ಮರ ನೆಟ್ಟಿ ಬರ ಅಟ್ಟಿ…! ಅರಣ್ಯ ನಾಶದಿಂದ ಜೀವಿತಾವಧಿ ಕಡಿಮ

0
57

ಕಲಬುರಗಿ: ವಿಶ್ವಜ್ಯೋತಿ ಪ್ರತಿಷ್ಠಾನಕ್ಕೆ ಹನ್ನೊಂದರ ಹೊನಲು ಹಾಗೂ ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಯವರ ಜನ್ಮಜ್ಯೋತಿಗೆ 40 ರ ಬೆಳಕು… ಈ ನಿಮಿತ್ತ ತಿಂಗಳಪರ್ಯಂತವಾಗಿ ಹಮ್ಮಿಕೊಂಡಿರುವ ‘ಆರೋಗ್ಯ ವಿಜಯ’ ಶೀರ್ಷಿಕೆಯಡಿಯಲಿ ಕಲಬುರಗಿ ಹೊರವಲಯದ ತಾಜ್ ಸುಲ್ತಾನಪುರದ ಕೆ.ಎಸ್.ಆರ್.ಪಿ.ಕ್ಯಾಂಪನಲ್ಲಿಂದು ನಲ್ವತ್ತು ಸಸಿಗಳನ್ನು ನೆಡುವ ಮೂಲಕ ಪರಿಸರ ಪ್ರೇಮವನ್ನು ಮೆರೆದರು…

ಕಮಾಂಡೆಂಟ್ ಬಸವರಾಜ ಜಿಳ್ಳೆ, ಮಾಜಿ ಶಾಸಕಿ ಅರುಣಾದೇವಿ ಸಿ.ಪಾಟೀಲ ರೇವೂರ, ಜಿಪಂ ಸದಸ್ಯ ಹರ್ಷಾನಂದ ಎಸ್.ಗುತ್ತೇದಾರ, ಪರಿಸರವಾದಿ ಪೂಜಾ ಬಂಕಲಗಿ, ನ್ಯಾಯವಾದಿ ಶಾಂತವೀರ ಬಡಿಗೇರ, ಡಿವೈಎಸ್ಪಿ ಗುರುನಾಥ, ಸ್ವಾಗತ ಸಮಿತಿಯ ಕಲ್ಯಾಣಕುಮಾರ ಶೀಲವಂತ, ರವೀಂದ್ರಕುಮಾರ ಭಂಟನಳ್ಳಿ, ಪರಮೇಶ್ವರ ಶಟಕಾರ, ಪ್ರಾಧ್ಯಾಪಕ ಡಾ.ಬಾಬುರಾವ ಶೇರಿಕಾರ, ಶಿವಾನಂದ ಮಠಪತಿ ಸೇರಿದಂತೆ ಅನೇಕ ಪೊಲೀಸ್ ಅಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು…

Contact Your\'s Advertisement; 9902492681

ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಜಿಪಂ ಸದಸ್ಯ ಹರ್ಷಾನಂದ ಗುತ್ತೇದಾರ, ಭೂಮಿಯಲ್ಲಿನ ಸತ್ವವನ್ನು ಕಾಪಾಡಿಕೊಳ್ಳಬೇಕಾದರೆ ರಾಸಾಯನಿಕಗಳನ್ನು ಕಡಿಮೆಯಾಗಿ ಹಾಗೂ ಮಿತವಾಗಿ ಬಳಸಬೇಕು. ಪರಿಸರ ಸ್ನೇಹಿಯಾಗಿ ಬಾಳುವುದರ ಜತೆಗೆ ನಮ್ಮೆಲ್ಲರ ಭವ್ಯ ಭವಿಷ್ಯಕ್ಕಾಗಿ ಗಿಡ-ಮರಗಳನ್ನು ಬೆಳೆಸಬೇಕಿದೆ ಎಂದರು.

ಉಪನ್ಯಾಸ ನೀಡಿದ ಪರಿಸರವಾದಿ ಪೂಜಾ ಬಂಕಲಗಿ, ಮಳೆ ಬರದೇ ಇರುವುದಕ್ಕೆ ಕತ್ತೆ-ಕಪ್ಪೆಗಳ ಮದುವೆ ಮಾಡುವುದನ್ನು ಬಿಟ್ಟು, ಗಿಡ-ಮರಗಳನ್ನು ಉಳಿಸಿ ಬೆಳೆಸಬೇಕೆಂದ ಅವರು, ಹಸಿರು ನಮ್ಮೆಲ್ಲರ ಉಸಿರಾಗಬೇಕೆಂದು ಮಾರ್ಮಿಕವಾಗಿ ಹೇಳಿದರು.

ಅಧ್ಯಕ್ಷತೆವಹಿಸಿ ಮಾತನಾಡಿದ ಕಮಾಂಡೆಂಟ್ ಬಸವರಾಜ ಜಿಳ್ಳೆ, ಜಾಗತಿಕ ತಾಪಮಾನದ ಕಡಿವಾಣಕ್ಕೆ ಅರಣ್ಯವನ್ನು ಸಂರಕ್ಷಣೆ ಮಾಡುವುದು ಇಂದು ಅಗತ್ಯವಿದೆ ಎಂದರು..

ಪ್ರಾಸ್ತಾವಿಕ ನುಡಿಗಳನ್ನಾಡಿದ ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ, ನಮ್ಮ ಜೀವನಾಡಿಯಾದ ಪರಿಸರದ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಶುದ್ಧವಾದ ಗಾಳಿ, ನೀರು ಮತ್ತು ಆಹಾರ ಸಿಗದೇ ಇರುವುದಕ್ಕೆ ಮಾನವನ ಸ್ವಾರ್ಥ ಮನಸ್ಸೇ ಮೂಲ ಕಾರಣವಾಗಿದೆ. ಹಾಗಾಗಿ, ಪರಿಸರದ ಮಹತ್ವ ಮತ್ತು ಅದರ ಅವಶ್ಯಕತೆ, ರಕ್ಷಣಾತ್ಮಕ ಕ್ರಮಗಳ ಕುರಿತು ಜನರಲ್ಲಿ. ಜಾಗೃತಿ ಮೂಡಿಸಬೇಕಿದೆ ಎಂದರು…

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here