ಸುರಪುರ: ಈಗಾಗಲೆ ಸರಕಾರ ಹಿಂದುಳಿದ ಹೈದರಾಬಾದ ಕರ್ನಾಟಕ ಪ್ರದೇಶದ ಅಭೀವೃಧ್ಧಿಗಾಗಿ ಜಾರಿಗೊಳಿಸಿರುವ ಕಲಂ 371(ಜೆ) ಈ ಭಾಗದ ಆರ್ಥಿಕ,ಶೈಕ್ಷಣಿಕ ಮತ್ತು ಉದ್ಯೋಗದಲ್ಲಿನ ಮೀಸಲಾತಿಯ ವರದಾನವಾಗಿದೆ.ಇದರ ಅಡಿಯಲ್ಲಿಯೆ ಎಲ್ಲಾ ಇಲಾಖೆಗಳ ಹುದ್ದೆಗಳಿಗೆ ಮೀಸಲಾತಿ ಲಭಿಸುತ್ತದೆ.ಅದರಂತೆ ಪೊಲೀಸ್ ಇಲಾಖೆಗು ಇದನ್ನು ಪರಿಗಣಿಸುವಂತೆ ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವೆಂಕೋಬ ದೊರೆ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಸದ್ಯ ಜಿಲ್ಲೆಯಲ್ಲಿನ ಪೊಲೀಸ್ ಇಲಾಖೆಯಲ್ಲಿ ಬಡ್ತಿ ಪ್ರಕ್ರೀಯೆ ನಡೆಯುತ್ತಿದೆ ಎಂದು ತಿಳಿದು ಬಂದಿದ್ದು,ಇದರಲ್ಲಿ ಕಲಂ 371(ಜೆ) ಪ್ರಕಾರ ಹೈದರಾಬಾದ ಕರ್ನಾಟದ ಪ್ರದೇಶದ ನೌಕರರಿಗೆ ಶೇ ೮೦ ರಷ್ಟು ಬಡ್ತಿ ನೀಡಬೇಕು,ಹೈಕ ಪ್ರದೇಶದ ಹೊರಗಿನ ಜಿಲ್ಲೆಯಿಂದ ಬಂದ ನೌಕರರಿಗೆ ಶೇ ೨೦ ರಷ್ಟು ಪರಿಗಣಿಸಬೇಕು ಎಂಬ ನಿಯಮವಿದೆ.ಈ ನಿಯಮದಂತೆ ಪೊಲೀಸ್ ಇಲಾಖೆಯಲ್ಲಿನ ಬಡ್ತಿ ಸೇವೆಗೆ ಪರಿಗಣಿಸುವ ಮೂಲಕ ಈ ಪ್ರದೇಶದ ನೌಕರರಿಗೆ ನ್ಯಾಯ ವದಗಿಸಬೇಕೆಂದು ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರಿಕಾ ಹೇಳಿಕೆ ಮೂಲಕ ವಿನಂತಿಸಿಕೊಂಡಿದ್ದಾರೆ.