ಸಾಹಿತ್ಯ ಲೋಕದ ದಿಗ್ಗಜ ಪ್ರೊ. ವಸಂತ ಕುಷ್ಟಗಿ ಅಸ್ತಗಂತ

0
30

ಕಲಬುರಗಿ: ಕನ್ನಡ ಸಾಹಿತ್ಯ ಲೋಕದ, ಕಲ್ಯಾಣ ಕರ್ನಾಟಕದ, ಕರುನಾಡಿನ, ಮಾತೃಭಾಷೆಯ ಕರುಳು ಬಳ್ಳಿ, ಪ್ರಾಧ್ಯಾಪಕರು, ಲೇಖಕರು, ಸಾಹಿತಿಗಳು, ಭಾಷಾ ವಿದ್ವಾoಸರು, ಸಾಹಿತ್ಯ ಲೋಕದ ಮೇರು ಕಳಸ ಆಗಿದ್ದ ಪ್ರೊ. ವಸಂತ ಕುಷ್ಟಗಿ ಸರ್, ಬಾರದ ಲೋಕಕ್ಕೆ ಅಸ್ತಂಗತರಾಗಿದ್ದಾರೆ. ಅವರು ಲೋ ಬಿ.ಪಿ.ಯಿಂದ ನಿಧನರಾದರೆಂದು ಕುಟುಂಬದ ಮೂಲಗಳು ತಿಳಿಸಿವೆ.

ಕಲ್ಯಾಣ ಕರ್ನಾಟಕದ ಐತಿಹಾಸಿಕ ಶತಮಾನ ಕಂಡ ಪ್ರತಿಷ್ಠಿತ ನೂತನ ವಿದ್ಯಾಲಯದ ಕನ್ನಡ ಪ್ರಾಧ್ಯಾಪಕರು ಪ್ರಾಂಶುಪಾಲರಾಗಿ ತಮ್ಮ ಜ್ಞಾನದ ಜ್ಯೋತಿಯಿಂದ ಅಸಂಖ್ಯಾತ ವಿದ್ಯಾರ್ಥಿಗಳ ಬಾಳನ್ನು ಬೆಳಗಿಸಿ, ಶಿಕ್ಷಣ ಸಂಸ್ಥೆ ಯ ಕೀರ್ತಿಯನ್ನು ಕರುನಾಡಿನ ದಶದಿಕ್ಕುಗಳಿಗೂ ವ್ಯಾಪಿಸುವಂತೆ ಮಹಾನ್ ಆಡಳಿತಗಾರರಾಗಿ ಮನ್ನಣೆ ಪಡೆದುಕೊಂಡಿದ್ದರು.

Contact Your\'s Advertisement; 9902492681

1995ರಲ್ಲಿ ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯು, ಎಸ್. ಎಸ್.ಎಲ್. ಸಿ. ಪಠ್ಯಕ್ರಮ ಪರಿಸ್ಕರಣೆಗೊಂಡು,10ನೇ ತರಗತಿಯ ಪ್ರಥಮ ಭಾಷೆಯಾದ ಕನ್ನಡದ ಪದ್ಯಭಾಗದಲ್ಲಿ ಮೊದಲ ಪದ್ಯವೆ ಹಾರೈಕೆ ಈ ಕವಿತೆ ಮೂಲಕ ಕರುನಾಡಿನಾಧ್ಯoತ ಮನೆಮಾತಾಗಿದ್ದರು.

ಕನ್ನಡ ಸಾಹಿತ್ಯ ಲೋಕಕ್ಕೆ ಹಲವಾರು ಕಾವ್ಯ,ಹತ್ತಾರು ಲೇಖನಗಳು, ವಿಶೇಷವಾಗಿ ದಾಸಸಾಹಿತ್ಯದಲ್ಲಿ ಸಾಹಿತ್ಯ ಕೃಷಿಯನ್ನು ಮಾಡಿ ಸಾಹಿತ್ಯ ಲೋಕಕ್ಕೆ ವಿಶೇಷವಾದ ಕೊಡುಗೆಯನ್ನು ನೀಡಿರುವ ಕೀರ್ತಿ ಸರ್, ರವರಿಗೆ ಸಲ್ಲುತ್ತದೆ.

ಮಾನ್ಯ ಎನ್.ಧಮರ್ಸಿಂಗ್‌ ಅವರು‌ ಕರ್ನಾಟಕದ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಪ್ರೊ.ಕುಷ್ಟಗಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು.

ಕಲ್ಯಾಣ ಕರ್ನಾಟಕದ ಸಾಹಿತ್ಯ, ಐತಿಹಾಸಿಕ , ಹೋರಾಟಗಳು, ಚಾರಿತ್ರಿಕಘಟನೆಗಳ ಕುರಿತು ಅಪಾರವಾದ ಅನುಭವ ಜ್ಞಾನಗಳಿಂದ ಈ ಭಾಗದ ಹಿರಿಯ ಚೇತನರಾಗಿದ್ದ, ರವರು ದೈವಾಧೀನರಾಗಿದ್ದು, ಕನ್ನಡ ಸಾಹಿತ್ಯ ಲೋಕಕ್ಕು, ಕರುನಾಡಿಗೂ, ವಿಶೇಷವಾಗಿ ಕಲ್ಯಾಣ ಕರ್ನಾಟಕಕ್ಕೆ ತುಂಬಲಾರದ ನಷ್ಟವಾಗಿದ್ದು, ಭಗವಂತನು ದಿವ್ಯಾತ್ಮಕ್ಕೆ ಸದ್ಗತಿ ನೀಡಲಿ, ಕುಟುಂಬ ವರ್ಗಕ್ಕು, ಅಸಂಖ್ಯಾತ ಶಿಷ್ಯ ಬಳಗಕ್ಕೂ, ಅನುಯಾಯಿಗಳಿಗೂ, ಅಭಿಮಾನಿಗಳಿಗೂ, ಸಾಹಿತ್ಯಾಸಕ್ತರಿಗೂ ದುಃಖ ಸಹಿಸುವ ಶಕ್ತಿ ಭಗವಂತನು ನೀಡಲಿಯೆಂದು ಪ್ರಾರ್ಥಿಸುತ್ತಾ ಭಾವಪೂರ್ಣ ಶ್ರದ್ಧಾಂಜಲಿ
ನುಡಿ ನಮನಗಳ ಮೂಲಕ ಅರ್ಪಿಸುತ್ತೇವೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here