ಶಹಾಬಾದ:ನಗರದ ಎಸ್‌ಬಿಐ ಬ್ಯಾಂಕ್ ಬಂಗಾರದ ಮೇಲೆ ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಕೊಡಲಾಗುತ್ತಿದ್ದು, ಗ್ರಾಹಕರು ಯಾವುದೇ ಮಧ್ಯವರ್ತಿಗಳ ಸಹಾಯವಿಲ್ಲದೇ ನೇರವಾಗಿ ಬ್ಯಾಂಕ್ ಅಧಿಕಾರಿಯ ಮೂಲಕ ಪಡೆಯತಕ್ಕದ್ದು ಎಂದು ನಗರದ ಎಸ್‌ಬಿಐ ಬ್ಯಾಂಕ್ ವ್ಯವಸ್ಥಾಪಕ ವಿ.ನಾಗರಾಜ ತಿಳಿಸಿದ್ದಾರೆ.
ಅವರು ಶುಕ್ರವಾರ ನಗರದ ಎಸ್‌ಬಿಐ ಬ್ಯಾಂಕ್‌ನಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಈಗಾಗಲೇ ಕೋವಿಡ್-೧೯ ಹಾವಳಿಯಿಂದ ಆರ್ಥಿಕ ಪರಿಸ್ಥಿತಿ ಹದೆಗೆಟ್ಟು ಹೋಗಿದೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಸಾರ್ವಜನಿಕರಿಗೆ ಹಾಗೂ ಗ್ರಾಹಕರಿಗೆ ಬಂಗಾರದ ಮೇಲಿನ ಸಾಲಕ್ಕೆ ೬೦ರಿಂದ ೭೦ ಪೈಸೆಗೆ ನೀಡಲಾಗುತ್ತಿದೆ.ಅಲ್ಲದೇ ಸಂಬಳ ಮತ್ತು ಪಿಂಚಣಿ ಸಾಲವನ್ನು ಪಡೆಯಲು ಹಾಗೂ ಈಗಾಗಲೇ ಪಡೆದವರಿಗೂ ಹಣದ ಅವಶ್ಯಕತೆಯಿದ್ದರೇ ಅವರಿಗೂ ಸಾಲ ನೀಡುವ ಅವಕಾಶ ನೀಡಲಾಗುತ್ತಿದೆ. ಅದಕ್ಕಾಗಿ ಬ್ಯಾಂಕ್ ಅಧಿಕಾರಿ ಬಸವಪ್ರಭು ಅವರನ್ನು ಸಂಪರ್ಕಿಸಬಹುದು.ಅಲ್ಲದೇ ರೈತರ ಸಾಲಕ್ಕಾಗಿ ವಿನಯ ನಾಯಕ ಅವರನ್ನು ಹಾಗೂ ಬಂಗಾರದ ಸಾಲವನ್ನು ಪಡೆಯಲು ಶ್ರೀನಿಧಿ ಅವರನ್ನು ಸಂಪರ್ಕಿಸಿ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಬ್ಯಾಂಕ್ ವ್ಯವಸ್ಥಾಪಕನಾದ ನನ್ನನ್ನು ಬೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಕೋವಿಡ್-೧೯ ಮಾರ್ಗಸೂಚಿಗಳನ್ನು ಪಾಲಿಸುತ್ತಾ ಬ್ಯಾಂಕಿನ ವ್ಯವಹಾರಕ್ಕೆ ಸಹಕರಿಸಬೇಕು. ಅಲ್ಲದೇ ಯಾವತ್ತು ಎಸ್‌ಬಿಐ ಬ್ಯಾಂಕ್ ತಮ್ಮ ಜತೆ ಇದ್ದು, ತಮಗೆ ಸರಿಯಾದ ಮಾಹಿತಿ ನೀಡುವ ಮೂಲಕ ತಮಗೆ ಅನುಕೂಲ ಮಾಡಿಕೊಡಲಾಗುವುದು. ಬಂಗಾರದ ಮೇಲಿ ಸಾಲಕ್ಕೆ ಕಡಿಮೆ ಬಡ್ಡಿದರವಿದ್ದು ಅದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು.