ಅಂತರ್ಜಾಲ ಖಾಸಗಿ ಮಳಿಗೆಗಳನ್ನು ತೆರೆಯಲು ಅನುಮತಿ ನೀಡುವಂತೆ ಆಗ್ರಹ

0
89

ಕಲಬುರಗಿ: ಲಾಕ್ ಡೌನ್ ಅಗತ್ಯ ಸೇವೆಗಳಲ್ಲಿ ಒಂದಾದ ಖಾಸಗಿ ಅಂತರ್ಜಾಲ ಸೇವಾ ಮಳಿಗೆಗಳನ್ನು ತೆರೆಯಲು ಅನುಮತಿ ನೀಡುವಂತೆ ಕನ್ನಡ ಭೂಮಿ ಜಾಗೃತಿ ಸಮಿತಿ ಜಿಲ್ಲಾ ಅಧ್ಯಕ್ಷ ಪ್ರಶಾಂತ ತಂಬೂರಿ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ವಿವಿಧ ಇಲಾಖೆಗಳ ತರಬೇತಿಗಳಿಗಾಗಿ ಆನ್ ಲೈನ್ ಅರ್ಜಿ ಸಲ್ಲಿಸಲು ಅವಕಾಶವಿದೆ.ಪೊಲೀಸ್ ಪೇದೆ ಭರ್ತಿ, ಬ್ಯಾಂಕ್ ಉದ್ಯೋಗಾವಕಾಶ ಸೇರಿದಂತೆ ಜಾತಿ ಪ್ರಮಾಣಪತ್ರ,ಮರಣ ಪ್ರಮಾಣ ಪತ್ರ, ವಿದ್ಯಾರ್ಥಿ ವೇತನ ಹೀಗೆ ಎಲ್ಲವೂ ಅಂತರ್ಜಾಲವನ್ನೇ ಅವಲಂಬಿಸಿದೆ.

Contact Your\'s Advertisement; 9902492681

ಇನ್ನು ಸರಕಾರ ಘೋಷಿಸಿದ ಪರಿಹಾರದ ಹಣ ಪಡೆಯಲು ಫಲಾನುಭವಿಗಳು ಇಂಟರ್ನೆಟ್ ನಲ್ಲಿ ಅರ್ಜಿ ಸಲ್ಲಿಸಬೇಕು,ಆದರೆ ರಾಜ್ಯದಲ್ಲಿ ಕಳೆದ ಒಂದು ತಿಂಗಳಿಂದ ಲಾಕ್ ಡೌನ್ ಜಾರಿಯಲ್ಲಿದೆ.ಅಗತ್ಯ ಖರೀದಿಗೆ ನಿಗದಿತ ಸಮಯ ನೀಡಲಾಗಿದೆ.ನೀಡಲಾದ ಸಮಯದಲ್ಲಿ ಇಂಟರ್ನೆಟ್ ಸೇವೆ ನೀಡಲು ಸಾಕಾಗುತ್ತಿಲ್ಲ.ದಿನನಿತ್ಯ ವಿದ್ಯಾರ್ಥಿಗಳು, ನೌಕರರು ಅಂತರ್ಜಾಲಕ್ಕಾಗಿ ಪರದಾಡುವಂತಾಗಿದೆ.ಕೊರೊನಾ ಸೋಂಕಿತರ ಕೊವಿಡ ಪರೀಕ್ಷೆಯ ವರದಿ ಕೂಡ ಇಂಟರ್ನೆಟ್ ನಲ್ಲಿ ನಮೂದಾಗಿರುತ್ತದೆ.

ಅದರ ಪ್ರಿಂಟ್ ಕಾಪಿ ಪಡೆಯ ಬೇಕಾದರೆ ಖಾಸಗಿ ಅಂತರ್ಜಾಲ ಮಳಿಗೆಗೆ ತೆರಳಬೇಕು.ಮಳಿಗೆಗಳು ಬಂದ್ ಆಗಿರುವುದರಿಂದ ಪರದಾಡುವಂತಾಗಿದೆ. ಈಗಂತೂ ಲಾಕ್ ಡೌನ್ ಇರುವುದರಿಂದ ಸರಕಾರ ಮನೆಗಳ,ನೀರಿನ ಕರ, ವಿದ್ಯುತ್ ಬಿಲ್ ಹಾಗೂ ಇನ್ನಿತರ ತೆರಿಗೆಗಳನ್ನು ಆನ್ ಲೈನ್ ನಲ್ಲಿ ಪಾವತಿಸಲು ಸೂಚಿಸಿದೆ.ಆದರೆ ನಿಗದಿತ ಸಮಯದಲ್ಲಿ ಇದು ಸಾಧ್ಯವಿಲ್ಲ.ಆದ್ದರಿಂದ ಜಿಲ್ಲಾಧಿಕಾರಿಗಳು ಅಂತರ್ಜಾಲ ಮಳಿಗೆಗಳನ್ನು ದಿನದಲ್ಲಿ ಕನಿಷ್ಠ 10 ತಾಸು ತೆರೆಯಲು ಅನುಮತಿ ನೀಡುವಂತೆ ಅವರು ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here