ಕಲಬುರಗಿ: ಗುಲ್ಬರ್ಗ ವಕೀಲರ ಸಂಘ ಹಾಗೂ ಹೈಕೋರ್ಟ್ ಯೂನಿಟ್ ವತಿಯಿಂದ ಬಾರ್ ಅಸೋಸಿಯೇಷನ್ ಬಿಲ್ಡಿಂಗ್ ನ ಸಭಾ ಭವನದಲ್ಲಿ ಇಂದು ಪ್ರಿನ್ಸಿಪಲ್ಸ್ ಆಫ್ ನ್ಯಾಚ್ಯೂರಲ್ ಜಸ್ಟಿಸ್ ಮತ್ತು ಕ್ವೇಸಿ ಜುಡಿಸಿಯಲ್ ಪ್ರೊಸಿಡಿಂಗ್ಸ್ ವಿಷಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಹೈಕೋರ್ಟ್ ಜಸ್ಟಿಸ್ ಬಿ.ಎಂ. ಶಾಮಪ್ರಸಾದ ಅವರು ವಿಶೇಷ ಉಪನ್ಯಾಸ ನೀಡಿದರು. ಹೈಕೋರ್ಟ್ ಜಸ್ಟಿಸ್ ಕೆ.ಎನ್. ಫಣೀಂದ್ರ ಅವರು ಅಧ್ಯಕ್ಷತೆ ವಹಿಸಿದ್ದರು. ಹೈಕೋರ್ಟ್ ಜಸ್ಟಿಸ್ ಅಶೋಕ ಎನ್ ವೇದಿಕೆಯಲ್ಲಿ ಉಪಸ್ತಿತರಿದ್ದರು.
ವಕೀಲರ ಸಂಘದ ಅಧ್ಯಕ್ಷ ಅರುಣಕುಮಾರ ಕಿಣ್ಣಿ, ಪ್ರಧಾನ ಕಾರ್ಯದರ್ಶಿ ಶರಣಬಸವ ಪಸ್ತಾಪುರ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.