ಅನಾವಶ್ಯಕವಾಗಿ ಹೊರಗೆ ಬಂದವರ ಬೈಕ್‌ಗಳನ್ನು ಸೀಜ್ ಮಾಡಿದ ಪೊಲೀಸ್

0
23

ಸುರಪುರ: ಲಾಕ್‌ಡೌನ್ ಸಂದರ್ಭದಲ್ಲಿ ಅನಾವಶ್ಯಕವಾಗಿ ಹೊರಗೆ ಬರಬೇಡಿ ಎಂದು ಅನೇಕ ಬಾರಿ ಹೇಳಿದರು ಕೇಳದೆ ಸುತ್ತಾಟ ನಡೆಸುವವರಿಗೆ ಬುಧವಾರ ಪೊಲೀಸರು ಶಾಕ್ ನೀಡಿದ್ದಾರೆ.

ಬುಧವಾರ ಬೆಳಿಗ್ಗೆಯಿಂದಲೂ ನಗರದ ಅನೇಕ ಸ್ಥಳಗಳಿಗೆ ಪಿಐ ಎಸ್.ಎಮ್.ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು,ಅಲ್ಲದೆ ತಮ್ಮ ಸಿಬ್ಬಂದಿಗಳಿಗೂ ಖಡಕ್ ಸೂಚನೆ ನೀಡಿ ಅನಾವಶ್ಯಕವಾಗಿ ಯಾರೇ ಹೊರಗೆಡ ಬಂದರೆ ಅಂತವರ ಬೈಕ್‌ಗಳನ್ನು ಸೀಜ್ ಮಾಡುವಂತೆ ತಿಳಿಸಿದರು.

Contact Your\'s Advertisement; 9902492681

ರೈತನ ಪ್ರತಿ ಎಕರೆಗೆ 10 ಸಾವಿರ ಪರಿಹಾರ ನೀಡಲು ಬಾಲರಾಜ್ ಗುತ್ತೇದಾರ ಆಗ್ರಹ

ಅದರಂತೆ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಸಿಬ್ಬಂದಿಗಳೊಂದಿಗೆ ಕಾರ್ಯಾಚರಣೆ ನಡೆಸಿದ ಪಿಎಸ್‌ಐ ಚಂದ್ರಶೇಖರ ನಾರಾಯಣಪುರ ಹೊರಗಡೆ ಬಂದವರ ಬೈಕ್‌ಗಳನ್ನು ಸೀಜ್ ಮಾಡುವ ಮೂಲಕ ಶಾಕ್ ನೀಡಿದರು.ಅಲ್ಲದೆ ಅನೇಕರು ತಮ್ಮ ಬೈಕ್‌ಗಳನ್ನು ಬಿಡುವಂತೆ ವಿನಂತಿ ಮಾಡಿಕೊಂಡರು ಕ್ಯಾರೆ ಅನ್ನದ ಪಿಎಸ್‌ಐ ಮತ್ತೊಮ್ಮೆ ಹೊರಗೆ ಬಾರದಂತೆ ನೆನಪಿಸಲು ಬೈಕ್‌ಗಳನ್ನು ಸ್ಥಳದಲ್ಲಿ ಬಿಡದೆ ಪೊಲೀಸ್ ಠಾಣೆಗೆ ಕಳುಹಿಸುವ ಮೂಲಕ ಲಾಕ್‌ಡೌನ್ ಕಠಿಣತೆಯನ್ನು ಎಚ್ಚರಿಸಿದರು.

ಪೊಲೀಸರು ಇಷ್ಟೊಂದು ಕಠಿಣ ಕ್ರಮ ಕೈಗೊಳ್ಳುತ್ತಿದ್ದರು ಅನೇಕರು ಬೈಕ್ ಹತ್ತಿ ಓಡಾಡಿದ್ದು ಕಂಡು ಬಂತು.ಪೊಲೀಸರು ತಡೆದು ಕೇಳಿದರೆ ಬ್ಯಾಂಕ್ ವ್ಯವಹಾರಕ್ಕೆ ಬಂದಿರುವುದಾಗಿ ಮತ್ತು ಕೆಲವರು ಆಸ್ಪತ್ರೆ ಔಷಧಿ ಖರಿದಿ ಸೇರಿದಂತೆ ವಿಧವಿಧದ ನೆಪಗಳನ್ನು ಹೇಳುವ ಮೂಲಕ ಪೊಲೀಸರಿಂದ ತಪ್ಪಿಸಿಕೊಂಡು ಹೋಗಿದ್ದು ಕಂಡು ಬಂತು.ಆದರೆ ಪೊಲೀಸರು ಇನ್ನೊಮ್ಮೆ ಹೊರಗಡೆ ಕಂಡರೆ ಬೈಕ್ ಸೀಜ್ ಮಾಡುವುದಾಗಿ ಎಚ್ಚರಿಸಿ ಕಳುಹಿಸಿದ್ದಾರೆ.

ಮಂಗಳವಾರ ಮತ್ತು ಬುಧವಾರದಲ್ಲಿ ೪೦ ಬೈಕ್ ೨ ಕಾರು ಮತ್ತು ೩ ಆಟೋಗಳು ಸೀಜ್ ಮಾಡಲಾಗಿದೆ ಹಾಗು ೧೮ ಸಾವಿರ ರೂಪಾಯಿ ದಂಡ ಹಾಕಲಾಗಿದೆ.ಹೊರಗೆ ಬಂದವರ ಬೈಕ್ ಸೀಜ್ ಮಾಡಲಾಗುತ್ತದೆ- ಎಸ್.ಎಮ್.ಪಾಟೀಲ್ ಪಿಐ ಸುರಪುರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here