ಶಹಾಬಾದ: ಮುಖ್ಯಮಂತ್ರಿ ಯಡಿಯೂರಪ್ಪನವರು ಆಟೋ ಚಾಲಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದು, ಆಟೋ ಚಾಲಕರು ತಮ್ಮ ದಾಖಲಾತಿಗಳನ್ನು ನಮ್ಮ ಸಿಟಿಜೆನ್ ಕ್ಲಬ್ ಸದಸ್ಯರಿಗೆ ನೀಡಿದರೆ ನಿಮ್ಮ ಎಲ್ಲಾ ದಾಖಲೆಗಳನ್ನು ಉಚಿತವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಹಾಕುವ ಕೆಲಸ ನಾವು ಮಾಡುತ್ತೆವೆ ಎಂದು ಸಿಟಿಜೆನ್ ಕ್ಲಬ್ ಸದಸ್ಯ ಮಹ್ಮದ್ ಅಜರ್ ಹೇಳಿದರು.
ಅವರು ನಗರದ ಸಹರಾ ಸಭಾಂಗಣದಲ್ಲಿ ಸಿಟಿಜೆನ್ ಕ್ಲಬ್ ಆಟೋಚಾಲಕರಿಗೆ ಆನ್‌ಲೈನ್‌ನಲ್ಲಿ ದಾಖಲೆ ತುಂಬುವ ಕುರಿತು ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಹಿಂದೆ ಕೋವಿಡ್-೧೯ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಆಟೋ ಚಾಲಕರಿಗೆ ೫ ಸಾವಿರ ರೂ. ನೀಡಿದ್ದರು. ಈ ಎರಡನೇ ಅಲೆಯಲ್ಲಿ ೩ ಸಾವಿರ ರೂ. ನೀಡಲಾಗುತ್ತಿದೆ.ಆದರೆ ಅಗತ್ಯ ದಾಖಲೆಗಳನ್ನು ಪಡೆದು ಆನ್‌ಲೈನ್‌ನಲ್ಲಿ ದಾಖಲೆ ತುಂಬುವ ಮಾಹಿತಿ ಗೊತ್ತಿರದೇ ಆಟೋ ಚಾಲಕರು ಪ್ಯಾಕೇಜ ಘೋಷಣೆಯಿಂದ ವಂಚಿತರಾಗುವಂತಾಗಿದೆ.ಆದ್ದರಿಂದ ಆಟೋ ಚಾಲಕರು ಚಾಲನಾ ಪರವಾನಗಿ, ಆಧಾರ ಕಾರ್ಡ, ಬ್ಯಾಂಕ್ ಪಾಸ್ ಬುಕ್, ಬ್ಯಾಂಕಿಗೆ ಲಿಂಕ್ ಮಾಡಿದ ಮೋಬೈಲ್ ನಂಬರ್ ಹಾಗೂ ಎರಡು ಫೋಟೋಗಳನ್ನು ನಮ್ಮ ಸದಸ್ಯರಿಗೆ ನೀಡಿದರೇ ಉಳಿದೆಲ್ಲಾ ಕೆಲಸವನ್ನು ಉಚಿತವಾಗಿ ನಾವೇ ಮಾಡುತ್ತೆವೆ.ಅದಕ್ಕಾಗಿ ಯಾವುದೇ ಹಣ ನೀಡಬೇಕಾಗಿಲ್ಲ. ಲಾಕ್‌ಡೌನ್ ಈ ಸಂದರ್ಭದಲ್ಲಿ ಸುಮಾರು ಹದಿನೈದು ದಿನಗಳಿಂದ ಹಸಿದವರಿಗೆ ಊಟದ ವ್ಯವಸ್ಥೆ ಮಾಡಿ ಅವರ ಸ್ಥಳಕ್ಕೆ ಹೋಗಿ ಪ್ಯಾಕೇಟುಗಳನ್ನು ಹಂಚುತ್ತಿದ್ದೆವೆ.ಇದೇ ರೀತಿ ಆಟೋ ಚಾಲಕರಿಗೆ ಅನುಕೂಲ ಮಾಡಿಕೊಡುವ ಮೂಲಕ ಸೇವೆಯಲ್ಲಿ ದೇವರನ್ನು ಕಾಣುತ್ತೆವೆ ಎಂದು ಹೇಳಿದರು.
ಯಾಸೀನ್ ಹುಸೇನ,ಮಹ್ಮದ್ ಇಶಾಕ್, ನೀರಜ ಶರ್ಮಾ,ಸುಭಾನ ಖಾನ, ಜಮೀರ ಬೇಗ ಇತರರು ಇದ್ದರು.