ವೀರಶೈವ ಲಿಂಗಾಯತ ಬಾಲಕಿಯರ ಉಚಿತ ವಸತಿ ನಿಲಯಕ್ಕೆ ಐದು ಲಕ್ಷ ದೇಣಿಗೆ

0
32

ಕಲಬುರಗಿ: ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕ ಕಲಬುರಗಿವತಿಯಿಂದ ನಿರ್ಮಿಸುತ್ತಿರುವ ವೀರಶೈವ ಲಿಂಗಾಯತ ಬಾಲಕಿಯರ ಉಚಿತ ವಸತಿ ನಿಲಯಕ್ಕೆ ಶ್ರೀ ಬಸವೇಶ್ವರ ಬ್ಯಾಂಕ್‌ನ ಅಧ್ಯಕ್ಷ ಚಂದ್ರಶೇಖರ ತಳ್ಳಳ್ಳಿ ಹಾಗೂ ಉಪಾಧ್ಯಕ್ಷ ಎಂ.ಡಿ ಪಾಟೀಲರು ಐದು ಲಕ್ಷ ರೂಪಾಯಿಗಳ ದೇಣಿಗೆಯನ್ನು ಚೆಕ್ ಮುಖಾಂತರ ವಸತಿ ನಿಲಯ ಕಟ್ಟಡದ ಉಸ್ತುವಾರಿ ಅಧ್ಯಕ್ಷ ಶಾಸಕರಾದ ಶರಣಬಸಪ್ಪ ದರ್ಶನಾಪುರ ಹಾಗೂ ಮಹಾಸಭಾದ ಅಧ್ಯಕ್ಷ ಶರಣಕುಮಾರ ಮೋದಿಯವರಿಗೆ ನೀಡಲಾಯಿತು.

ದೇಣಿಗೆ ಚೆಕ್‌ನ್ನು ಸ್ವೀಕರಿಸಿ ಮಾತನಾಡಿದ ಶಾಸಕ ಶರಣಬಸಪ್ಪ ದರ್ಶನಾಪುರ ಅವರು, ಬಸವೇಶ್ವರ ಬ್ಯಾಂಕ್ ನ ಅಧ್ಯಕ್ಷರಿಗೆ, ಪದಾಧಿಕಾರಿಗಳಿಗೆ ಹಾಗೂ ಎಲ್ಲಾ ಸದಸ್ಯರಿಗೆ ತುಂಬು ಹೃದಯದ ಕೃತಜ್ಞತೆ ಹೇಳಿದರು. ಇದೇ ರೀತಿಯ ಧನಸಹಾಯ ಸಮಾಜದ ಬಾಂಧವರು ನೀಡಬೇಕೆಂದು ಮನವಿ ಮಾಡಿದರು.

Contact Your\'s Advertisement; 9902492681

ನಂತರ ಮಾತನಾಡಿದ ಚಂದ್ರಶೇಖರ ತಳ್ಳಳ್ಳಿ, ಶಾಮನೂರು ಶಿವಶಂಕರಪ್ಪ, ಈಶ್ವರ ಖಂಡ್ರೆಯವರ ಮಾರ್ಗದರ್ಶನದಲ್ಲಿ ಮೋದಿ ಅಣ್ಣನವರು ಉಚಿತ ಬಾಲಕಿಯರ ವಸತಿ ನಿಲಯ ನಿರ್ಮಿಸುತ್ತಿರುವುದು ನಮಗೆಲ್ಲಾ ತುಂಬಾ ಹೆಮ್ಮೆಯ ವಿ?ಯ. ಈ ಭಾಗದಲ್ಲಿ ಸಮಾಜದವತಿಯಿಂದ ಮೊದಲ ಬಾಲಕಿಯರ ವಸತಿ ನಿಲಯ ಇದಾಗಿದೆ.ಇದು ನಮ್ಮ ವೀರಶೈವ ಲಿಂಗಾಯತ ಸಮಾಜದ ಒಗ್ಗಟ್ಟಿನ ಶಕ್ತಿಗೆ ಸಾಕ್ಷಿಯಾಗಲಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ವೈಯಕ್ತಿಕ ಹಾಗೂ ಬ್ಯಾಂಕ್‌ವತಿಯಿಂದ ಹೆಚ್ಚಿನ ಸಹಾಯ ಮಾಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಬ್ಯಾಂಕ್‌ನ ಆಡಳಿತ ಮಂಡಳಿ ಸದಸ್ಯರಾದ ಧರ್ಮಪ್ರಕಾಶ ಪಾಟೀಲ, ಆರ್ ಜಿ ಶೆಟಗಾರ್, ಸಿದ್ರಾಮಪ್ಪ ಪಾಟೀಲ, ಶಿವಲಿಂಗಪ್ಪ ಬಂಡಕ , ಮಹಾಸಭಾದ ಶ್ರೀಮತಿ ಜ್ಯೋತಿ ಮರಗೋಳ ಹಾಗೂ ವಸತಿ ನಿಲಯದ ಉಸ್ತುವಾರಿ ಸದಸ್ಯರಾದ , ಸೋಮಶೇಖರ ಹಿರೇಮಠ, ಭೀಮಾಶಂಕರ ಮೀಟೇಕಾರ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here