ್ಫರೆನ್ಸ್ ಮೂಲಕ ಉಚ್ಚನ್ಯಾಯಾಲಯದ ನ್ಯಾಯಾಧೀಶರು ವಿಚಾರಣೆ ನಡೆಸಿ, ವಿಕ್ರಮ ಹುಯಿಲಗೋಳಗೆ ನೇಮಿಸಿತ್ತು. ಸದ್ಯ ಸದರಿ ದೂರಿನ ಬಗ್ಗೆ ಕಾನೂನಾತ್ಮಕ ಕ್ರಮ ಕೈಗೊಳ್ಳಲು ಆದೇಶ ನೀಡಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here