ಕಲಬುರಗಿ: ಇಂದು ಕಲಬುರ್ಗಿಯ ಸತ್ಯಂ ಪಿಯು ಕಾಲೇಜಿನ ಆವರಣದಲ್ಲಿ ನಾಡಿನ ಹಿರಿಯ ಸಾಹಿತಿಗಳಾದ ಪ್ರೊಫೆಸರ್ ವಸಂತ ಕುಷ್ಟಗಿ ಅವರು ನಿನ್ನೆ ಅಕಾಲಿಕ ನಿಧಾನವಾದರು ಅವರ ಅಕಾಲಿಕ ನಿಧನದಿಂದ ಕನ್ನಡ ಸಾಹಿತ್ಯ ಸೊರಗಿದೆ . ಪ್ರೊ. ವಸಂತ ಕುಷ್ಟಗಿ ಅವರು ನಾಡಿನಾದ್ಯಂತ ಚಿರಪರಿಚಿತರು ಸುಮಾರು ಅರವತ್ತು ಕೃತಿಗಳನ್ನು ರಚನೆ ಮಾಡಿದರು ಸಾಹಿತ್ಯದ ಕಥೆ ಕವನ .ದಾಸ ಸಾಹಿತ್ಯ .ಜೀವನಚರಿತ್ರೆ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಾಹಿತ್ಯವನ್ನು ರಚನೆ ಮಾಡಿ ಹೆಸರು ಮಾಡಿದಂತಹ ಅವರ ಸಾಹಿತ್ಯ ಸೇವೆಗೆ ಕರ್ನಾಟಕ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.
ಅಂತಹ ಮಹಾನ್ ವ್ಯಕ್ತಿ ಕಳೆದುಕೊಂಡಿದ್ದಕ್ಕೆ ದುಃಖವಾಗಿದೆ. ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತ . ಅವರ ನೆನಪಿನಲ್ಲಿ ವಿಶ್ವ ಪರಿಸರ ದಿನದ ನಿಮಿತ್ಯ ನಾವು ಗಿಡ ನೆಟ್ಟಿ ನೀರು ಉಣಿಸುವುದರ ಮೂಲಕ ಸ್ಮರಣೆ ಮಾಡಿದೆವು ಈ ಸಂದರ್ಭದಲ್ಲಿ ಲೇಖಕ ಬಿ ಎಚ್ ನಿರಗುಡಿ ಪ್ರಾಚಾರ್ಯರು ಸತ್ಯಂ ಪಿಯು ಕಾಲೇಜ್ ಕಲಬುರ್ಗಿ. ಸಿಎಸ್ ಮಾಲಿಪಾಟೀಲ್ ಅಧ್ಯಕ್ಷರು ಕಲಬುರ್ಗಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್. ಶರಣಗೌಡ ಪಾಳಾ . ಬಿಎಂ ರಾವುರ. ಹರ್ಷವರ್ಧನ್ ಸಂಕೇತ್ ಉಪಸ್ಥಿತಿ ಇದ್ದರು.