ಜಿಲ್ಲಾ ಕಾಟ್ರ್ಯಾಕ್ಟರ್ ಅಸೋಶಿಯೇಷನ್ ವತಿಯಿಂದ ಸಭೆ

0
23

ಕಲಬುರಗಿ: ನಗರದ ಸೇಡಂ ರಸ್ತೆಯಲ್ಲಿರುವ ಹಿಂದಿ ಪ್ರಚಾರ ಭವನದಲ್ಲಿ ಕಲಬುರಗಿ ಜಿಲ್ಲಾ ಕಾಟ್ರ್ಯಾಕ್ಟರ್ ಅಸೋಶಿಯೇಷನ್ ವತಿಯಿಂದ ಸಭೆಯನ್ನು ನಡೆಸಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು ಎಂದು ಅಸೋಶಿಯೇಷನ್‌ನ ಅಧ್ಯಕ್ಷ ಜಗನ್ನಾಥ ಬಿ.ಶೇಗಜಿ ತಿಳಿಸಿದರು.

ಸಭೆಯಲ್ಲಿ ಪ್ರಮುಖವಾಗಿ ಕೈಗೊಳ್ಳಲಾದ ನಿರ್ಣಯಗಳಾದ, ೨೪ನೇ ಮೇ ೨೦೨೧ ರಂದು ರಸ್ತೆ ಹಾಗೂ ಕಟ್ಟಡ ಕಾರ್ಮಿಕರ ಸಹಾಯ ಮಾಡಲು ಏಳು ವಾಹನಗಳನ್ನು ಇಡಲಾಗಿತ್ತು. ವಾಹನಗಳು ಯಾವ ಕಡೆ ನಡೆದಿದ್ದು ಹಾಗೂ ಖರ್ಚು ವೆಚ್ಚಗಳ ಬಗ್ಗೆ ತಿಳಿದುಕೊಳ್ಳಲಾಯಿತು. ಅದೇ ರೀತಿಯಾಗಿ ೭ನೇ ಜೂನ್ ೨೦೨೧ ರ ವರೆಗೆ ಉಚಿತ ಸೇವೆಯನ್ನು ಮುಂದುವರೆಸಲು ಕಾರ್ಯದರ್ಶಿಗಳಿಗೆ ಸೂಚಿಸಲಾಯಿತು ಎಂದರು.

Contact Your\'s Advertisement; 9902492681

ಕೆಕೆಆರ್‌ಡಿ ಹಾಗೂ ಕೆಪಿಡಬ್ಲೂಡಿ ಮತ್ತು ಇರಿಗೇಷನ್ ಮತ್ತು ಆರೋಗ್ಯ ಇಲಾಖೆ ಮತ್ತು ಕಲಬುಗಿ ಮಹಾನಗರ ಪಾಲಿಕೆಯಲ್ಲಿ ಟೆಂಡರ್ ಬಗ್ಗೆ ಹಾಗೂ ಇನ್ನಿತರ ವಿಷಯದ ಬಗ್ಗೆ ಕಾನೂನು ಬಾಹಿರವಾಗಿ ನಡೆಯುತ್ತಿರುವ ಬಗ್ಗೆ ಮುಖ್ಯಮಂತ್ರಿಗಳಿಗೆ ಸಂಬಂಧ ಪಟ್ಟ ಇಲಾಖೆಯ ಪತ್ರದ ಮುಖಾಂತರ ಅವರ ಗಮನಕ್ಕೆ ತರುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು ಎಂದರು.

ಇದೇ ವೇಳೆಯಲ್ಲಿ ಸರ್ಕಾರ ದಿಟ್ಟ ಹೆಜ್ಜೆಗಳನ್ನು ಇಟ್ಟು ಜನರಿಗೆ ತೊಂದರೆಯಾಗದಂತೆ ಎಲ್ಲರ ಬಗ್ಗೆ ಕಾಳಜಿ ವಹಿಸಿಕೊಂಡು ಕೆಲಸ ಮಾಡುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು ಎಂದರು.

ಈ ಸಂದರ್ಭದಲ್ಲಿ ಅಸೋಶಿಯೇಷನ್ ಉಪಾಧ್ಯಕ್ಷ ಮೋಹಸಿನ್ ಎಮ್.ಪಟೇಲ್, ಪ್ರಧಾನ ಕಾರ್ಯದರ್ಶಿ ಸಂಜಯ ಆರ್.ಕೆ, ಸರದಾರಯ್ಯ ಗುತ್ತೇದಾರ, ಸಲೀಮ್ ಅಟ್ಟೂರ್, ರಾಜಶೇಖರ ಪಾಟೀಲ್, ಮನ್ಸೂರ ತೊಂಚಿ, ಗುರುನಂಜಯ್ಯ ಸ್ವಾಮಿ, ಶಿವಾನಂದ ಪಾಟೀಲ್, ರಾಜಶೇಖರ ಎಂಕಚಿ, ಮಡೆಪ್ಪ ಗುತ್ತೇದಾರ, ಚನ್ನಯ್ಯ ಮಠ, ಸಿರಾಜ್ ಪಟೇಲ್ ಸೇರಿದಂತೆ ಇನ್ನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here