ಪಿಯುಸಿ ಉತ್ತೀರ್ಣಕ್ಕೆ ಎಐಡಿಎಸ್‍ಒ ಸ್ವಾಗತ

0
29

ವಾಡಿ: ಸಾಂಕ್ರಾಮಿಕ ರೋಗ ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಪಿಯುಸಿ ಪರೀಕ್ಷೆ ರದ್ದಾಗಬೇಕು ಎಂದು ಎಐಡಿಎಸ್‍ಒ ಗುರುವಾರ ಗೂಗಲ್ ಫಾರ್ಮ್ ಅನ್ನು ಬಿಡುಗಡೆ ಮಾಡಿತ್ತು. ಇದಕ್ಕೆ ಸುಮಾರು 15000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಹಿ ಹಾಕಿದ್ದರು. ಶೇ.86 ರಷ್ಟು ವಿದ್ಯಾರ್ಥಿಗಳು ಪರೀಕ್ಷೆ ರದ್ದಾಗಬೇಕು ಎಂದು ಅಭಿಪ್ರಾಯ ಸೂಚಿಸಿದ್ದರು.

ಎಚ್ಚೆತ್ತ ಸರಕಾರ ಗುರುವಾರ ಪರೀಕ್ಷೆ ರದ್ದುಗೊಳಿಸಿ ಆದೇಶ ಹೊರಡಿಸಿದ್ದು, ಇದು ವಿದ್ಯಾರ್ಥಿಗಳ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಆಲ್ ಇಂಡಿಯಾ ಡೆಮಾಕ್ರೇಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‍ಒ) ಅಧ್ಯಕ್ಷ ಗೌತಮ ಪರತೂರಕರ ಹಾಗೂ ಕಾರ್ಯದರ್ಶಿ ವೆಂಕಟೇಶ ದೇವದುರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಸರಕಾರದ ನಿರ್ಧಾರ ಸ್ವಾಗತಿಸಿ ಪತ್ರಿಕಾ ಹೇಳಿಕೆ ನೀಡಿರುವ ಅವರು ಸರಕಾರದ ಸಮಯೋಚಿತ ತೀರ್ಮಾನವು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಕಾಪಾಡುವ ಜತೆಗೆ ಪ್ರಾಣಕಂಟಕ ರೋಗದಿಂದ ಕಾಪಾಡಿದೆ. ವೈಜ್ಞಾನಿಕ ಮೌಲ್ಯ ಮಾಪನದ ಮೂಲಕ ಎಲ್ಲರನ್ನೂ ತೇರ್ಗಡೆಗೊಳಿಸಲು ತೀರ್ಮಾನಿಸಿರುವುದಲ್ಲದೆ ಇಚ್ಛೆಯುಳ್ಳ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅವಕಾಶ ನೀಡುವುದಾಗಿ ಹೇಳಿದ್ದಾರೆ.

ಹತ್ತನೇ ತರಗತಿ ಮೂಲ ವಿಷಯಗಳು ಸೇರಿ ಒಂದು ಪತ್ರಿಕೆ, ಭಾಷಾ ವಿಷಯಗಳು ಸೇರಿ ಒಂದು ಪತ್ರಿಕೆಯಾಗಿ, ಎರಡು ಪತ್ರಿಕೆಗಳಲ್ಲಿ ಬಹು ಆಯ್ಕೆ ಪ್ರಶ್ನೆಯ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ‘ಎ’ ಅಥವ ‘ಎ+’ ಶ್ರೇಣಿ ನೀಡಿ ಯಾರನ್ನೂ ಅನುತ್ತೀರ್ಣಗೊಳಿಸದೆ ಪರೀಕ್ಷೆ ನಡೆಸಲು ಸರಕಾರ ತೀರ್ಮಾನಿಸಿದೆ.

ಸರಕಾರ ಈ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣಪ್ರೇಮಿ ಜನತೆಯ ಹೋರಾಟ ಮಹತ್ವದ ಪಾತ್ರವಹಿಸಿದೆ. ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತ ರಾಜ್ಯದ ಜನತೆ ಮತ್ತು ಮಾಧ್ಯಮ ಮಿತ್ರರಿಗೆ ಎಐಡಿಎಸ್‍ಒ ನಾಯಕರು ಕ್ರಾಂತಿಕಾರಿ ಶುಭಾಶಯಗಳನ್ನು ತಿಳಿಸಿದ್ದಾರೆ.

ಅಲ್ಲದೆ ವಿದ್ಯಾರ್ಥಿಗಳ ರಾಜಿರಹಿತ ಹೋರಾಟವನ್ನು ಸದಾ ಬೆಂಬಲಿಸುವುದಾಗಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here